Kannada News Photo gallery Doddaballapur Passion show of Hallikar bulls as part of Shivratri Here is a glimpse
ಶಿವರಾತ್ರಿ ಅಂಗವಾಗಿ ಹಳ್ಳಿಕಾರ್ ರಾಸುಗಳ ಪ್ಯಾಷನ್ ಶೋ; ಇಲ್ಲಿದೆ ಝಲಕ್
ಸಾಮಾನ್ಯವಾಗಿ ಲೇಡಿಸ್ ಮಸ್ತ್ ಫ್ಯಾಷನ್ ಶೋ, ಲಲನೆಯರ ಕ್ಯಾಟ್ ವಾಕ್ ಸ್ಪರ್ಧೆಗಳನ್ನ ಕಣ್ತುಂಬಿಕೊಂಡಿದ್ದೇವೆ. ಆದರೆ, ಇಲ್ಲೊಂದು ಕಡೆ ಹಳ್ಳಿಕಾರ್ ರಾಸುಗಳ ಫ್ಯಾಷನ್ ಶೋ ಭರ್ಜರಿಯಾಗಿ ನಡೆದಿದೆ. ಇನ್ನು ಈ ರಾಸುಗಳ ಪ್ಯಾಷನ್ ಶೋದಲ್ಲಿ ಕಣ್ಮನ ಸೆಳೆಯುವಂತಹ ವಿಜೃಂಭಣೆಯಿಂದ ಕಂಗೊಳಿಸುತ್ತಿರುವ ರಾಸುಗಳು ಕಣ್ಮನ ಸೆಳೆದಿದೆ.
ಶಿವರಾತ್ರಿ ಹಬ್ಬ ಎಂದರೆ ಸಾಕು ಎಲ್ಲರೂ ದೇವಾಲಯಗಳಿಗೆ ಹೋಗಿ ಪೂಜೆ ಪುನಸ್ಕಾರ ಹಾಗೂ ರಾತ್ರಿ ಜಾಗರಣೆ ಮಾಡುವುದು ಸರ್ವೇ ಸಾಮಾನ್ಯ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯಲ್ಲಿ ಹಳ್ಳಿಕಾರ್ ರಾಸುಗಳ ಫ್ಯಾಶನ್ ಶೋವನ್ನ ಭರ್ಜರಿಯಾಗಿ ಆಯೋಜನೆ ಮಾಡಲಾಗಿತ್ತು.
1 / 6
ನವಕರ್ನಾಟಕ ಯುವಶಕ್ತಿ ವತಿಯಿಂದ ಏರ್ಪಡಿಸಿದ್ದ ಈ ಸೌಂದರ್ಯ ರಾಸುಗಳ ಸ್ಪರ್ಧೆಗೆ ರಾಜ್ಯದ ಮೂಲೆಮೂಲೆಯಿಂದ ಸುಮಾರು 200 ಕ್ಕೂ ಹೆಚ್ಚು ಹಳ್ಳಿಕಾರ್ ರಾಸುಗಳು ಭಾಗಿಯಾಗಿದ್ದವು. ಜೊತೆಗೆ ರಾಸುಗಳ ಫ್ಯಾಶನ್ ಶೋ ವೇಳೆಯಲ್ಲಿ ನೆರೆದಿದ್ದ ಜನ ರಾಸುಗಳ ವಾಕಿಂಗ್ ನೋಡಿ ಶಿಳ್ಳೆ ಹೊಡೆದು ಸಂಭ್ರಮಿಸಿದ್ದು ವಿಶೇಷ.
2 / 6
ಇನ್ನು ಈ ಕಾರ್ಯಕ್ರಮದಲ್ಲಿ ಹಳ್ಳಿಕಾರ್ ಪ್ಯಾಶನ್ ಶೋ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಬಂದಿದ್ದ ರಾಸುಗಳು ವಿವಿಧ ಹೂವುಗಳಿಂದ ಅಲಂಕಾರಕೊಂಡು ಕಂಗೊಳಿಸುತ್ತಿದ್ದವು.
3 / 6
ಕೆಲ ರೈತರು ವಿಶೇಷವಾಗಿ ರಾಸುಗಳನ್ನ ಸಿಂಗರಿಸಿ ಕ್ಯಾಟ್ ವಾಕ್ ಮಾಡಿಸುತ್ತಿದ್ರೆ, ಶಿವರಾತ್ರಿ ಜಾಗರಾಣೆಯಲ್ಲಿದ್ದ ಜನ ಶಿಳ್ಳೆ ಹೊಡೆದು ಪ್ರೋತ್ಸಾಹಿಸಿ ಮಸ್ತ್ ಖುಷಿಪಟ್ಟರು. ಜೊತೆಗೆ ಮಂಡ್ಯ, ಮದ್ದೂರು, ರಾಯಚೂರು ಭಾಗದಿಂದಲೂ ಹಳ್ಳಿಕಾರ್ ರಾಸುಗಳು ಪ್ಯಾಶನ್ ಶೋದಲ್ಲಿ ಭಾಗವಹಿಸಿದ್ದು ವಿಶೇಷ.
4 / 6
ಹಾಗೆಯೇ ಹಳ್ಳಿಕಾರ್ ವಿಶೇಷ ತಳಿ ಆದ್ದರಿಂದ ಅಲ್ಲಿ ನೆರೆದಿದ್ದ ಜನರು ರಾಸುಗಳ ಬಳಿ ಹೋಗಿ ಖುಷಿಯಿಂದ ಸೆಲ್ಪಿ ಫೋಟೋಗಳನ್ನು ಕೂಡ ಕ್ಲಿಕ್ಕಿಸಿಕೊಂಡ್ರು. ಇನ್ನೂ ಉತ್ತಮವಾಗಿ ಪ್ಯಾಶನ್ ಶೋ ಮಾಡಿದ ರಾಸುಗಳ ರೈತರಿಗೆ ಮೊದಲ ಬಹುಮಾನವಾಗಿ 10 ಸಾವಿರ, ಎರಡನೇ ಬಹುಮಾನ 8 ಸಾವಿರದಂತೆ ಬಂದಿದ್ದ ಎಲ್ಲಾ ಹಳ್ಳಿಕಾರ್ ರಾಸುಗಳಿಗೆ ಸಮಾಧಾನಕರ ಬಹುಮಾನ ನೀಡಲಾಯ್ತು.
5 / 6
ಒಟ್ಟಾರೆ ಗ್ರಾಮೀಣ ಭಾಗದಲ್ಲಿ ಹಳ್ಳಿಕಾರ್ ಫ್ಯಾಷನ್ ಶೋ ನಂತಹ ಕಾರ್ಯಕ್ರಮಗಳು ನಡೆಯುವುದು ಬಹಳ ಅಪರೂಪ. ಹೀಗಾಗಿ ಹಳ್ಳಿಕಾರ್ ರೈತರನ್ನು ಹಾಗೂ ಹಳ್ಳಿಕಾರ್ ತಳಿಯ ಉಳಿವಿಗಾಗಿ ಇಂತಹ ರಾಸುಗಳ ಫ್ಯಾಶನ್ ಶೋ ನಡೆಸಲಾಗಿದ್ದು, ಗ್ರಾಮೀಣ ಭಾಗದ ಜನ ಇದನ್ನ ಕಣ್ತುಂಬಿಕೊಂಡು ಮಸ್ತ್ ಖುಷಿ ಪಟ್ಟಿದ್ದಂತು ಸುಳ್ಳಲ್ಲ.