Loading video

ಅಧಿಕಾರದಲ್ಲಿ ಮುಂದುವರಿಯಲು ಸಿದ್ದರಾಮಯ್ಯರಿಂದ ಹಿಂದೂ ಸಮಾಜ ಒಡೆವ ಪ್ರಯತ್ನ: ಪ್ರತಾಪ್ ಸಿಂಹ

|

Updated on: Apr 19, 2025 | 1:57 PM

ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲೆಯ 16 ಬಾರಿ ಬಜೆಟ್ ಮಂಡಿಸಿದ್ದರೂ ಜನಗಣತಿ ಮತ್ತು ಸಾಮಾಜಿಕ ಹಾಗೂ ಅರ್ಥಿಕ ಸಮೀಕ್ಷೆಗಳ ಬಗ್ಗೆ ಕನಿಷ್ಠ ಜ್ಞಾನ ಹೊಂದಿಲ್ಲದಿರೋದು ಆಶ್ಚರ್ಯ ಮೂಡಿಸುತ್ತದೆ, ಯಾಕೆಂದರೆ 1948ರ ಜನಗಣತಿ ಕಾಯ್ದೆ ಪ್ರಕಾರ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಯುತ್ತದೆ ಮತ್ತು ಅದರ ಬೆನ್ನಲ್ಲೇ ಸೋಶಿಯೋ-ಇಕಾನಾಮಿಕ್ ಸರ್ವೇ ಕೂಡ ನಡೆಯುತ್ತದೆ ಎಂದು ಮಾಜಿ ಸಂಸದ ಹೇಳಿದರು.

ಬೆಂಗಳೂರು, ಏಪ್ರಿಲ್ 19: ಜಾತಿ ಗಣತಿ ಹೆಸರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ಹಿಂದೂ ಸಮಾಜವನ್ನು ಒಡೆಯಲು ಹವಣಿಸುತ್ತಿದ್ದಾರೆ, ಹಿಂದೆ 2006ರಲ್ಲಿ ಅವರು ಅಹಿಂದ ಹೆಸರಲ್ಲಿ ಅಲ್ಪಸಂಖ್ಯಾತರು, ದಲಿತರ ಮತ್ತು ಹಿಂದುಳಿದ ವರ್ಗಗಳನ್ನು ಹಿಂದೂಗಳಿಂದ ಬೇರೆ ಮಾಡಿದರು, ಈಗ ಕೇವಲ ಅಧಿಕಾರದಲ್ಲಿ ಮುಂದುವರಿಯವುದಕ್ಕೋಸ್ಕರ ಇಡೀ ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು. ಹಿಂದೂಗಳು ತಾನು ಲಿಂಗಾಯತ, ಗೌಡ, ಒಕ್ಕಲಿಗ, ದಲಿತ ಅಂತ ಹೇಳೋದನ್ನು ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಇರುವ ಯೋಚನೆ ಮಾಡಬೇಕು ಎಂದು ಪ್ರತಾಪ್ ಹೇಳಿದರು.

ಇದನ್ನೂ ಓದಿ:  ಜಾತಿ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ: ಜಾತಿ ಗಣತಿ ವರದಿಯಲ್ಲಿ ಒಳಪಂಗಡ ಗೊಂದಲ, ಚರ್ಚೆಗೆ ಗ್ರಾಸ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ