ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ ಭರ್ಜರಿ ಸನ್ಮಾನ, ಆದ್ರೆ ಮೈಸೂರು ಪೇಟಾ ನಿರಾಕರಿಸಿದ ಸಿಎಂ
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶ್ವವಿಖ್ಯಾತ ದಸರಾಗೆ ನಾದಬ್ರಹ್ಮ ಹಂಸಲೇಖ ಅವರು ಚಾಲನೆ ನೀಡಿದರು. . ಬಳಿಕ ಕಾರ್ಯಕ್ರಮದ ವೇದಿಕೆ ಮೇಲೆ ಸಿದ್ದರಾಮಯ್ಯನವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸನ್ಮಾನಿಸಿ ಗೌರವಿಸಿದರು. ಅಂಬಾರಿಯನ್ನ ಹೊತ್ತು ಸಾಗುವ ಆನೆ ಉಡುಗೊರೆ ನೀಡಿ ಸನ್ಮಾನಿಸಿದರು. ಆದ್ರೆ, ಈ ವೇಳೆ ಸಿದ್ದರಾಮಯ್ಯ ಮೈಸೂರು ಪೇಟ ಧರಿಸಲು ನಿರಾಕರಿಸಿದರು.
ಮೈಸೂರು, (ಅಕ್ಟೋಬರ್ 15): ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶ್ವವಿಖ್ಯಾತ ದಸರಾಗೆ ನಾದಬ್ರಹ್ಮ ಹಂಸಲೇಖ ಅವರು ಚಾಲನೆ ನೀಡಿದರು. ಜ್ಯೋತಿ ಬೆಳಗಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಈ ಬಾರಿಯ ದಸರೆಗೆ ಹಂಸಲೇಖ ಮುನ್ನುಡಿ ಬರೆದರು. ಬಳಿಕ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿ, ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆ, ವಿಜಯನಗರ ಸಾಮ್ರಾಜ್ಯದ ಆಡಳಿತವನ್ನು ಮೆಲುಕು ಹಾಕಿದರು. ಬಳಿಕ ಕಾರ್ಯಕ್ರಮದ ವೇದಿಕೆ ಮೇಲೆ ಸಿದ್ದರಾಮಯ್ಯನವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸನ್ಮಾನಿಸಿ ಗೌರವಿಸಿದರು. ಅಂಬಾರಿಯನ್ನ ಹೊತ್ತು ಸಾಗುವ ಆನೆ ಉಡುಗೊರೆ ನೀಡಿ ಸನ್ಮಾನಿಸಿದರು. ಆದ್ರೆ, ಈ ವೇಳೆ ಸಿದ್ದರಾಮಯ್ಯ ಮೈಸೂರು ಪೇಟ ಧರಿಸಲು ನಿರಾಕರಿಸಿದರು. ಈ ಹಿಂದೆ ಹಲವು ಕಾರ್ಯಕ್ರಮಗಳಲ್ಲಿ ಪೇಟ ತಿರಸ್ಕರಿಸಿದ್ದರು, ಇದೀಗ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲೂ ಸಹ ಪೇಟ ಹಾಕಿಕೊಳ್ಳಲು ನಿರಾಕರಿಸಿದ್ದಾರೆ.
Published on: Oct 15, 2023 02:59 PM
Latest Videos