AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯತ್ನಾಳ್​ಗೆ ಮಾಡಲು ಕೆಲಸ ಇಲ್ಲ, ಬಸ್ ನಿಲ್ದಾಣದಲ್ಲಿ ಕುಳಿತು ಜ್ಯೋತಿಷ್ಯ ಹೇಳಲಿ -ಮಧು ಬಂಗಾರಪ್ಪ

ಕಲಬುರಗಿಯಲ್ಲಿ ಸಚಿವ ಮಧು ಬಂಗಾರಪ್ಪ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ಸಂಸದ ಅನಂತಕುಮಾರ್ ಹೆಗಡೆ ಹಾಗೂ ಆರ್. ಅಶೋಕ್ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ನಾಯಕರ ಮನೆಯಲ್ಲಿ ಕೆಲಸ ಮಾಡೋರು ಕೂಡಾ ನಮ್ಮ ಗ್ಯಾರೆಂಟಿ ತೆಗೆದು ಕೊಳ್ತಿದ್ದಾರೆ. ಮೋದಿಯವರು ಇದನ್ನೂ ಕಾಪಿ ಮಾಡಿದ್ದಾರೆ‌ ಎಂದು ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.

ಯತ್ನಾಳ್​ಗೆ ಮಾಡಲು ಕೆಲಸ ಇಲ್ಲ, ಬಸ್ ನಿಲ್ದಾಣದಲ್ಲಿ ಕುಳಿತು ಜ್ಯೋತಿಷ್ಯ ಹೇಳಲಿ -ಮಧು ಬಂಗಾರಪ್ಪ
ಮಧು ಬಂಗಾರಪ್ಪ
ದತ್ತಾತ್ರೇಯ ಪಾಟೀಲ್​
| Edited By: ಆಯೇಷಾ ಬಾನು|

Updated on:Mar 08, 2024 | 3:01 PM

Share

ಕಲಬುರಗಿ, ಮಾರ್ಚ್​.08: ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಸರ್ಕಾರ ಪತನವಾಗುತ್ತೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಸಚಿವ ಮಧು ಬಂಗಾರಪ್ಪ (Madhu Bangarappa) ವಾಗ್ದಾಳಿ ನಡೆಸಿದ್ದಾರೆ. ಯತ್ನಾಳ್​ಗೆ (Basanagouda Patil Yatnal) ಮಾಡಲು ಕೆಲಸ ಇಲ್ಲ, ಬಸ್ ನಿಲ್ದಾಣದಲ್ಲಿ ಕುಳಿತು ಜ್ಯೋತಿಷ್ಯ ಹೇಳೋಕೆ ಹೇಳಿ ಎಂದು ವಾಗ್ದಾಳಿ ನಡೆಸಿದ್ದಾರೆ. ಹಾಗೂ ಇದೇ ವೇಳೆ ಸಂಸದ ಅನಂತಕುಮಾರ್ ಹೆಗಡೆ (Ananth Kumar Hegde) ವಿರುದ್ಧವೂ ಕಿಡಿಕಾರಿದ್ದು ಹೆಗಡೆ ದೊಡ್ಡ ಹುಚ್ಚ, ಏಲೆಕ್ಷನ್ ಬರೋವರೆಗೂ ಮಲ್ಕೊಂಡಿರುತ್ತಾನೆ, ಏಲೆಕ್ಷನ್ ಬಂದ ತಕ್ಷಣ ಎದ್ದು ಬರ್ತಾನೆ ಎಂದಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ ಬಿಜೆಪಿ ನಾಯಕರ ವಿರುದ್ಧ ಕೆಂಡಕಾರಿದ್ದಾರೆ. ಕಾಂಗ್ರೆಸ್ ಜನರನ್ನ ಹುಚ್ಚರನ್ನಾಗಿ ಮಾಡ್ತಿದೆ ಎಂಬ ಸಂಸದ ಹೆಗೆಡೆ ಹೇಳಿಕೆಗೆ ತಿರುಗೇಟು ನೀಡಿದ ಮಧು ಬಂಗಾರಪ್ಪ, ಹೆಗಡೆ ದೊಡ್ಡ ಹುಚ್ಚ, ಏಲೆಕ್ಷನ್ ಬರೋವರೆಗೂ ಮಲ್ಕೊಂಡಿರುತ್ತಾನೆ, ಏಲೆಕ್ಷನ್ ಬಂದ ತಕ್ಷಣ ಎದ್ದು ಬರ್ತಾನೆ. ಈ ಭಾರಿ ಆತನನ್ನ ರಾಜಕೀಯವಾಗಿ ಪರ್ಮನೆಂಟ್ ಆಗಿ ಮಲಗಿಸುತ್ತೇವೆ. ಏಕವಚನದಲ್ಲಿ ಮಾತನಾಡೋದೆ ಅವರ ಮನೆ ಸಂಸ್ಕೃತಿ ಎಂದು ಹೆಗಡೆ ವಿರುದ್ದ ಮಧುಬಂಗಾರಪ್ಪ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಹೆಡ್ ಲೆಸ್ ಬಿಜೆಪಿಯಿತ್ತು. ಇವಾಗ ಆರ್​. ಅಶೋಕ್ ಅವರನ್ನು ಹೆಡ್ ಮಾಡಿದ್ದಾರೆ. ಆ ಮನುಷ್ಯನಿಗೆ ತಲೆ ಎಲ್ಲಿದೆ ಎನ್ನೋದೆ ಗೊತ್ತಿಲ್ಲ. ಏನೇನೋ ಹೇಳಿಕೆ ಕೊಡ್ತಾರೆ. ಎನ್​ಡಿಆರ್​ಎಫ್ ಪರಿಹಾರಕ್ಕೋಸ್ಕರ ಕಾಯಬಾರದು. ಹಾಗಿದ್ರೆ NDRF ತೆಗೆದುಬಿಡೋಕೆ ಹೇಳಿ‌‌. ರಾಜ್ಯದ ಬಡಜನರಿಗೆ ನಮ್ಮ ಗ್ಯಾರೆಂಟಿ ಅನೂಕುಲ ಆಗಿವೆ‌. ಬಿಜೆಪಿ ನಾಯಕರ ಮನೆಯಲ್ಲಿ ಕೆಲಸ ಮಾಡೋರು ಕೂಡಾ ನಮ್ಮ ಗ್ಯಾರೆಂಟಿ ತೆಗೆದು ಕೊಳ್ತಿದ್ದಾರೆ. ಮೋದಿಯವರು ಇದನ್ನೂ ಕಾಪಿ ಮಾಡಿದ್ದಾರೆ‌. ಮೊದಲು ಗ್ಯಾರೆಂಟಿಗೆ ವಾರೆಂಟಿ ಇಲ್ಲ ಅಂದ್ರೂ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್​ ನಾಯಕರು ಕರಿಮಣಿ ಮಾಲೀಕ ನಾನಲ್ಲ ಅಂತಿದ್ದಾರೆ: ಅನಂತ್ ಕುಮಾರ್ ಹೆಗಡೆ ವ್ಯಂಗ್ಯ

ಇನ್ನು ಬಿಜೆಪಿ ಆಪರೇಷನ್ ಕಮಲ ವಿಚಾರ ಸಂಬಂಧ ಮಾತನಾಡಿದ ಸಚಿವರು, ಅವರ ಆಪರೇಷನ್ ನಾವು ಫೇಲ್ ಮಾಡ್ತೇವೆ. ಅವರು ಯಾವತ್ತೋ ಸಂವಿಧಾನಾತ್ಮಕವಾಗಿ ಅಧಿಕಾರಕ್ಕೆ ಬಂದಿಲ್ಲ. ಕಳೆದ ಭಾರಿ ಹೀಗ್ ಮಾಡೇ 67ಕ್ಕೆ ಬಂದಿದ್ದಾರೆ. ಮುಂದೆ ಹೀಗೆ ಮಾಡಿದ್ರೆ 37 ಕ್ಕೆ ಬರ್ತಾರೆ‌ ಎಂದರು.

ಪಾಕಿಸ್ತಾನ ಪರ ಘೋಷಣೆ ವಿಚಾರ ಸಂಬಂಧ ಮಾತನಾಡಿದ ಮಧು ಬಂಗಾರಪ್ಪ ಎಲ್ಲಾ ಕೂಗಲಿ, ಯಾರೇ ಕೂಗಲಿ ಅದು ತಪ್ಪು ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಬಾಂಬ್ ಬ್ಲಾಸ್ಟ್ ಆಯ್ತು, ಮುಂದೆ ಏನ್ ಮಾಡಬೇಕು ಎನ್ನೋದು ನೋಡಬೇಕು. ಅದು ಬಿಟ್ಟು ನಮ್ಮ ಮೇಲೆ ಆರೋಪ ಮಾಡಿದ್ರೆ. ಕರ್ನಾಟಕ ಏನು ಪಾಕಿಸ್ತಾನದಲ್ಲಿದಿಯಾ? ನಮ್ಮ ದೇಶದಲ್ಲೆ ಇರೋದು ತಾನೇ. ಹಾಗಿದ್ರೆ ಕೇಂದ್ರದ ಏಜೆನ್ಸಿಯವರು ಏನ್ ಮಾಡ್ತಿದ್ರು. ಅವನು ಎಲ್ಲಿಂದ ಬಂದ ಎನ್ನೋದು ಗೊತ್ತಿಲ್ವಾ? ಹಾಗಿದ್ರೆ ಅವರು ಏನ್ ಮಾಡ್ತಿದ್ರು?ಸುಮ್ನೆ ಆರೋಪ ಮಾಡೋದು ಬಿಡಬೇಕು. ಮಣಿಪುರದಲ್ಲಿ ಏನ್ ಆಗಿತ್ತು, ಬಿಜೆಪಿಯವರು ಒಬ್ಬರಾದ್ರು ಅಲ್ಲಿಗೆ ಹೋಗಿದ್ರಾ? ಎಂದು ಕಲಬುರಗಿಯಲ್ಲಿ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:36 pm, Fri, 8 March 24

Follow Us
ದತ್ತಾತ್ರೇಯ ಪಾಟೀಲ್​
ದತ್ತಾತ್ರೇಯ ಪಾಟೀಲ್​

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
ಸಿಜೆಪಿ ಪ್ರತಿಭಟನೆ ನಿಷೇಧಿಸಿ: ಎಲ್ಲ ರಾಜ್ಯಗಳಿಗೆ ಗೃಹ ಇಲಾಖೆ ಸೂಚನೆ
ಸಿಜೆಪಿ ಪ್ರತಿಭಟನೆ ನಿಷೇಧಿಸಿ: ಎಲ್ಲ ರಾಜ್ಯಗಳಿಗೆ ಗೃಹ ಇಲಾಖೆ ಸೂಚನೆ
ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ
ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?