ಓಬಿಸಿ ಸಲಹಾ ಸಮಿತಿಗೆ ಸಿದ್ದರಾಮಯ್ಯ ಅಧ್ಯಕ್ಷನಾದರೂ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತಿಲ್ಲ: ಸತೀಶ್ ಜಾರಕಿಹೊಳಿ

Updated on: Jul 26, 2025 | 5:59 PM

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯುವಾಗ, ಮತಗಳ್ಳತನ ಮತ್ತು ಅಕ್ರಮ ನಡೆದ ಕಾರಣಕ್ಕೆ ಕಾಂಗ್ರೆಸ್​ಗೆ ಕಡಿಮೆ ಸ್ಥಾನ ಬಂದಿವೆ ಅಂತ ಶಿವಕುಮಾರ್ ಹೇಳಿರುವುದು ಸರಿ ಎಂದ ಜಾರಕಿಹೊಳಿ, ಮಹಾರಾಷ್ಟ್ರದ ದೊಡ್ಡ ಉದಾಹರಣೆ ನಮ್ಮ ಮುಂದಿದೆ, ಅಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಲಕ್ಷಾಂತರ ಹೊಸ ವೋಟರ್​​ಗಳನ್ನು ಸೇರಿಸಲಾಗಿದೆ ಮತ್ತು ಅನೇಕರ ಹೆಸರುಗನ್ನು ಡಿಲೀಟ್ ಮಾಡಲಾಗಿದೆ ಅಂತ ಹೇಳಿದರು.

ಬಾಗಲಕೋಟೆ, ಜುಲೈ 26: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಿನ್ನೆ ದೆಹಲಿಯಲ್ಲಿಯಲ್ಲಿ ನಡೆದ ಭಾಗೀದಾರ್ ನ್ಯಾಯ್ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು, ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಸೆಳೆಯುವ ಪ್ರಯತ್ನ ಎಐಸಿಸಿ ಮಾಡುವಂತೆ ಕಾಣುತ್ತಿದೆ, ಹಾಗೇನಾದರೂ ನಡೆದರೆ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬರಲಾರದೇ ಎಂದು ಕೇಳಿದ ಪ್ರಶ್ನೆಗೆ ಸಚಿವ ಸತೀಶ್ ಜಾರಕಿಹೊಳಿ, ಕುತ್ತೇನೂ ಬರಲಾರದು, ಅದೇನಿದ್ದರೂ ಹೆಚ್ಚುವರಿ ಜವಾಬ್ದಾರಿ ಎಂದು ಹೇಳಿದರು. ರಾಷ್ಟ್ರ ರಾಜಕಾರಣದಲ್ಲಿ ತನಗೆ ಅಭಿರುಚಿ ಇಲ್ಲ ಅನ್ನೋದನ್ನ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟಪಡಿಸಿದ್ದಾರೆ, ಹಾಗಾಗಿ ಸಿಎಂ ಸ್ಥಾನ ತ್ಯಜಿಸುವಂತೆ ಹೈಕಮಾಂಡ್ ಅವರ ಮೇಲೆ ಒತ್ತಡ ಹೇರಲಾರದು ಎಂದು ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ:  ನನ್ನ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿಲ್ಲದಿರುವುದನ್ನು ಸುರ್ಜೇವಾಲಾ ಚರ್ಚಿಸಿದರು: ಸತೀಶ್ ಜಾರಕಿಹೊಳಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ