Loading video

ಸಿದ್ದರಾಮಯ್ಯ ಎರಡು ವರ್ಷಗಳಿಂದ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ, ಸ್ಥಾನದಲ್ಲಿ ಮುಂದುವರಿಯುತ್ತಾರೆ: ಮಹದೇವಪ್ಪ

Updated on: Jul 03, 2025 | 11:53 AM

ಕರ್ನಾಟಕ ಪ್ರವಾಸದಲ್ಲಿರುವ ಎಐಸಿಸಿ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಎಲ್ಲ ಮಂತ್ರಿಗಳಿಗೆ ಮಾತ್ರ; ಸರ್ಕಾರ ಸುಭದ್ರ, ಪವರ್ ಶೇರಿಂಗ್ ಮಾತಾಡಿದರೆ ಕ್ರಮ, ಕಾಂಗ್ರೆಸ್ ಗುರಿ 2028ರ ಅಸೆಂಬ್ಲಿ ಚುನಾವಣೆ-ಈ ಮಂತ್ರ ಪಠಿಸಬೇಕು ಎಂದು ಹೇಳಿರುವಂತಿದೆ. ಯಾಕೆಂದರೆ ಕೆಲ ಶಾಸಕರು ಸುರ್ಜೆವಾಲಾ ಮತ್ತು ಡಿಕೆ ಶಿವಕುಮಾರ್ ವಾರ್ನಿಂಗ್ ಹೊರತಾಗಿಯೂ ಪವರ್ ಶೇರಿಂಗ್ ಕುರಿತು ಹೇಳಿಕೆ ನೀಡುತ್ತಿದ್ದಾರೆ.

ಚಿಕ್ಕಬಳ್ಳಾಪುರ, ಜುಲೈ 3: ಎಲ್ಲ ಶಾಸಕರ ಅನುಮೋದನೆ ಪಡೆದೇ ಪಕ್ಷದ ಹೈಕಮಾಂಡ್ (Congress high command) ಸಿದ್ದರಾಮಯ್ಯರನ್ನು ಮುಖ್ಯಂತ್ರಿಯನ್ನಾಗಿ ಮಾಡಿದ್ದಾರೆ, ಕಳೆದೆರಡು ವರ್ಷಗಳಿಂದ ಅವರು ಚೆನ್ನಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ, ಹಾಗಾಗಿ ಮುಂದಿನ ಮೂರು ವರ್ಷಕ್ಕೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ ಹೆಚ್ ಸಿ ಮಹದೇವಪ್ಪ ಹೇಳಿದರು. ನಂದಿ ಗಿರಿಧಾಮ ಹತ್ತುತ್ತ ನಮ್ಮ ವರದಿಗಾರನೊಂದಿಗೆ ಮಾತಾಡಿದ ಅವರು ಪಕ್ಷ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ನಿರ್ಣಯ ತೆಗೆದುಕೊಳ್ಳಬೇಕಾದರೂ ಅದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ, ಎಲ್ಲ ಶಾಸಕರ ಗುರಿ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋದು ಆಗಿದೆ ಎಂದು ಹೇಳಿದರು.

ಇದನ್ನೂ ಓದಿ:  ಗ್ಯಾರಂಟಿಗಳಿಗೆ ಎಸ್‌ಸಿಪಿ, ಟಿಎಸ್‌ಪಿ ಹಣ ನೀಡೋದಕ್ಕೆ ವಿರೋಧ: ಸಚಿವ ಮಹದೇವಪ್ಪ ನಿವಾಸದಲ್ಲಿ ದಲಿತ ನಾಯಕರ ಸಭೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ