AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂತರಾಜು ವರದಿಗೂ, ಈ ಸಮೀಕ್ಷೆಗೂ ಸಂಬಂಧ ಇಲ್ಲ: ಸಚಿವ ಹೆಚ್​​ಸಿ ಮಹದೇವಪ್ಪ

ಎಸ್​​ಸಿ ಒಳ ಮೀಸಲಾತಿ ಸಂಬಂಧ ಇಂದಿನಿಂದ ಸಮೀಕ್ಷೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಸಮಾಜಕಲ್ಯಾಣ ಸಚಿವ ಹೆಚ್​ಸಿ ಮಹದೇವಪ್ಪ, ಕಾಂತರಾಜು ವರದಿಗೂ ಈ ಸಮೀಕ್ಷೆಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಇದು ಪರಿಶಿಷ್ಟಜಾತಿ ಸಮುದಾಯಕ್ಕೆ ಮಾತ್ರ ಮಾಡುತ್ತಿರುವ ಸಮೀಕ್ಷೆ ಎಂದು ಅವರು ಹೇಳಿದ್ದಾರೆ.

ಕಾಂತರಾಜು ವರದಿಗೂ, ಈ ಸಮೀಕ್ಷೆಗೂ ಸಂಬಂಧ ಇಲ್ಲ: ಸಚಿವ ಹೆಚ್​​ಸಿ ಮಹದೇವಪ್ಪ
ಸಮಾಜಕಲ್ಯಾಣ ಸಚಿವ ಮಹದೇವಪ್ಪ
ಗಂಗಾಧರ​ ಬ. ಸಾಬೋಜಿ
|

Updated on: May 05, 2025 | 1:05 PM

Share

ಬೆಂಗಳೂರು, ಮೇ 05: ಕರ್ನಾಟಕ ಒಳಮೀಸಲಾತಿ ಜಾತಿ ಗಣತಿ (Caste Census) ಸಮೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಒಳಮೀಸಲಾತಿ ಬಗ್ಗೆ ನಿಖರವಾದ ವರದಿ ಕೊಡಲು ಆಯೋಗ ರಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸದ್ಯ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಮಾಜಕಲ್ಯಾಣ ಸಚಿವ ಹೆಚ್​ಸಿ ಮಹದೇವಪ್ಪ (HC Mahadevappa), ಕಾಂತರಾಜು ವರದಿಗೂ ಈ ಸಮೀಕ್ಷೆಗೂ ಸಂಬಂಧ ಇಲ್ಲ. ಇದು ಪರಿಶಿಷ್ಟಜಾತಿ ಸಮುದಾಯಕ್ಕೆ ಮಾಡುತ್ತಿರುವ ಸಮೀಕ್ಷೆ ಎಂದು ಅವರು ಹೇಳಿದ್ದಾರೆ.

ಎಸ್​​ಸಿ ಒಳ ಮೀಸಲಾತಿ ಸಂಬಂಧ ಇಂದಿನಿಂದ ಸಮೀಕ್ಷೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸಚಿವ ಹೆಚ್​ಸಿ ಮಹದೇವಪ್ಪ, ಇದು ಎಸ್​​ಸಿ ಅವರಿಗೆ ಮಾತ್ರ ಈ ಸಮೀಕ್ಷೆ. ಇದು ಎಂಪರಿಕಲ್ ಡಾಟಾ ಕಲೆಕ್ಟ್ ಮಾಡುವುದು ಅಷ್ಟೇ. ಈ ಸಮೀಕ್ಷೆಗೆ ಎಡಗೈ ಮತ್ತು ಬಲಗೈನವರ ಒಮ್ಮತ ಇದೆ. ಯಾರು ಕೂಡ ಸುಳ್ಳು ಹೇಳೋಕೆ‌ ಆಗಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಒಳಮೀಸಲಾತಿ ಜಾತಿ ಗಣತಿ ಇಂದಿನಿಂದ ಶುರು: ಸಿಎಂ ಸಿದ್ದರಾಮಯ್ಯ ಮಾಹಿತಿ

ಇದನ್ನೂ ಓದಿ
Image
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
Image
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
Image
ಜಾತಿಗಣತಿಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರವನ್ನು ಆಗ್ರಹಿಸುತಿತ್ತು: ಶಿವಕುಮಾರ್
Image
ಜನಗಣತಿಯಲ್ಲಿ ಜಾತಿಗಣತಿ; ಕೇಂದ್ರದ ನಿರ್ಧಾರಕ್ಕೆ ಕಾಂಗ್ರೆಸ್ ಹೇಳಿದ್ದೇನು?

ಕಾಂತರಾಜು ವರದಿಯಲ್ಲಿ, ನ್ಯಾಷನಲ್ ಸಮೀಕ್ಷೆಯಲ್ಲಿ ಅಂಕಿ-ಅಂಶ ಇಲ್ಲ. ಹೀಗಾಗಿ ಯಾರು ಕೂಡ ಅನುಮಾನ ಪಡುವ ಹಾಗಿಲ್ಲ. ಯಾರು, ಎಷ್ಟು ಜನ ಇದ್ದಾರೆ ಅಂತಾ ಯಾರಿಗೂ ಸಹ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಗಣತಿ ಕಾರ್ಯಕ್ಕೆ ಅಂದಾಜು 100 ಕೋಟಿ ರೂ ಖರ್ಚು

ಪರಿಶಿಷ್ಟ ಜಾತಿ ಅನ್ನೋದು ಜಾತಿ ಅಲ್ಲ, ಅದೊಂದು ಗುಂಪು. ಎಸ್​ಸಿ ಒಳ ಮೀಸಲಾತಿ ಸಮೀಕ್ಷೆ ಇದೊಂದು ಚಾರಿತ್ರಿಕವಾದದ್ದು. ಪರಿಶಿಷ್ಟ ಜಾತಿ ಸಮುದಾಯದ ದತ್ತಾಂಶಗಳ ಸಂಗ್ರಹಕ್ಕಾಗಿ ಸುಪ್ರೀಂಕೋರ್ಟ್​ ನಿರ್ದೇಶನದಂತೆ ಸಮೀಕ್ಷೆ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿಗಳಲ್ಲಿನ 101 ಜಾತಿಗಳ ಜನಸಂಖ್ಯೆ ತಿಳಿಯಲು ಒಳಮೀಸಲಾತಿ ಜಾರಿಗೆ ಗಣತಿ ಮಾಡುತ್ತಿದ್ದೇವೆ. ಗಣತಿ ಕಾರ್ಯಕ್ಕೆ ಅಂದಾಜು 100 ಕೋಟಿ ರೂ ಹಣ ಖರ್ಚು ಆಗಲಿದೆ ಎಂದು ತಿಳಿಸಿದ್ದಾರೆ.

ಕಾಂತರಾಜ್ ಹೇಳಿದ್ದಿಷ್ಟು

ಜಾತಿಗಣತಿ ಕುರಿತು ಕೇಂದ್ರ ಕೈಗೊಂಡ ನಿರ್ಧಾರಕ್ಕೆ ಸ್ವಾಗತವಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಹೇಳಿದ್ದಾರೆ. ಯಾವ ಪಕ್ಷ ಅನ್ನೋ ವಿಚಾರ ಇಲ್ಲಿ ಬರಲ್ಲ, ಜಾತಿಗಣತಿ ಮಾಡಲೇಬೇಕು. ಸಾಮಾಜಿಕ, ಶೈಕ್ಷಣಿಕ ವರದಿಯಲ್ಲಿ ಜಾತಿ ಸೇರಿಸಿದರೆ ಜಾತಿಗಣತಿ ಆಗಲ್ಲ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಜಾತಿ ಗಣತಿ ಅಂತ ಪರಿಗಣಿಸಲು ಬರುವುದಿಲ್ಲ. ಜಾತಿ ಜೊತೆಗೆ ಇತರೆ ಅಂಶಗಳನ್ನು ಸೇರಿಕೊಂಡಿವೆ ಎಂದಿದ್ದಾರೆ.

ಇದನ್ನೂ ಓದಿ: ಜನಗಣತಿಯಲ್ಲಿ ಜಾತಿ ಗಣತಿ ಸೇರ್ಪಡೆ; ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಹೇಳಿದ್ದೇನು?

ಉದ್ಯೋಗ, ಆರ್ಥಿಕತೆ ಸೇರಿದಂತೆ ಎಲ್ಲವೂ ಒಳಗೊಂಡಂತೆ, ಸಾಮಾಜಿಕ ಶೈಕ್ಷಣಿಕ ಅಂಶಗಳು ಪರಿಗಣಿಸಿದರೆ ರಾಜ್ಯ ಜನಗಣಿತಿಗೆ ಮಾನ್ಯ. ಉದ್ಯೋಗ, ಅರ್ಥಿಕ ಎಲ್ಲವೂ ಒಳಗೊಂಡಿದಂತೆ ಸಾಮಾಜಿಕ ಶೈಕ್ಷಣಿಕ ಅಂತ ಆಗಿದೆ. ರಾಜ್ಯದಲ್ಲಿರುವ ಹಿಂದುಳಿದವರ ಪಟ್ಟಿ ಬೇರೆ, ರಾಷ್ಟ್ರದ್ದು ಬೇರೆ. 1996ರಲ್ಲಿ ಮಾಡಿರುವ ಸಮೀಕ್ಷೆಯನ್ನ ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ ಎಂದು ಹೇಳಿದರು.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!