AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಮುಂದೆ ಕಸಗುಡಿಸುತ್ತಿದ್ದಾಕೆ ಮೇಲೆ ಬೆಳ್ಳಂ ಬೆಳಿಗ್ಗೆ ಸರಗಳ್ಳರ ದಾಳಿ: ಕುಸಿದು ಬಿದ್ದು ಮಹಿಳೆ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಹುಸ್ಕೂರು ಗ್ರಾಮದಲ್ಲಿ ಬೆಳ್ಳಂ ಬೆಳಿಗ್ಗೆ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿ ದುಷ್ಕರ್ಮಿಗಳು ಚಿನ್ನಾಭರಣ ದೋಚಿದ್ದಾರೆ. ಘಟನೆ ವೇಳೆ ಕುಸಿದು ಬಿದ್ದ ಮಹಿಳೆ ಮೃತಪಟ್ಟಿದ್ದು, ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮನೆ ಮುಂದೆ ಕಸಗುಡಿಸುತ್ತಿದ್ದಾಕೆ ಮೇಲೆ ಬೆಳ್ಳಂ ಬೆಳಿಗ್ಗೆ ಸರಗಳ್ಳರ ದಾಳಿ: ಕುಸಿದು ಬಿದ್ದು ಮಹಿಳೆ ಸಾವು
ಮೃತ ಜ್ಯೋತಿImage Credit source: Tv9 Kannada
ಪ್ರಸನ್ನ ಹೆಗಡೆ
|

Updated on:Feb 09, 2026 | 4:25 PM

Share

ನೆಲಮಂಗಲ, ಫೆಬ್ರವರಿ 09: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಸರಗಳ್ಳತನ ಪ್ರಕರಣಗಳು ಸಾರ್ವಜನಿಕರ ನಿದ್ದೆಗೆಡಿಸಿವೆ. ಈ ನಡುವೆ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಗೆ ಸ್ಪ್ರೇ ಹೊಡೆದು ದುಷ್ಕರ್ಮಿಗಳು ಒಡವೆ ದೋಚಿ ಪರಾರಿಯಾಗಿದ್ದಾರೆ. ಇತ್ತ ಕುಸಿದು ಬಿದ್ದ ಮಹಿಳೆ ಮೃತಪಟ್ಟಿದ್ದು, ಮೃತ ಜ್ಯೋತಿ(45) ಕತ್ತಲ್ಲಿದ್ದ ಮಾಂಗಲ್ಯ ಸರ ಮತ್ತು ಓಲೆಯನ್ನು ದುಷ್ಕರ್ಮಿಗಳು ದೋಚಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಮನೆಯವರು ಬೆಳಿಗ್ಗೆ 6.30ರ ವೇಳೆಗೆ ಮನೆಯಿಂದ ಹೊರ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮಕಾಡೆ ಬಿದಿದ್ದ ಜ್ಯೋತಿ ಕೈ ಮೇಲೆ ಮಾರ್ಕ್​​ ಕಂಡುಬಂದಿದ್ದು, ಅವರ ಮೈಮೇಲಿದ್ದ ಒಡವೆಗಳು ಇರಲಿಲ್ಲ. ಮುಂಜಾನೆ 5.30ರ ಸುಮಾರಿಗೆ ಕಸಗುಡಿಸಲೆಂದು ಅವರು ಮನೆಯಿಂದ ಹೊರ ಬಂದಿದ್ದು, ಈ ವೇಳೆ ಅಪರಿಚಿತರು ಕಳ್ಳತನ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕುಸಿದು ಬಿದ್ದ ಜ್ಯೋತಿಯವರನ್ನು ಕಂಡ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಅದಾಗಲೇ ಅವರು ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಜ್ಯೋತಿ ಅವರ ಬಾಯಲ್ಲಿ ನೊರೆ ಕೂಡ ಕಂಡುಬಂದಿದ್ದು, ಸ್ಪ್ರೇ ಹೊಡೆದಿರುವ ಹಿನ್ನೆಲೆ ಉಸಿರುಗಟ್ಟಿ ಅವರು ಸಾವನ್ನಪ್ಪಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಕೊರೊನಾದಲ್ಲಿ ಟ್ರಾವೆಲ್ಸ್ ಲಾಸ್ ಆಗಿದ್ದಕ್ಕೆ ಕಳ್ಳತನಕ್ಕಿಳಿತ ವ್ಯಕ್ತಿ! ಕೆಜಿಗಟ್ಟಲೇ ಚಿನ್ನ ದೋಚಿದ್ದ ಮಾಸ್ಕ್​ಮ್ಯಾನ್ ಅರೆಸ್ಟ್

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮೃತ ಜ್ಯೋತಿ ಸಹೋದರಿ ನೀತು,  ಮನೆಯ ಬಾಗಿಲ ಬಳಿಯೇ  ಅಟ್ಯಾಕ್ ಮಾಡಿ ಕತ್ತಿನಲ್ಲಿದ್ದ ಚಿನ್ನ ಮತ್ತು ಓಲೆ ಎರಡನ್ನೂ ಕಿತ್ತುಕೊಂಡಿದ್ದಾರೆ. ಬಳಿಕ  ಮುಖಕ್ಕೆ ಸ್ಪ್ರೇ ಮಾಡಿ ಜೋರಾಗಿ ನೂಕಿದ್ದಾರೆ. ಈ ವೇಳೆ ಮನೆಯ ಮುಂದಿನ ಸಂಪ್ ಮುಚ್ಚಳಕ್ಕೆ ಜ್ಯೋತಿ ಅವರ ಮುಖ ತಾಗಿ ಗಾಯಗಳಾಗಿವೆ. ನಮಗೆ ಯಾರ ಮೇಲೂ ಅನುಮಾನ ಇಲ್ಲ. ಇತ್ತೀಚೆಗೆ ಸರಗಳ್ಳತನ ಪ್ರಕರಣಗಳು ಜಾಸ್ತಿ ಆಗುತ್ತಿದ್ದು, ಪೊಲೀಸರು ಬಂದು ಪರಿಶೀಲನೆ ನಡೆಸಿರೋದಾಗಿ ತಿಳಿಸಿದ್ದಾರೆ.

ವರದಿ: ಮಂಜುನಾಥ್​, ಟಿವಿ9 ನೆಲಮಂಗಲ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:25 pm, Mon, 9 February 26

Follow Us
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ಯುದ್ಧ ಪೀಡಿತ ಪ್ರದೇಶದಲ್ಲಿರೋ ಕನ್ನಡಿಗರ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿ
ಯುದ್ಧ ಪೀಡಿತ ಪ್ರದೇಶದಲ್ಲಿರೋ ಕನ್ನಡಿಗರ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿ