ದಾಖಲೆಯ 16 ನೇ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯಗೆ ಟಗರನ್ನು ಗಿಫ್ಟ್ ನೀಡಲು ಬಂದ ಅಭಿಮಾನಿಗಳು
ಸಿದ್ದರಾಮಯ್ಯ ಒಬ್ಬ ಕುರಿಗಾಹಿ, ಕುರಿ ಎಣಿಸಲು ಬಾರದವನು ರಾಜ್ಯದ ಆಯವ್ಯಯ ಪತ್ರವನ್ನೇನು ಮಂಡಿಸಿಯಾನು ಎಂದು ಮೂದಲಿಸಿದವರಿಗೆ, 8 ಬಾರಿ ಹಣಕಾಸು ಸಚಿವನಾಗಿ ಮತ್ತು 8 ಬಾರಿ ಮುಖ್ಯಮಂತ್ರಿಯಾಗಿ ಒಟ್ಟು 16 ಬಾರಿ ಬಜೆಟ್ ಮಂಡಿಸುವ ಮೂಲಕ ಸರಿಯಾದ ಉತ್ತರ ನೀಡಿದ್ದಾರೆ. ಸಿದ್ದರಾಮಯ್ಯ ಅಭಿಮಾನಿ ಸಂಘಕ್ಕೆ ಡಾ ಯತೀಂದ್ರ ಸಿದ್ದರಾಮಯ್ಯ ಯುವ ಬ್ರಿಗೇಡ್ ಅಂತ ಹೆಸರಿಡಲಾಗಿದೆ.
ಬೆಂಗಳೂರು, ಮಾರ್ಚ್ 7: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇವತ್ತು ವಿಧಾನ ಸಭೆಯಲ್ಲಿ ರಾಜ್ಯದ ಮುಂಗಡಪತ್ರವನ್ನು (Karnataka Budget) ಮಂಡಿಸುತ್ತಿರಬೇಕಾದರೆ, ವರುಣ ಕ್ಷೇತ್ರದ ಅವರ ಅಭಿಮಾನಿಗಳು ಅಭಿನಂದನೆ ಸಲ್ಲಿಸಲು ಮತ್ತು ಅವರಿಗೆ ಗಿಫ್ಟ್ ರೂಪದಲ್ಲಿ ಒಂದು ಟಗರನ್ನು ನೀಡಲು ಬಂದಿದ್ದಾರೆ. ಅವರು ದಾಖಲೆಯ ಹದಿನಾರನೇ ಬಜೆಟ್ ಮಂಡಿಸುತ್ತಿದ್ದಾರೆ, ಅವರು ಸ್ಥಾಪಿಸಿರುವ ದಾಖಲೆಯನ್ನು ಯಾರಿಂದಲೂ ಸರಿಗಟ್ಟಲಾಗದು ಎಂದು ಅಭಿಮಾನಿಯೊಬ್ಬರು ಅಭಿಮಾನದಿಂದ ಹೇಳುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕನ್ನಡ ಸಿನಿಮಾಗಳಿಗಾಗಿ ಒಟಿಟಿ, ಕೈಗಾರಿಕಾ ನೀತಿಯಡಿ ಚಿತ್ರರಂಗ; ಬಜೆಟ್ನಲ್ಲಿ ಘೋಷಣೆ ಮಾಡಿದ ಸಿದ್ದರಾಮಯ್ಯ