Video: ದೇವಸ್ಥಾನ ನಿರ್ಮಿಸಲು ಭೂಮಿಯನ್ನು ದಾನವಾಗಿ ನೀಡಿದ ಮುಸ್ಲಿಂ ಜಮಾತ್
ಮುಸ್ಲಿಂ ಜಮಾತ್ ಮಸೀದಿಗೆ ಸೇರಿದ ಆರು ಲಕ್ಷ ರೂಪಾಯಿ ಮೌಲ್ಯದ ಮೂರು ಸೆಂಟ್ಸ್ ಜಾಗವನ್ನು ಗಣೇಶ ದೇವಾಲಯವು ನಿರ್ಮಿಸಲು ದಾನವಾಗಿ ನೀಡಲಾಗಿತ್ತು. ಇದೀಗ ಮಂದಿರ ನಿರ್ಮಾಣ ಪೂರ್ಣಗೊಂಡು ಲೋಕಾರ್ಪಣೆ ಕಾರ್ಯಕ್ರಮವೂ ಅದ್ಧೂರಿಯಾಗಿ ನಡೆದಿದೆ. ವಿಡಿಯೋ ಇಲ್ಲಿದೆ ನೋಡಿ
ತಮಿಳುನಾಡು: ತಿರುಪುರ್ ಜಿಲ್ಲೆಯ ಬಡಿಯೂರ್ ಪಕ್ಕದಲ್ಲಿರುವ ಒಟ್ಟಪಾಳ್ಯಂ ರೋಸ್ ಗಾರ್ಡನ್ ಪ್ರದೇಶದಲ್ಲಿ ಗಣಪತಿಯ ದೇವಾಲಯವು ನಿರ್ಮಿಸಲು ಇಲ್ಲಿನ ಮುಸ್ಲಿಂ ಸಮುದಾಯ ಜಾಗವನ್ನು ದಾನವಾಗಿ ನೀಡಿದ್ದು, ಇಲ್ಲಿನ ಜನರ ಸೌಹಾರ್ದತೆ ಇದೀಗ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ರೋಸ್ ಗಾರ್ಡನ್ ಪ್ರದೇಶದಲ್ಲಿ ಹಿಂದೂ, ಮುಸ್ಲಿಂ ಹೀಗೆ ಎಲ್ಲ ಸಮುದಾಯದ 300ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಇಲ್ಲಿ ದೇವಾಲಯವನ್ನು ನಿರ್ಮಿಸಲು ಮುಸ್ಲಿಂ ಜಮಾತ್ ಮಸೀದಿಗೆ ಸೇರಿದ ಆರು ಲಕ್ಷ ರೂಪಾಯಿ ಮೌಲ್ಯದ ಮೂರು ಸೆಂಟ್ಸ್ ಜಾಗವನ್ನು ದಾನವಾಗಿ ನೀಡಲಾಗಿತ್ತು. ಇದರ ಬೆನ್ನಲ್ಲೇ ಮಂದಿರ ನಿರ್ಮಾಣ ಪೂರ್ಣಗೊಂಡು ಇತ್ತೀಚಿಗಷ್ಟೇ ಲೋಕಾರ್ಪಣೆ ನಡೆದಿದೆ. ಮುಸ್ಲಿಂ ಒಕ್ಕೂಟದ ಅನ್ವರ್ದೀನ್ ಮಾತನಾಡಿ, ‘ಕಠಿಣ ಪರಿಶ್ರಮಪರಿಶ್ರಮದಿಂದ ಸುಂದರ ದೇವಾಲಯ ನಿರ್ಮಿಸಿದ್ದಾರೆ. ಈ ದೇವಾಲಯವು ಹಿಂದೂ ಮುಸ್ಲಿಂ ಸೌಹಾರ್ದತೆಯ ಮತ್ತು ಭವಿಷ್ಯದ ಪೀಳಿಗೆಯ ಏಕತೆಯ ಸಂಕೇತವಾಗಿದೆ. ಇದನ್ನೇ ತಮಿಳುನಾಡು ಜಗತ್ತಿಗೆ ಹೇಳುತ್ತಿದೆ,’’ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಚಿವ ಮಧು ಬಂಗಾರಪ್ಪಗೆ ಶಿಕ್ಷಣ ಸಚಿವರಾಗಿ ಬೇಕಿರೋ ಮೌಲ್ಯ ಕಡಿಮೆ ಇದೆ ಎಂದ ಪಿ ರಾಜೀವ್