AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಕೆಪಿಸಿಸಿ ಅಧ್ಯಕ್ಷನಾಗಲು ಬಯಸಿದರೆ ವೈಯಕ್ತಿಕ ವಿಚಾರ, ಅಂತಿಮ ನಿರ್ಧಾರ ಹೈಕಮಾಂಡ್​ನದ್ದು: ಹೆಚ್ ಸಿ ಮಹಾದೇವಪ್ಪ

ನಾನು ಕೆಪಿಸಿಸಿ ಅಧ್ಯಕ್ಷನಾಗಲು ಬಯಸಿದರೆ ವೈಯಕ್ತಿಕ ವಿಚಾರ, ಅಂತಿಮ ನಿರ್ಧಾರ ಹೈಕಮಾಂಡ್​ನದ್ದು: ಹೆಚ್ ಸಿ ಮಹಾದೇವಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: May 30, 2024 | 1:24 PM

Share

ರಾಜಣ್ಣರಾಗಲೀ ಅಥವಾ ತಾನಾಗಲೀ ಪಕ್ಷದ ರಾಜ್ಯಾಧ್ಯಕ್ಷನಾಗ ಬಯಸಿದರೆ ಅದು ತಮ್ಮ ತಮ್ಮ ವೈಯಕ್ತಿಕ ಆಕಾಂಕ್ಷೆ ಅನಿಸಿಕೊಳ್ಳುತ್ತದೆ, ಅಧ್ಯಕ್ಷರನ್ನು ಬದಲಾಯಿಸುವ ಮತ್ತು ಯಾರೇ ಹೊಸಬರನ್ನು ನೇಮಕ ಮಾಡುವ ವಿಚಾರ ಸಂಪೂರ್ಣವಾಗಿ ಹೈಕಮಾಂಡ್ ಸುಪರ್ದಿ ಮತ್ತ್ತು ವಿವೇಚನೆಗೆ ಬಿಟ್ಟಿದ್ದು ಎಂದು ಸಚಿವ ಹೇಳಿದರು.

ಬೆಂಗಳೂರು: ಸಮಾಜ ಕಲ್ಯಾಣ ಖಾತೆ ಸಚಿವ ಹೆಚ್ ಸಿ ಮಹಾದೇವಪ್ಪ (HC Mahadevappa) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಬಹಳ ಎಚ್ಚರಿಕೆಯಿಂದ ವ್ಯವಹರಿಸುತ್ತಾರೆ. ನಗರದಲ್ಲಿ ಇಂದು ಅವರು ತಮಗೆ ಕೇಳಲಾದ ಪ್ರಶ್ನೆಗಳಿಗೆ ಬಹಳ ಸಮಾಧಾನಕರವಾಗಿ ಉತ್ತರ ನೀಡಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ಜಿಲ್ಲಾ ಉಸ್ತುವಾರಿ ಮಂತ್ರಿಗಳು (district in charge ministers) ತಮ್ಮ ತಮ್ಮ ಜಿಲ್ಲೆಗಳಲ್ಲಿ ಪಕ್ಷದ ಕಚೇರಿಗೆ ಭೇಟಿ ನೀಡಿ, ಕಾರ್ಯಕರ್ತರೊಡನೆ ಸಭೆಗಳನ್ನು ನಡೆಸಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಯಲ್ಲಿ ಕೈ ಜೋಡಿಸಬೇಕು ಅಂತ ಹೇಳಿರುವುದರಲ್ಲಿ ತಪ್ಪೇನಿದೆ? ಅವರು ತನಗೆ ಮಾತ್ರ ಪ್ರತ್ಯೇಕವಾಗಿ ಹೇಳಿಲ್ಲ, ತಾವೆಲ್ಲ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲೇಬೇಕು ಎಂದು ಮಹದೇವಪ್ಪ ಹೇಳಿದರು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷರಾಗಿ ಶಿವಕುಮಾರ್ ಲೋಕಸಭಾ ಚುನಾವಣೆ ಮುಗಿಯುವವರೆಗೆ ಮಾತ್ರ ಮುಂದುವರಿಯುತ್ತಾರೆ ಅಂತ ಹೇಳಿದ್ದರು, ಕೆಎನ್ ರಾಜಣ್ಣ ಅಧ್ಯಕ್ಷರಾಗುವ ಪ್ರಯತ್ನ ನಡೆಸಿದ್ದಾರೆ, ಮಹದೇವಪ್ಪ ಹೆಸರು ಸಹ ಕೇಳಿಬರುತ್ತಿದೆ ಎಂದು ಹೇಳಿದ್ದಕ್ಕೆ ಸಚಿವ, ರಾಜಣ್ಣರಾಗಲೀ ಅಥವಾ ತಾನಾಗಲೀ ಪಕ್ಷದ ರಾಜ್ಯಾಧ್ಯಕ್ಷನಾಗ ಬಯಸಿದರೆ ಅದು ತಮ್ಮ ತಮ್ಮ ವೈಯಕ್ತಿಕ ಆಕಾಂಕ್ಷೆ ಅನಿಸಿಕೊಳ್ಳುತ್ತದೆ, ಅಧ್ಯಕ್ಷರನ್ನು ಬದಲಾಯಿಸುವ ಮತ್ತು ಯಾರೇ ಹೊಸಬರನ್ನು ನೇಮಕ ಮಾಡುವ ವಿಚಾರ ಸಂಪೂರ್ಣವಾಗಿ ಹೈಕಮಾಂಡ್ ಸುಪರ್ದಿ ಮತ್ತ್ತು ವಿವೇಚನೆಗೆ ಬಿಟ್ಟಿದ್ದು ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದಲಿತ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ಸಿಗದಿರುವುದಕ್ಕೆ ಬೇಸರ ಮತ್ತು ಅಸಮಾಧಾನ ಹೊರಹಾಕಿದ ಹೆಚ್ ಸಿ ಮಹದೇವಪ್ಪ