ತಮ್ಮ ಲೆವೆಲ್ಲಿನ ನಾಯಕರ ಬಗ್ಗೆ ಮಾತಾಡುವಾಗ ಸಿದ್ದರಾಮಯ್ಯ ಎಚ್ಚರದಿಂದ ಪದ ಪ್ರಯೋಗ ಮಾಡಬೇಕು: ಸೋಮಶೇಖರ ರೆಡ್ಡಿ
ಅವರು ತಮ್ಮ ಹಂತದ ನಾಯಕರ ಬಗ್ಗೆ ಇಂಥ ಶಬ್ದಗಳನ್ನು ಬಳಸುವುದು ತರವಲ್ಲ, ಎಚ್ಚರಿಕೆಯಿಂದ ಪದ ಪ್ರಯೋಗ ಮಾಡಬೇಕೆಂದು ಅವರಿಗೆ ಬುದ್ಧಿವಾದ ಹೇಳಬಯಸುತ್ತೇನೆ ಎಂದು ರೆಡ್ಡಿ ಹೇಳಿದರು.
Koppal: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಬಿಜೆಪಿ ನಾಯಕರನ್ನು ಸೀಳು ನಾಯಿಗಳೆಂದು ಹೇಳಿರೋದಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಶಾಸಕ ಜಿ ಸೋಮಶೇಖರ ರೆಡ್ಡಿ (G Somashekhar Reddy) ಅವರು ಗುರುವಾರ ಗಂಗಾವತಿಯ ಪಂಪಾ ಸರೋವರದಲ್ಲಿ (Pampa Sarovara) ಸುದ್ದಿಗಾರೊಂದಿಗೆ ಮಾತಾಡುವಾಗ ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಇಂಥ ಭಾಷೆ ಬಳಸುವುದು ಅವರಿಗೆ ಶೋಭೆ ನೀಡುವುದಿಲ್ಲ. ನಾಯಿ ವಿಶ್ವಾಸ ಪ್ರತೀಕವಾಗಿದೆ ಮತ್ತು ನಾರಾಯಣ ಅಂದರೆ ದೇವರ ಸ್ವರೂಪ ಅಂತಲೂ ನಾವು ಭಾವಿಸುತ್ತೇವೆ. ಆದರೂ ಅವರು ತಮ್ಮ ಹಂತದ ನಾಯಕರ ಬಗ್ಗೆ ಇಂಥ ಶಬ್ದಗಳನ್ನು ಬಳಸುವುದು ತರವಲ್ಲ, ಎಚ್ಚರಿಕೆಯಿಂದ ಪದ ಪ್ರಯೋಗ ಮಾಡಬೇಕೆಂದು ಅವರಿಗೆ ಬುದ್ಧಿವಾದ ಹೇಳಬಯಸುತ್ತೇನೆ ಎಂದು ರೆಡ್ಡಿ ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos