AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಮೊಟ್ಟ ಮೊದಲ ಸ್ವದೇಶಿ ನಿರ್ಮಿತ ಮಿಲಿಟರಿ ಬಾಂಬರ್ ಡ್ರೋನ್ ವಿಮಾನ ಲೋಕಾರ್ಪಣೆ

ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇಂದು ಭಾರತದ ಮೊಟ್ಟ ಮೊದಲ ಸ್ವದೇಶಿ ನಿರ್ಮಿತ ಮಿಲಿಟರಿ ಬಾಂಬರ್ ಡ್ರೋನ್ ವಿಮಾನವನ್ನ ಲೋಕಾರ್ಪಣೆ ಮಾಡಲಾಯಿತು. ಮೇಕ್ ಇನ್ ಇಂಡಿಯಾ ಯೋಜನೆಯಡಿ ಎಫ್‌ಡಬ್ಲ್ಯೂಡಿ - 200 ಬಿ ಹೆಸರಿನ ಬಾಂಬರ್ ವಿಮಾನವನ್ನು ಪ್ಲೈಯಿಂಗ್ ವೆಡ್ಜ್ ಅಂಡ್ ಡಿಫೆನ್ಸ್ ಇರೋ ಸ್ಪೇಸ್ ಟೆಕ್ನಾಲಜಿ ಕಂಪನಿ ವತಿಯಿಂದ ನಿರ್ಮಾಣ ಮಾಡಲಾಗಿದೆ.

ಭಾರತದ ಮೊಟ್ಟ ಮೊದಲ ಸ್ವದೇಶಿ ನಿರ್ಮಿತ ಮಿಲಿಟರಿ ಬಾಂಬರ್ ಡ್ರೋನ್ ವಿಮಾನ ಲೋಕಾರ್ಪಣೆ
ಭಾರತದ ಮೊದಲ ಸ್ವದೇಶಿ ನಿರ್ಮಿತ ಮಿಲಿಟರಿ ಬಾಂಬರ್ ಡ್ರೋನ್ ವಿಮಾನ ಲೋಕಾರ್ಪಣೆ
ರಾಮು, ಆನೇಕಲ್​
| Edited By: |

Updated on:May 03, 2024 | 7:21 PM

Share

ಆನೇಕಲ್, ಮೇ 3: ಇತ್ತೀಚಿನ ದಿನಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಸಲುವಾಗಿ ಸ್ವದೇಶಿ ನಿರ್ಮಿತ ತಂತ್ರಜ್ಞಾನಕ್ಕೆ ಹೆಚ್ಚು ಹೊತ್ತನ್ನ ನೀಡಲಾಗುತ್ತಿದೆ. ಅದರ ಪ್ರತಿಫಲವಾಗಿ ಅತ್ಯಾಧುನಿಕ ಮತ್ತು ಮಾನವ ರಹಿತ ಬಾಂಬರ್ ಡ್ರೋನ್ ವಿಮಾನ ಇಂದು ಅನಾವರಣಗೊಳಿಸಲಾಗಿದೆ. ದೇಶದ ಮೊದಲು ಸ್ವದೇಶಿ ನಿರ್ಮಿತ ಬಾಂಬರ್ ಡ್ರೋನ್ (drone) ಅನಾವರಣಗೊಂಡಿದೆ. ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇಂದು ಭಾರತದ ಮೊಟ್ಟ ಮೊದಲ ಸ್ವದೇಶಿ ನಿರ್ಮಿತ ಮಿಲಿಟರಿ ಬಾಂಬರ್ ಡ್ರೋನ್ ವಿಮಾನವನ್ನ ಲೋಕಾರ್ಪಣೆ ಮಾಡಲಾಯಿತು.

ಮೇಕ್ ಇನ್ ಇಂಡಿಯಾ ಯೋಜನೆಯಡಿ ಎಫ್‌ಡಬ್ಲ್ಯೂಡಿ – 200 ಬಿ ಹೆಸರಿನ ಬಾಂಬರ್ ವಿಮಾನವನ್ನು ಪ್ಲೈಯಿಂಗ್ ವೆಡ್ಜ್ ಅಂಡ್ ಡಿಫೆನ್ಸ್ ಇರೋ ಸ್ಪೇಸ್ ಟೆಕ್ನಾಲಜಿ ಕಂಪನಿ ವತಿಯಿಂದ ನಿರ್ಮಾಣ ಮಾಡಲಾಗಿದೆ. ಭಾರತ ರಕ್ಷಣಾ ಕ್ಷೇತ್ರದ ದುಬಾರಿ ಶಸ್ತ್ರಾಸ್ತ್ರ ಹಾಗೂ ಯುದ್ಧ ಸಾಮಗ್ರಿಗಳಿಗೆ ಬೇರೆ ದೇಶಗಳನ್ನ ಅವಲಂಬನೆಯಾಗಿದೆ. ಹೀಗಾಗಿ ಮೇಡ್ ಇನ್ ಇಂಡಿಯಾ ಯೋಜನೆಗೆ ಕೊಡುಗೆ‌ ನೀಡಲು ಮಾನವ ರಹಿತ ಡ್ರೋನ್ ವಿಮಾನವನ್ನು ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಪಡಿಸಿ ಇಂದು ಲೋಕಾರ್ಪಣೆ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​ ವೇಯಲ್ಲಿ ಮತ್ತೊಂದು ಕಂಟಕ: ಪ್ರಯಾಣಿಕರಿಗೆ ಪ್ರಾಣ ಭಯ

ಈ ವಿಮಾನ ನಾಲ್ಕು ಇಂಜಿನ್ ಹೊಂದಿದ್ದು ಏಕಕಾಲಕ್ಕೆ 2 ಸಾವಿರ ಕಿ.ಮೀ ದೂರ ಹಾಗೂ 20 ಗಂಟೆಗಳ ಕಾಲ ನಿರಂತರ ಹಾರಾಟ‌ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿಯ ಸಿಇಓ ಸುಹಾಸ್ ತೇಜಸ್ಕಂದ ತಿಳಿಸಿದರು.

ಇತ್ತಿಚೆಗೆ ಯುದ್ದದ ಆಯಾಮಗಳು ಬದಲಾಗಿದೆ. ಇತ್ತಿಚೆಗೆ ನಡೆದ ಉಕ್ರೇನ್ ಹಾಗೂ ರಷ್ಯಾ ಯುದ್ದದಲ್ಲಿ ಸಾಬೀತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಮಾನವರಹಿತ ಡ್ರೋನ್ ಅವಶ್ಯಕತೆ ಹೆಚ್ಚಾಗಿದೆ. ಹೀಗಾಗಿ ನಮ್ಮ ಸಂಸ್ಥೆಯಿಂದ ಭಾರತದ ಮೊಟ್ಟ ಮೊದಲ ಮಾನವರಹಿತ ಡ್ರೋನ್ ನಿರ್ಮಾಣ ಮಾಡಲಾಗಿದೆ.

ಈ ವಿಮಾನ ಶತ್ರು ರಾಷ್ಟ್ರದ ಗಡಿಯವರೆಗೂ ಹೋಗಿ 100 ಕ್ಕೂ ಹೆಚ್ಚು ಸಣ್ಣ ಪ್ರಮಾಣ ಡ್ರೋನ್ ಗಳನ್ನು ಬಿಟ್ಟು ಶತ್ರು ರಾಷ್ಟ್ರಗಳ ನೆಲೆಯನ್ನು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದರು. ಇನ್ನು ಕೆಲವೇ ತಿಂಗಳಲ್ಲಿ ಈ ಡ್ರೋನ್ ವಿಮಾನ ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಗುವ ವಿಶ್ವಾಸವಿದೆ ಎಂದು ಕಂಪನಿಯ ಸಹ ಸಂಸ್ಥಾಪಕ ಪ್ರಜ್ವಲ್ ತಿಳಿಸಿದರು.

ಇದನ್ನೂ ಓದಿ: ಭಾರಿ ಅಪಾಯದಿಂದ 20ಕ್ಕೂ ಹೆಚ್ಚು ಪ್ರಯಾಣಿಕರು ಜಸ್ಟ್​ ಮಿಸ್​! ವಿಡಿಯೋ ನೋಡಿ

ಪ್ರತಿ ಕ್ಷೇತ್ರದಲ್ಲೂ ನಮ್ಮ ದೇಶ ಪ್ರಬಲವಾಗಿರಬೇಕೆಂದರೆ ಎಲ್ಲದಕ್ಕೂ ಮುಖ್ಯವಾಗಿ ಸೇನೆಯಲ್ಲಿ ತಂತ್ರಜ್ಞಾನ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ಲೋಕಾರ್ಪಣೆಯಾಗಿರುವ ದೇಶದ ಮೊದಲ ಸ್ವದೇಶಿ ನಿರ್ಮಿತ ಬಾಂಬರ್ ಡ್ರೋನ್ ಮುಂದಿನ ದಿನಗಳಲ್ಲಿ ವಾಯು ಸೇನೆಗೆ ಸೇರ್ಪಡೆಗೊಂಡು ಯಶಸ್ವಿಯಾಗಲಿ ಎಂದು ಆಶಿಸೋಣ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:17 pm, Fri, 3 May 24

ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ
ಪತ್ನಿಗೆ ಡಿವೋರ್ಸ್​​ ನೀಡದೆ 2ನೇ ಮದುವೆಗೆ ಯತ್ನ: ವ್ಯಕ್ತಿಗೆ ಡಬಲ್​​ ಶಾಕ್​
ಪತ್ನಿಗೆ ಡಿವೋರ್ಸ್​​ ನೀಡದೆ 2ನೇ ಮದುವೆಗೆ ಯತ್ನ: ವ್ಯಕ್ತಿಗೆ ಡಬಲ್​​ ಶಾಕ್​
ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯದ ಗೋಡೆ ಕೆಡವಿದ ಮುಸ್ಲಿಂ ಮಹಿಳೆಯರು
ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯದ ಗೋಡೆ ಕೆಡವಿದ ಮುಸ್ಲಿಂ ಮಹಿಳೆಯರು
ಕಲಾಕಾರ ಈ ಕಮಲಾಕರ: ಜ್ಯೋತಿಷಿಯ ನವರಂಗಿ ಆಟದ ಸ್ಪೋಟಕ ಆಡಿಯೋ ಇಲ್ಲಿದೆ
ಕಲಾಕಾರ ಈ ಕಮಲಾಕರ: ಜ್ಯೋತಿಷಿಯ ನವರಂಗಿ ಆಟದ ಸ್ಪೋಟಕ ಆಡಿಯೋ ಇಲ್ಲಿದೆ
ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ
ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ
ಸಿದ್ಧಾರೂಢರ ದರ್ಶನ ಪಡೆದು ಧ್ಯಾನ ಮಾಡಿದ ಸೋನು ನಿಗಮ್​​
ಸಿದ್ಧಾರೂಢರ ದರ್ಶನ ಪಡೆದು ಧ್ಯಾನ ಮಾಡಿದ ಸೋನು ನಿಗಮ್​​
ನಾಯಕ ಎಂದರೆ ಕೇವಲ ಚುನಾವಣೆಗಳಲ್ಲಿ ಸ್ಪರ್ಧಿಸುವುದಲ್ಲ: ಮೋದಿ
ನಾಯಕ ಎಂದರೆ ಕೇವಲ ಚುನಾವಣೆಗಳಲ್ಲಿ ಸ್ಪರ್ಧಿಸುವುದಲ್ಲ: ಮೋದಿ