ವಿವಾದಿತ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ ಹೊರಬಂದ ಹಿಂದೂಗಳು
ವಿವಾದಿತ ಲಾಡ್ಲೆ ಮಶಾಕ್ ದರ್ಗಾದ ಒಳಗಡೆ ಇರುವ ರಾಘವ ಚೈತನ್ಯ ಶಿವಲಿಂಗಕ್ಕೆ ಹಿಂದೂಗಳು ಪೂಜೆ ಸಲ್ಲಿಸಿ ಹೊರಬಂದಿದ್ದಾರೆ. ಹೈಕೋರ್ಟ್ ಪೀಠದ ಆದೇಶದಂತೆ ಶ್ರೀ ಸಿದ್ದಲಿಂಗ ಸ್ವಾಮೀಜಿ , ಕಡಗಂಚಿ ಶಿವಯೋಗಿಗಳು , ಬಿಜೆಪಿ ಶಾಸಕ ಅವಿನಾಶ್ ಜಾಧವ್ ಸೇರಿದಂತೆ 15 ಜನ ಪೂಜೆಗೆ ತೆರಳಿದ್ದರು. ಸುಮಾರು ಒಂದು ಗಂಟೆಗಳ ಕಾಲ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಹಿಂದೂ ಮುಖಂಡರು ಪೂಜೆ ಸಲ್ಲಿಸಿದ್ದಾರೆ.
ಕಲಬುರಗಿ, ಮಾ.08: ಜಿಲ್ಲೆಯ ಆಳಂದ ಪಟ್ಟಣದಲ್ಲಿರುವ ವಿವಾದಿತ ಲಾಡ್ಲೆ ಮಶಾಕ್ ದರ್ಗಾದ (ladle mashak darga)ಒಳಗಡೆ ಇರುವ ರಾಘವ ಚೈತನ್ಯ ಶಿವಲಿಂಗಕ್ಕೆ ಹಿಂದೂಗಳು ಪೂಜೆ ಸಲ್ಲಿಸಿ ಹೊರಬಂದಿದ್ದಾರೆ. ಹೈಕೋರ್ಟ್ ಪೀಠದ ಆದೇಶದಂತೆ ಶ್ರೀ ಸಿದ್ದಲಿಂಗ ಸ್ವಾಮೀಜಿ , ಕಡಗಂಚಿ ಶಿವಯೋಗಿಗಳು , ಬಿಜೆಪಿ ಶಾಸಕ ಅವಿನಾಶ್ ಜಾಧವ್, ಹರ್ಷಾನಂದ ಗುತ್ತೆದಾರ್, ಚಂದು ಪಾಟೀಲ್, ಶಿವರಾಜ್ ಪಾಟೀಲ್ ರದ್ದೆವಾಡಗಿ ಸೇರಿದಂತೆ 15 ಜನ ಪೂಜೆಗೆ ತೆರಳಿದ್ದರು. ಸುಮಾರು ಒಂದು ಗಂಟೆಗಳ ಕಾಲ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಹಿಂದೂ ಮುಖಂಡರು ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ಶಾಂತಿಯುತವಾಗಿ ರಾಘವಚೈತನ್ಯ ಶಿವಲಿಂಗ ಮಹಾಪೂಜೆ ಮುಗಿದಿದೆ.
ಇನ್ನು ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ ಬಂದ ನಂತರ ಮಾತನಾಡಿದ ಆಂದೋಲಾ ಸಿದ್ದಲಿಂಗ ಸ್ವಾಮಿಜಿ, ‘ ನ್ಯಾಯಾಲಯದ ಅನುಮತಿ ಪಡೆದುಕೊಂಡು ಯಶಸ್ವಿಯಾಗಿ ಪೂಜೆ ಸಲ್ಲಿಸಿದ್ದೇವೆ. ಗಂಗಾಪೂಜೆ, ವಿಜ್ಞೇಶ್ವರ ಪೂಜೆ ಹಾಗೂ ರುದ್ರಪೂಜೆ ನೆರವೇರಿದ್ದೇವೆ. ಆದರೆ, ರಾಘವ ಚೈತನ್ಯ ಶಿವಲಿಂಗ ಆಕ್ರಮಣದ ಯತ್ನಗಳು ನಡೆಯುತ್ತಿವೆ. ಶಿವಲಿಂಗ ಇರುವ ಸ್ಥಳವನ್ನು ಗೋರಿಯಾಗಿ ಪರಿವರ್ತಿಸಲು ಚಾದರ್ ಹಾಕಿ ಆಕ್ರಮಣಕ್ಕೆ ಜಿಹಾದಿಗಳು ಯತ್ನಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ:ವಿವಾದಿತ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವರಾತ್ರಿಯಂದು ಹಿಂದೂಗಳಿಗೆ ಪೂಜೆ ಸಲ್ಲಿಸಲು ಸಿಕ್ತು ಅವಕಾಶ
ಲ್ಯಾಂಡ್ ಜಿಹಾದ್ಗೆ ಪೊಲೀಸರಿಂದ ಸಪೋರ್ಟ್ ಆರೋಪ
ಪೊಲೀಸರೂ ಸಹ ಲ್ಯಾಂಡ್ ಜಿಹಾದ್ಗೆ ಸಪೋರ್ಟ್ ಮಾಡುತ್ತಿರುವಂತೆ ಕಾಣುತ್ತಿದೆ. ರಾಘವ ಚೈತನ್ಯ ಶಿವಲಿಂಗ ಇರುವ ಸ್ಥಳದಲ್ಲಿ ಸಿಕ್ಕ ಸಿಕ್ಕಲ್ಲಿ ಬ್ಯಾರಿಕೇಡಗಳನ್ನು ಹಾಕಿ ಪೂಜೆಗೆ ಅಡ್ಡಿಪಡಿಸುವ ಯತ್ನ ಮಾಡಿದ್ದಾರೆ. ನ್ಯಾಯಾಲಯವೇ ಅನುಮತಿ ನೀಡಿರುವ ಕಾರಣ ಶಾಂತಿಯುತವಾಗಿ ಪೂಜೆ ಸಲ್ಲಿಸಲು ಪೊಲೀಸರು ನಮಗೆ ಅನುಕೂಲ ಮಾಡಬೇಕಿತ್ತು. ಪೊಲೀಸರೂ ಸಹ ಮುಸ್ಲಿಂರ ತುಷ್ಠಿಕರಣಕ್ಕಾಗಿ ನಮಗೆ ಇಕ್ಕಟ್ಟು ಸೃಷ್ಟಿಸಿದ್ದಾರೆ. ಇದೆಲ್ಲವನ್ನೂ ನಾವು ನ್ಯಾಯಾಲಯದ ಗಮನಕ್ಕೆ ತರುತ್ತೇವೆ. ನ್ಯಾಯಾಂಗ ಹೋರಾಟದ ಮೂಲಕ ಮಂದಿರ ನಿರ್ಮಾಣ ಮಾಡಿಯೇ ಮಾಡುತ್ತೇವೆ ಎಂದು ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ