ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಗ್ಗೆ ಬಹಳ ಗೌರವವಿತ್ತು, ಈಗಿಲ್ಲ: ಮಧು ಬಂಗಾರಪ್ಪ, ಶಿಕ್ಷಣ ಸಚಿವ

ಸ್ವಾಮಿ ಶಿಕ್ಷಣ ಸಚಿವರೇ, ಪರೀಕ್ಷೆಗಳಲ್ಲಿ ಕಾಪಿ ಹೊಡೆಯುವ ಮಕ್ಕಳು, ಱಂಕ್ ಗಿಟ್ಟಿಸಲ್ಲ, ಹೆಚ್ಚೆಂದರೆ ಪ್ರಥಮ ದರ್ಜೆಯಲ್ಲಿ ಪಾಸಾಗುತ್ತಾರೆ, ಅಷ್ಟೇ! ಶಿಕ್ಷಕರ ನೇಮಕಾತಿ ವಿಷಯದಲ್ಲಿ ಮಾತಾಡುವ ಮಧು ಬಂಗಾರಪ್ಪ ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಟೀಕಿಸುತ್ತಾರೆ.

ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಗ್ಗೆ ಬಹಳ ಗೌರವವಿತ್ತು, ಈಗಿಲ್ಲ: ಮಧು ಬಂಗಾರಪ್ಪ, ಶಿಕ್ಷಣ ಸಚಿವ
|

Updated on:May 30, 2024 | 2:25 PM

ಶಿವಮೊಗ್ಗ: ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa), ತಾನು ಶಿಕ್ಷಣ ಸಚಿವನಾದ ಬಳಿಕ ಶಿಕ್ಷಣದ ಗುಣಮಟ್ಟ ಕುಸಿದಿಲ್ಲ ಆದರೆ ಸುಧಾರಿಸಿದೆ ಎಂದು ತಮ್ಮನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರನ್ನು (BJP leaders) ತರಾಟೆಗೆ ತೆಗೆದುಕೊಂಡರು. ಹೇಳಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು 625/625 ಪಡೆಯುತ್ತಿದ್ದರು, ಆದರೆ ಈ ಬಾರಿ (SSLC exams) ಒಬ್ಬ ವಿದ್ಯಾರ್ಥಿನಿ ಮಾತ್ರ ಶತ ಪ್ರತಿಶತ ಅಂಕ ಪಡೆದಿದ್ದಾಳೆ, ಇದಕ್ಕೆ ಕಾರಣವೆಂದರೆ ನಾವು ಪರೀಕ್ಷೆಗಳಲ್ಲಿ ಕಾಪಿ ಮಾಡುವುದನ್ನು ನಿಲ್ಲಿಸಿದ್ದೇವೆ ಎಂದು ಹೇಳಿದರು. ಸ್ವಾಮಿ ಶಿಕ್ಷಣ ಸಚಿವರೇ, ಪರೀಕ್ಷೆಗಳಲ್ಲಿ ಕಾಪಿ ಹೊಡೆಯುವ ಮಕ್ಕಳು, ಱಂಕ್ ಗಿಟ್ಟಿಸಲ್ಲ, ಹೆಚ್ಚೆಂದರೆ ಪ್ರಥಮ ದರ್ಜೆಯಲ್ಲಿ ಪಾಸಾಗುತ್ತಾರೆ, ಅಷ್ಟೇ! ಶಿಕ್ಷಕರ ನೇಮಕಾತಿ ವಿಷಯದಲ್ಲಿ ಮಾತಾಡುವ ಮಧು ಬಂಗಾರಪ್ಪ ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಟೀಕಿಸುತ್ತಾರೆ.

ಅವರ ಅವಧಿಯಲ್ಲಿ ಒಮ್ಮೆ 1,994 ಮತ್ತೊಮ್ಮೆ 1,185-ಹೀಗೆ ಸುಮಾರು 3,100 ಶಿಕ್ಷಕರ ನೇಮಕಾತಿ ಮಾತ್ರ ಆಗಿದೆ ಎನ್ನುತ್ತಾರೆ. 2017-18 ರ (ಕಾಂಗ್ರೆಸ್ ಸರ್ಕಾರ) ಅಂಕಿ-ಅಂಶ ನೀಡಿ ಕೇವಲ 1,727 ಶಿಕ್ಷಕರ ನೇಮಕಾತಿ ಮಾತ್ರ ಆಗಿತ್ತು ಎನ್ನುತ್ತಾರೆ. ತಾನು ಶಿಕ್ಷಣ ಸಚಿವನಾಗಿ ಒಂದು ವರ್ಷ ಮಾತ್ರ ಆಗಿದೆ, ಆದರೆ ಈ ಅವಧಿಯಲ್ಲಿ 13,000 ಶಿಕ್ಷಕರ ನೇಮಕಾತಿ ಜರುಗಿದೆ, ರಾಜ್ಯದಲ್ಲಿ ಇನ್ನೂ 43,000ಹುದ್ದೆಗಳು ಖಾಲಿ ಇವೆ, ಮುಖ್ಯಮಂತ್ರಿಗಳ ಒಪ್ಪಿಗೆ ಪಡೆದು ಅವುಗಳನ್ನು ಸಹ ಆದಷ್ಟು ಶೀಘ್ರ ಭರ್ತಿ ಮಾಡುವುದಾಗಿ ಸಚಿವ ಹೇಳಿದರು. ಹಿಂದಿನ ಸರ್ಕಾರದಲ್ಲಿ ನಡೆದ ಹೊಲಸನ್ನೆಲ್ಲ ತಾನು ಸ್ವಚ್ಛ ಮಾಡುತ್ತಿರುವುದಾಗಿ ಮಧು ಬಂಗಾರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಚಿವ ಮಧು ಬಂಗಾರಪ್ಪಗೆ ಶಿಕ್ಷಣ ಸಚಿವರಾಗಿ ಬೇಕಿರೋ ಮೌಲ್ಯ ಕಡಿಮೆ ಇದೆ ಎಂದ ಪಿ ರಾಜೀವ್

Published On - 2:21 pm, Thu, 30 May 24

Follow us
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!
ಮಾರುಕಟ್ಟೆಗೆ ಬಂತು ವಿಶೇಷ 3D ಶೂ, ಹೇಗಿದೆ ನೋಡಿ
ಮಾರುಕಟ್ಟೆಗೆ ಬಂತು ವಿಶೇಷ 3D ಶೂ, ಹೇಗಿದೆ ನೋಡಿ