Siddaramaiah: ಜಮೀರ್​ ಪುತ್ರನ ‘ಬನಾರಸ್​’ ನೋಡಿ ವಿಮರ್ಶೆ ತಿಳಿಸಿದ ಸಿದ್ದರಾಮಯ್ಯ; ಅವರಿಗೆ ಹೆಚ್ಚು ಇಷ್ಟ ಆಗಿದ್ದೇನು?

| Updated By: ಮದನ್​ ಕುಮಾರ್​

Updated on: Nov 07, 2022 | 1:27 PM

Banaras | Zaid Khan ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರು ‘ಬನಾರಸ್​’ ಸಿನಿಮಾ ನೋಡಿದ್ದಾರೆ. ರಾಜಕಾರಣದ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಅವರು ಚಿತ್ರ ವೀಕ್ಷಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ‘ಬನಾರಸ್​’ ಸಿನಿಮಾ (Banaras) ನೋಡಿದ್ದಾರೆ. ಈ ಸಿನಿಮಾದಲ್ಲಿ ಜಮೀರ್​ ಅಹ್ಮದ್​ ಅವರ ಪುತ್ರ ಝೈದ್​ ಖಾನ್​ ಹೀರೋ ಆಗಿ ನಟಿಸಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. ‘ಮೊದಲ ಸಿನಿಮಾದಲ್ಲಿಯೇ ಅನುಭವಿ ಹೀರೋ ರೀತಿ ಝೈದ್​ ಖಾನ್​​ (Zaid Khan) ನಟಿಸಿದ್ದಾರೆ. ಅವರ ಮತ್ತು ಸೋನಲ್​ ಮಾಂಥೆರೋ ಜೋಡಿ ಚೆನ್ನಾಗಿದೆ. ಜಯತೀರ್ಥ ಬರೆದ ಕಥೆ ಕುತೂಹಲಕಾರಿ ಆಗಿದೆ. ಎಲ್ಲಿಯೂ ಬೋರ್​ ಆಗಲ್ಲ’ ಎಂದು ಹೇಳಿರುವ ಸಿದ್ದರಾಮಯ್ಯ ಅವರು ಇದರಲ್ಲಿನ ಸಸ್ಪೆನ್ಸ್​ ಅಂಶವನ್ನು ಹೆಚ್ಚು ಇಷ್ಟಪಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 07, 2022 12:10 PM