ಪ್ರೇಯಸಿಯನ್ನು ಖುಷಿಯಾಗಿಡಲು ಕಳ್ಳತನಕ್ಕಿಳಿದ ಗುಡಿಬಂಡೆಯ ಪ್ರಿಯಕರ ಪೊಲೀಸರ ಅತಿಥಿಯಾದ
ಪೊಲೀಸರು ಕರೆತಂದಿರುವ ಈ ಮನೆಯಿಂದ ನಾಗೇಂದ್ರ ₹ 3,000 ಲಪಟಾಯಿಸಿದ್ದನಂತೆ. ಮನೆ ಒಬ್ಬ ವಯಸ್ಸಾಗಿರುವ ಹಿರಿಯನಿಗೆ ಸೇರಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಜಿಲ್ಲೆಯ ಕೊರೋನಹಳ್ಳಿ ನಿವಾಸಿಯಾಗಿರುವ ನಾಗೇಂದ್ರ ಗುಡಿಬಂಡೆ, ಪರೇಸಂದ್ರ ಮತ್ತು ಚೇಳೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿದ್ದಾನೆ. ಅವನು ಎಲ್ಲಾದರು ಕೆಲಸ ಮಾಡಿ ಹಣ ಸಂಪಾದಿಸಿ ಪ್ರೇಯಸಿಯನ್ನು ಸಂತೋಷವಾಗಿಡುವ ಪ್ರಯತ್ನ ಮಾಡಿದ್ದರೆ ಇದೆಲ್ಲ ನಡೆಯುತ್ತಿರಲಿಲ್ಲ.
ಚಿಕ್ಕಬಳ್ಳಾಪುರ: Everything is fair in love and war ಅಂತ ಇಂಗ್ಲಿಷ್ನಲ್ಲಿ ಗಾದೆಯೊಂದಿದೆ. ಜಿಲ್ಲೆಯ ಗುಡಿಬಂಡೆ ಪೊಲೀಸರ ವಶದಲ್ಲಿರುವ ಕೆಎಸ್ ನಾಗೇಂದ್ರ ಹೆಸರಿನ ಯುವಕನಿಗೆ ನೌಕರಿಯಂತೂ ಇರಲಿಲ್ಲ, ಆದರೆ ಪ್ರಿಯತಮೆ ಇದ್ದಾಳೆ, ಅದೂ ಒಬ್ಬ ಅಪ್ರಾಪ್ತೆ. ಆಕೆಯ ಬೇಡಿಕೆಗಳು ಹೆಚ್ಚಿದ್ದವೋ ಅಥವಾ ಆಕೆಯನ್ನು ಸಂತೋಷವಾಗಿಡಲು ನಾಗೇಂದ್ರ ಅಡ್ಡದಾರಿ ಹಿಡಿದನೋ ಗೊತ್ತಾಗಿಲ್ಲ. ವಿಷಯವೇನೆಂದರೆ, ಪ್ರಿಯತಮೆಗಾಗಿ ಕಳ್ಳತನ ಮಾಡಲು ಶುರುಮಾಡಿದ ನಾಗೇಂದ್ರ ಈಗ ಪೊಲೀಸರ ಅತಿಥಿ. ಬೇರೆ ಬೇರೆ ಗ್ರಾಮಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಕಡೆ ಕಳುವು ನಡೆಸಿ ಸಿಕ್ಕಿಬಿದ್ದಿದ್ದಾನೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರು ಚೋಳೂರುಪಾಳ್ಯದಲ್ಲಿ ನಾಲ್ಕು ಅಂಗಡಿಗಳ ಸರಣಿ ಕಳ್ಳತನ, ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆ