ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿಕೊಳ್ಳಲು ದೆಹಲಿಗೆ ಹೋಗಿದ್ದ ಸಿದ್ದರಾಮಯ್ಯ ವಾಪಸ್ಸು

ಅಭ್ಯರ್ಥಿಗಳ ಆಯ್ಕೆ ಕೈಕಮಾಂಡ್ ಗೂ ಕಠಿಣ ಸವಾಲಾಗಿದೆ ಯಾಕೆಂದರೆ ವಿಧಾನ ಪರಿಷತ್ ನ 7 ಸ್ಥಾನಗಳಿಗೆ ಸುಮಾರು 300 ಕಾಂಗ್ರೆಸ್ ಮುಖಂಡರು ಆಕಾಂಕ್ಷಿಗಳಾಗಿದ್ದಾರೆ. ರಾಷ್ಟ್ರದ ರಾಜಧಾನಿಯಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಜೊತೆಯಾಗಿ ಓಡಾಡಿದರು. ಇವತ್ತು ಬರುವಾಗ ಕರ್ನಾಟಕ ಭವನದಿಂದ ವಿಮಾನ ನಿಲ್ದಾಣದ ಕಡೆ ಹೊರಟ ಕಾರಲ್ಲಿ ಸಿದ್ದರಾಮಯ್ಯ ಮಾತ್ರ ಕಾಣಿಸುತ್ತಾರೆ.

ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿಕೊಳ್ಳಲು ದೆಹಲಿಗೆ ಹೋಗಿದ್ದ ಸಿದ್ದರಾಮಯ್ಯ ವಾಪಸ್ಸು
|

Updated on: May 30, 2024 | 3:00 PM

ದೆಹಲಿ: ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ವರಿಷ್ಠರಿಂದ ಫೈನಲ್ ಮಾಡಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ದೆಹಲಿಗೆ ಆಗಮಿಸಿದ್ದನ್ನು ನಾವು ನಿನ್ನೆ ವರದಿ ಮಾಡಿದ್ದೇವೆ. ನಿನ್ನೆ ಸಾಯಂಕಾಲ ಅವರಿಬ್ಬರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ (Randeep Surjewala) ಅವರ ನಿವಾಸದಲ್ಲಿ ಕಾಣಿಸಿಕೊಂಡಿದ್ದರು. ಅಭ್ಯರ್ಥಿಗಳ ಆಯ್ಕೆ ಕೈಕಮಾಂಡ್ ಗೂ ಕಠಿಣ ಸವಾಲಾಗಿದೆ ಯಾಕೆಂದರೆ ವಿಧಾನ ಪರಿಷತ್ ನ 7 ಸ್ಥಾನಗಳಿಗೆ ಸುಮಾರು 300 ಕಾಂಗ್ರೆಸ್ ಮುಖಂಡರು ಆಕಾಂಕ್ಷಿಗಳಾಗಿದ್ದಾರೆ. ರಾಷ್ಟ್ರದ ರಾಜಧಾನಿಯಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಜೊತೆಯಾಗಿ ಓಡಾಡಿದರು. ಇವತ್ತು ಬರುವಾಗ ಕರ್ನಾಟಕ ಭವನದಿಂದ ವಿಮಾನ ನಿಲ್ದಾಣದ ಕಡೆ ಹೊರಟ ಕಾರಲ್ಲಿ ಸಿದ್ದರಾಮಯ್ಯ ಮಾತ್ರ ಕಾಣಿಸುತ್ತಾರೆ. ಶಿವಕುಮಾರ್ ಬೇರೆ ಕಾರಲ್ಲಿದ್ದಿರಬಹುದು. ನಮ್ಮ ದೆಹಲಿ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಮುಖ್ಯಮಂತ್ರಿಯವರ ಜೊತೆ ಸಾರಿಗೆ ಸಚಿವ ರಾಲಿಂಗಾರೆಡ್ಡಿ ಇದ್ದರು. ನಿನ್ನೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಜೊತೆ ಸುರ್ಜೆವಾಲಾ ಮನೆಯಂಗಳದಲ್ಲಿ ಕಾಣಿಸಿದ್ದ ಭೈರತಿ ಸುರೇಶ್ ಮುಖ್ಯಮಂತ್ರಿಯವರ ಕಾರಲ್ಲಿ ಕಾಣಿಸಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕುಮಾರಸ್ವಾಮಿಯವರು ರಾಕೇಶ್ ಸಿದ್ದರಾಮಯ್ಯ ಎಳೆತಂದಿದ್ದು ಮೂರ್ಖತನ: ಸಿದ್ದರಾಮಯ್ಯ

Follow us
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!
ಮಾರುಕಟ್ಟೆಗೆ ಬಂತು ವಿಶೇಷ 3D ಶೂ, ಹೇಗಿದೆ ನೋಡಿ
ಮಾರುಕಟ್ಟೆಗೆ ಬಂತು ವಿಶೇಷ 3D ಶೂ, ಹೇಗಿದೆ ನೋಡಿ