ಸಚಿವ ಮಧು ಬಂಗಾರಪ್ಪಗೆ ಶಿಕ್ಷಣ ಸಚಿವರಾಗಿ ಬೇಕಿರೋ ಮೌಲ್ಯ ಕಡಿಮೆ ಇದೆ ಎಂದ ಪಿ ರಾಜೀವ್

ಮಧು ಬಂಗಾರಪ್ಪನವರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದಾಗಿನಿಂದ NEP ರದ್ದು ಮಾಡಿ SEP ತರ್ತೀನಿ ಎನ್ನುವುದೇ ಹೆಚ್ಚಾಗಿದೆ. 5, 8,9 ನೇ ತರಗತಿಗಳಿಗೆ ಸಂಕಲನಾತ್ಮಕ ಪರೀಕ್ಷೆ ನಡೆಸುತ್ತೇವೆ, ಪ್ರಶ್ನೆ ಪತ್ರಿಕೆ ನಾವು ತರ್ತೀವಿ, ಉತ್ತರ ಪತ್ರಿಕೆ ಮಕ್ಕಳೇ ತರಬೇಕು ಎಂದು ಹೇಳಿದ್ದರು. ಅದರ ಯಾವುದೇ ಮಾಹಿತಿ ಶಾಲಾಡಳಿತ ಮಂಡಳಿಗೆ ನೀಡಿಲ್ಲ. ಶಿಕ್ಷಣ ಸಚಿವರಾದವರಿಗೆ ಸ್ಪಷ್ಟತೆ ಇರಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್(P Rajeev) ಕಿಡಿಕಾರಿದ್ದಾರೆ.

ಸಚಿವ ಮಧು ಬಂಗಾರಪ್ಪಗೆ ಶಿಕ್ಷಣ ಸಚಿವರಾಗಿ ಬೇಕಿರೋ ಮೌಲ್ಯ ಕಡಿಮೆ ಇದೆ ಎಂದ ಪಿ ರಾಜೀವ್
ಮಧು ಬಂಗಾರಪ್ಪ ವಿರುದ್ದ ಕಿಡಿಕಾರಿದ ಪಿ ರಾಜೀವ್​
Follow us
Sunil MH
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 09, 2024 | 7:05 PM

ಬೆಂಗಳೂರು, ಮಾ.09: ರಾಜ್ಯದಲ್ಲಿ ಶಿಕ್ಷಣ ಇಲಾಖೆ ದೊಡ್ಡ ಗೊಂದಲ ಗೂಡಾಗಿದೆ. ಕರ್ನಾಟಕದ ಶಾಲಾ ಶಿಕ್ಷಕರು, ಪೋಷಕರು ಗೊಂದಲಕ್ಕೀಡಾಗಿದ್ದು, ಇದಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ(Madhu Bangarappa) ಅವರ ಕಾರ್ಯವೈಖರಿ ಕಾರಣವಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್(P Rajeev) ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ಮಧು ಬಂಗಾರಪ್ಪ ಅವರು ಶಿಕ್ಷಣ, ಪಠ್ಯದ ಬಗ್ಗೆ ಹೇಳಿಕೆ ನೀಡಿದ್ದು ಕಡಿಮೆಯಾಗಿದೆ. ಬಹುತೇಕ ರಾಜಕೀಯ ವಿಚಾರವಾಗಿಯೇ ಹೇಳಿಕೆಯನ್ನ ಹೆಚ್ಚು ನೀಡಿದ್ದಾರೆ ಎಂದು ಟಾಂಗ್​ ಕೊಟ್ಟಿದ್ದಾರೆ.

ಶಿಕ್ಷಣ ಸಚಿವರಾಗಿ ಬೇಕಿರೋ ಮೌಲ್ಯ ಅವರಲ್ಲಿ ಕಡಿಮೆ ಇದೆ

ಇವರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದಾಗಿನಿಂದ NEP ರದ್ದು ಮಾಡಿ SEP ತರ್ತೀನಿ ಎನ್ನುವುದೇ  ಹೆಚ್ಚಾಗಿದೆ. 5, 8,9 ನೇ ತರಗತಿಗಳಿಗೆ ಸಂಕಲನಾತ್ಮಕ ಪರೀಕ್ಷೆ ನಡೆಸುತ್ತೇವೆ, ಪ್ರಶ್ನೆ ಪತ್ರಿಕೆ ನಾವು ತರ್ತೀವಿ, ಉತ್ತರ ಪತ್ರಿಕೆ ಮಕ್ಕಳೇ ತರಬೇಕು ಎಂದು ಹೇಳಿದ್ದರು. ಅದರ ಯಾವುದೇ ಮಾಹಿತಿ ಶಾಲಾಡಳಿತ ಮಂಡಳಿಗೆ ನೀಡಿಲ್ಲ. ನಾಲ್ಕು ಪೇಜಿಗೆ ಒಂದು ರೂಪಾಯಿ ಹಣ ಪಡೆಯಿರಿ, ಪ್ರಶ್ನೆ ಪತ್ರಿಕೆ ನಾವೇ ಕೊಡುತ್ತೇವೆ ಎಂದರು, ಅಂದ್ರೆ ಶಿಕ್ಷಣ ಇಲಾಖೆ ಯಾವೆಲ್ಲಾ ನಿರ್ಧಾರ ತೆಗೆದುಕೊಳ್ಳಬೇಕು. ಅದನ್ನ ತೆಗೆದುಕೊಳ್ಳದೆ ಗೊಂದಲಕ್ಕೆ ಕಾರಣವಾಗಿದೆ. ಇದನ್ನೇಲ್ಲ ನೋಡುತ್ತಿದ್ದರೆ, ಶಿಕ್ಷಣ ಸಚಿವರಾಗಿ ಬೇಕಿರೋ ಮೌಲ್ಯ ಅವರಲ್ಲಿ ಕಡಿಮೆ ಇದೆ ಎಂದು ಟಾಂಗ್​ ಕೊಟ್ಟಿದ್ದಾರೆ.

ಇದನ್ನೂ ಓದಿ:ಯತ್ನಾಳ್​ಗೆ ಮಾಡಲು ಕೆಲಸ ಇಲ್ಲ, ಬಸ್ ನಿಲ್ದಾಣದಲ್ಲಿ ಕುಳಿತು ಜ್ಯೋತಿಷ್ಯ ಹೇಳಲಿ -ಮಧು ಬಂಗಾರಪ್ಪ

ಸಚಿವರಾದವರಿಗೆ ಸ್ಪಷ್ಟತೆ ಇರಬೇಕು

ಸರ್ಕಾರ ಯಾವ ರೀತಿ ಪರೀಕ್ಷೆ ನಡೆಸುತ್ತದೆ, ನಾಲ್ಕು ಪೇಜಿಗೆ ಒಂದು ರೂಪಾಯಿಯನ್ನ ಮಂಡಳಿ ಹಣ ಕೊಡಲಿದೆ ಅಂತಿದೆ. ಪ್ರಶ್ನೆ ಪತ್ರಿಕೆ ಕೊಡಬೇಕು ಅಂತಿದೆ. ಪೋಷಕರು ಯಾವ ನಂಬಿಕೆ ಇಟ್ಟು ಪರೀಕ್ಷೆಗೆ ಕಳಿಸಬೇಕು ಅನ್ನೋದನ್ನ ತಕ್ಷಣವೇ ಗೊಂದಲ ನಿವಾರಣೆ ಮಾಡಬೇಕು. ಅದರಲ್ಲೂ ಶಿಕ್ಷಣ ಸಚಿವರಾದವರಿಗೆ ಸ್ಪಷ್ಟತೆ ಇರಬೇಕು. ಇಂತಹ ನಿರ್ಧಾರವನ್ನ ಶೈಕ್ಷಣಿಕವಾಗಿ ತೆಗೆದುಕೊಳ್ಳಬೇಕು ಅಂದಾಗ ಎಕ್ಸ್‌ಪರ್ಟ್ ಬಳಿ ತೆಗೆದುಕೊಳ್ಳಬೇಕು. ಮಕ್ಕಳ ಜೀವನದಲ್ಲಿ ಸಚಿವರು ಚೆಲ್ಲಾಟ ಆಡಬಾರದು ಎಂದು ಆಗ್ರಹಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ