ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಲಿ: ವಾಟಾಳ್ ನಾಗರಾಜ್ ಖಡಕ್ ಮಾತು
ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಚಳುವಳಿ ನಾಯಕ ವಾಟಾಳ್ ನಾಗರಾಜ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ತಮಗಿರುವ 50 ವರ್ಷಗಳ ಬಾಂಧವ್ಯವನ್ನು ಸ್ಮರಿಸಿದರು. ಸಿದ್ದರಾಮಯ್ಯನವರು ಆರೋಗ್ಯದಿಂದ ಇರುವವರೆಗೂ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದಿದ್ದಾರೆ. ರಾಜೀನಾಮೆ ಕೊಡಬೇಕಿಲ್ಲ, ಅವರ ಜತೆ ನಾವಿದ್ದೇವೆ ಎಂದು ಹೇಳಿದ್ದಾರೆ.
ಬೆಂಗಳೂರು, ಅಕ್ಟೋಬರ್ 01: ಎಲ್ಲಿಯವರೆಗೂ ಆರೋಗ್ಯ ಚೆನ್ನಾಗಿರುತ್ತೋ ಅಲ್ಲಿವರೆಗೂ ಸಿದ್ದರಾಮಯ್ಯ (Siddaramaiah) ಸಿಎಂ ಆಗಿ ಮುಂದುವರಿಯಲಿ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ನಗರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಎಂತಹದ್ದೇ ಸಂದರ್ಭದಲ್ಲೂ ಬೆಂಬಲ ನೀಡುತ್ತೇವೆ. ರಾಜೀನಾಮೆ ಕೊಡಬೇಕಿಲ್ಲ, ಅವರ ಜತೆ ನಾವಿದ್ದೇವೆ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
