ಮುರುಘಾ ಮಠದಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರಿಗೆ ಡ್ರಗ್ಸ್ ನೀಡಲಾಗುತಿತ್ತು: ಕೆವಿ ಸ್ಟ್ಯಾನ್ಲಿ, ಒಡನಾಡಿ ಸಂಸ್ಥೆ

ಮುರುಘಾ ಮಠದಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರಿಗೆ ಡ್ರಗ್ಸ್ ನೀಡಲಾಗುತಿತ್ತು: ಕೆವಿ ಸ್ಟ್ಯಾನ್ಲಿ, ಒಡನಾಡಿ ಸಂಸ್ಥೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 07, 2022 | 1:14 PM

ಹೆದರಬೇಡಿ ದೇವರು ನಿಮಗೆ ಸಹಾಯ ಮಾಡುತ್ತಾನೆ ಅಂತ ಹೇಳಿ ಮರುದಿನ ಬೆಳಗ್ಗೆಯೇ ತಮ್ಮ ನಂಬಿಕಸ್ತ ವ್ಯಕ್ತಿಯೊಬ್ಬನ ಮೂಲಕ ಅವರಿಗೆ ಐದ್ಹತ್ತು ಸಾವಿರ ರೂಪಾಯಿಗಳನ್ನು ಕಳಿಸುತ್ತಿದ್ದರು ಅಂತ ಸ್ಟ್ಯಾನ್ಲಿ ಹೇಳುತ್ತಾರೆ.

ಮೈಸೂರು:  ಚಿತ್ರದುರ್ಗದ ಮುರುಘಾ ಮಠದಲ್ಲಿ (Murugha Mutt) ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರಕ್ಕೆ ಹೊರತಾಗಿ ಬೇರೆ ಅಪರಾಧಗಳು ಸಹ ನಡೆದಿವೆ ಅಂತ ಅಂತ ಒಡನಾಡಿ ಸೇವಾ ಸಂಸ್ಥೆಯ (Odanadi Seva Trust) ಸಹ-ಸಂಸ್ಥಾಪಕರಾಗಿರುವ ಕೆವಿ ಸ್ಟ್ಯಾನ್ಲಿ (KV Stanley) ಹೇಳಿದ್ದಾರೆ. ಸಂಸ್ಥೆಯ ಕಚೇರಿಯಲ್ಲಿ ಟಿವಿ9 ಕನ್ನಡ ವಾಹಿನಿಯ ಪ್ರತಿನಿಧಿ ರಾಮ್ ಅವರೊಂದಿಗೆ ಮಾತಾಡಿದ ಸ್ಟ್ಯಾನ್ಲಿ, ಮಕ್ಕಳಿಗೆ ಡ್ರಗ್ಸ್ ಕೂಡ ನೀಡಲಾಗುತ್ತಿತ್ತು ಮತ್ತು ಸಂತ್ರಸ್ತೆಯರ ತಂದೆ ತಾಯಿಗಳಿಗೆ ರಾತ್ರೋರಾತ್ರಿ ಫೋನ್ ಮಾಡಿ, ಹೆದರಬೇಡಿ ದೇವರು ನಿಮಗೆ ಸಹಾಯ ಮಾಡುತ್ತಾನೆ ಅಂತ ಹೇಳಿ ಮರುದಿನ ಬೆಳಗ್ಗೆಯೇ ತಮ್ಮ ನಂಬಿಕಸ್ತ ವ್ಯಕ್ತಿಯೊಬ್ಬನ ಮೂಲಕ ಅವರಿಗೆ ಐದ್ಹತ್ತು ಸಾವಿರ ರೂಪಾಯಿಗಳನ್ನು ಕಳಿಸುತ್ತಿದ್ದರು ಅಂತ ಸ್ಟ್ಯಾನ್ಲಿ ಹೇಳುತ್ತಾರೆ. ಶ್ರೀಗಳು ಸಹ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.