ಸಿದ್ದರಾಮಯ್ಯ ಸರ್ಕಾರ ಅಶಾಂತಿ ಸೃಷ್ಟಿಸುತ್ತಿದೆ, ಹನುಮನ ತಡವಿಕೊಂಡವರಿಗೆ ಉಳಿಗಾಲವಿಲ್ಲ: ಜನಾರ್ಧನ ರೆಡ್ಡಿ

|

Updated on: Jan 29, 2024 | 1:55 PM

ಗ್ರಾಮದ ಪ್ರತಿಯೊಬ್ಬ ನಿವಾಸಿ ನೊಂದುಕೊಂಡಿದ್ದಾನೆ ಮತ್ತು ದುಃಖಿತನಾಗಿದ್ದಾನೆ, ಹಾಗಾಗಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನರೇ ಇಲ್ಲಿಗೆ ಬಂದು ಹನುಮ ಧ್ವಜ ಹಾರಿಸಿ ಗ್ರಾಮಸ್ಥರಿಗೆ ಆಗಿರುವ ನೋವನ್ನು ಉಪಶಮನ ಮಾಡಬೇಕು ಅಂತ ಹನುಮ ಹುಟ್ಟಿದ ನಾಡಿನಿಂದ ಬಂದಿರುವ ತಾನು ಆಗ್ರಹಿಸುವುದಾಗಿ ಜನಾರ್ಧನ ರೆಡ್ಡಿ ಹೇಳಿದರು.

ಮಂಡ್ಯ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಇಂದು ಜಿಲ್ಲೆಯ ಕೆರಗೋಡು ಗ್ರಾಮಕ್ಕೆ ಭೇಟಿ ನೀಡಿ ಹನುಮ ದ್ವಜ (Hanuma flag) ತೆರವುಗೊಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಅಲ್ಲಿನ ನಿವಾಸಿಗಳ ದೂರು ದುಮ್ಮಾನಗಳನ್ನು ಆಲಿಸಿದರು. ಮಂಡ್ಯದ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಅವರು, ಗ್ರಾಮದ ಎಲ್ಲ ಧರ್ಮ, ಜಾತಿ ಮತ್ತು ವರ್ಗಗಳ ಜನ ಸೇರಿ ಇಲ್ಲಿ ಧ್ವಜಸ್ತಂಭ (flag post) ನಿರ್ಮಿಸಿದ್ದಾರೆ ಮತ್ತು ಕಳೆದ 30-40 ವರ್ಷಗಳಿಂದ ಅವರೆಲ್ಲ ಒಂದಾಗಿ ಹನುಮ ಧ್ಜಜವನ್ನು ಹಾರಿಸುತ್ತಾ ಬಂದಿದ್ದಾರೆ, ಜನರ ನಡುವೆ ಯಾವ ಸಮಸ್ಯೆಯೂ ಇರಲಿಲ್ಲ. ಅದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೆರಗೋಡುನಲ್ಲಿ ಅಶಾಂತಿ ಉಂಟಾಗುವ ಸನ್ನಿವೇಶ ಸೃಷ್ಟಿಸಿದೆ ಎಂದು ಹೇಳಿದರು.

ನಡೆದ ಘಟನೆಯಿಂದ ಗ್ರಾಮದ ಪ್ರತಿಯೊಬ್ಬ ನಿವಾಸಿ ನೊಂದುಕೊಂಡಿದ್ದಾನೆ ಮತ್ತು ದುಃಖಿತನಾಗಿದ್ದಾನೆ, ಹಾಗಾಗಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನರೇ ಇಲ್ಲಿಗೆ ಬಂದು ಹನುಮ ಧ್ವಜ ಹಾರಿಸಿ ಗ್ರಾಮಸ್ಥರಿಗೆ ಆಗಿರುವ ನೋವನ್ನು ಉಪಶಮನ ಮಾಡಬೇಕು ಅಂತ ಹನುಮ ಹುಟ್ಟಿದ ನಾಡಿನಿಂದ ಬಂದಿರುವ ತಾನು ಆಗ್ರಹಿಸುವುದಾಗಿ ಜನಾರ್ಧನ ರೆಡ್ಡಿ ಹೇಳಿದರು. ಹನುಮನನ್ನು ಎದುರು ಹಾಕಿಕೊಂಡವರಿಗೆ ಉಳಿಗಾಲವಿಲ್ಲ, ಅತನ ಬಾಲಕ್ಕೆ ಬೆಂಕಿ ಹಚ್ಚಿದ ರಾವಣನ ಲಂಕೆಯೇ ಸುಟ್ಟು ಭಸ್ಮವಾಯಿತು, ಸಿದ್ದರಾಮಯ್ಯ ಸರ್ಕಾರ ತಾನು ಮಾಡಿರುವ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಬೇಕು ಎಂದು ರೆಡ್ಡಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ