ಹದಿನಾಲ್ಕು ಬಜೆಟ್ ಮಂಡಿಸಿದ್ದಾಗಿ ಕೊಚ್ಚಿಕೊಳ್ಳುವ ಸಿದ್ದರಾಮಯ್ಯಗೆ ಸ್ವಲ್ಪವೂ ಆಡಳಿತ ಜ್ಞಾನ ಇದ್ದಂತಿಲ್ಲ: ಹೆಚ್ ಡಿ ಕುಮಾರಸ್ವಾಮಿ

|

Updated on: Jan 29, 2024 | 6:50 PM

ಕೇವಲ ಎರಡು ನಿಮಿಷಗಳಲ್ಲಿ ಬಗೆಹರಿಯಬಹುದಾಗಿದ್ದ ಪ್ರಕರಣವನ್ನು ಕಾಂಗ್ರೆಸ್ ಪಕ್ಷ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದರು. ಕೆರಗೋಡುನಲ್ಲಿ ಗಲಾಟೆ ಸೃಷ್ಟಿಯಾಗುವುದಕ್ಕೆ ಪೊಲೀಸ್ ಇಲಾಖೆ ಮತ್ತು ಅಧಿಕಾರಿಗಳೇ ಕಾರಣ ಎಂದು ಕುಮಾರಸ್ವಾಮಿ ಹೇಳಿದರು,

ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನಡುವೆ ವಾಕ್ಸಮರ ಮುಂದುವರಿದಿದೆ. ಕೆರಗೋಡು ಹನುಮ ಬಾವುಟ ಪ್ರಕರಣಕ್ಕೆ (Keragodu Hanuma flag row) ಸಂಬಂಧಿಸಿದಂತೆ ಇಂದು ಮಂಡ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕುಮಾರಸ್ವಾಮಿ, ಕೇವಲ ಎರಡು ನಿಮಿಷಗಳಲ್ಲಿ ಬಗೆಹರಿಯಬಹುದಾಗಿದ್ದ ಪ್ರಕರಣವನ್ನು ಕಾಂಗ್ರೆಸ್ ಪಕ್ಷ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದರು. ಕೆರಗೋಡುನಲ್ಲಿ ಗಲಾಟೆ ಸೃಷ್ಟಿಯಾಗುವುದಕ್ಕೆ ಪೊಲೀಸ್ ಇಲಾಖೆ ಮತ್ತು ಅಧಿಕಾರಿಗಳೇ ಕಾರಣ. 14 ಬಜೆಟ್ ಗಳನ್ನು ಮಂಡಿಸಿದ್ದೇನೆ ಮತ್ತು ಕುರುಬ ಸಮುದಾಯ ನಾಯಕ, ಮುಖ್ಯಮಂತ್ರಿ ಎಂದು ಕೊಚ್ಚಿಕೊಳ್ಳುವ ಸಿದ್ದರಾಮಯ್ಯನವರಿಗೆ ಅಲ್ಪಸ್ವಲ್ಪವೂ ಆಡಳಿತ ಜ್ಞಾನವಿದ್ದಂತಿಲ್ಲ, ನಿನ್ನೆಯ ದೃಶ್ಯಗಳನ್ನು ಟಿವಿ ಮಾಧ್ಯಮಗಳಲ್ಲಿ ವೀಕ್ಷಿಸಿದ ಬಳಿಕ ತಾನೇ ಜಿಲ್ಲಾಧಿಕಾರಿಗಳಿಗೆ 5 ಸಲ ಫೋನ್ ಮಾಡುರುವುದಾಗಿ ಕುಮರಸ್ವಾಮಿ ಹೇಳಿದರು. ಅಷ್ಟೆಲ್ಲ ಅನಾಹುತ ನಡೆದರೂ ತನ್ನಿಂದಾಗಿರುವ ಪ್ರಮಾದವನ್ನು ಸರಿಪಡಿಸಿಕೊಳ್ಳದ ಸಿದ್ದರಾಮಯ್ಯ ಸರ್ಕಾರ ಉದ್ಧಟತನ ಪ್ರದರ್ಶಿಸುತ್ತಿದೆ ಮತ್ತು ಅಮಾಯಕ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದ ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ