ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜವಾಯ್ತು!
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಸಿಲುಕಿರುವ ವಿಚಾರವಾಗಿ ಧಾರವಾಡದಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯಗೆ ಮುಡಾ ಸಂಕಷ್ಟದ ಬಗ್ಗೆ ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ಇದೀಗ ನಿಜವಾಗಿದೆ. ಹಾಗಿದ್ದರೆ ಕೋಡಿಶ್ರೀ ಹೇಳಿದ್ದೇನು? ವಿಡಿಯೋ ನೋಡಿ.
ಧಾರವಾಡ, ಸೆಪ್ಟೆಂಬರ್ 26: ಮುಡಾ ಸೈಟ್ ಹಗರಣ ಹೆಜ್ಜೆ ಹೆಜ್ಜೆಗೂ ಸಿದ್ದರಾಮಯ್ಯಗೆ (Siddaramaiah) ಸಂಕಷ್ಟ ತಂದೊಡ್ಡುತ್ತಿದೆ. ಪತ್ನಿ ಹೆಸರಿಗೆ ಹಂಚಿಕೆ ಆಗಿರುವ 14 ಸೈಟ್ಗಳ ಅಕ್ರಮದ ಕೇಸ್, ಹತ್ತಾರು ರೀತಿಯಲ್ಲಿ ಸಿದ್ದರಾಮಯ್ಯಗೆ ಬಿಸಿ ತಟ್ಟಿದೆ. ತವರಿನಲ್ಲೇ ಸಿಎಂ ವಿರುದ್ಧ ಎಫ್ಐಆರ್ ದಾಖಲಾಗಲು ಕೌಂಟ್ಡೌನ್ ಶುರುವಾಗಿದ್ದು, ರಾಜೀನಾಮೆಗಾಗಿ ಸ್ವಪಕ್ಷದಲ್ಲೂ ಆಗ್ರಹ ಕೇಳಿಬಂದಿದೆ. ಈ ಮಧ್ಯೆ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯಯನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ತಾಳೆ ಹಾಕುತ್ತಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಅಭಿಮನ್ಯುವಿನ ಬಿಲ್ಲಿನ ದಾರವನ್ನು ಮೋಸದಿಂದ ಕರ್ಣನ ಕೈಯಿಂದ ದಾರ ಕಟ್ ಮಾಡಿಸುತ್ತಾರೆ ಅಂತಾ ಹೇಳಿದ್ದೆ. ಮಹಾಭಾರತದಲ್ಲಿ ಕೃಷ್ಣನಿದ್ದ, ಭೀಮ ಗೆದ್ದ. ಇಲ್ಲಿ ಕೃಷ್ಣ ಇಲ್ಲ ದುರ್ಯೋಧನ ಗೆದ್ದ. ಅಭಿಮನ್ಯವಿನ ಹೆಂಡತಿ ರಣರಂಗ ಪ್ರವೇಶಿಸುತ್ತಾಳೆ ಎಂದಿದ್ದೆ ಈಗ ಏನಾಯ್ತು? ಬಿಲ್ಲಿನ ದಾರ ಕಟ್ ಮಾಡಿಸಿದರು. ಸಿದ್ದರಾಮಯ್ಯ ಜೀವನದಲ್ಲಿ ಎಂದಿಗೂ ಹೆಂಡತಿ ಹೊರಗೆ ಬಂದಿಲ್ಲ. ಪಾವಿತ್ರ್ಯತೆ ಇರುವ ಹೆಣ್ಣು ಮಗಳು. ಈಗ ಎಲ್ಲ ಕಡೆ ಅವರ ಹೆಸರು ಬಂತು ಎಂದಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.