ಕ್ಲೈಮ್ಯಾಕ್ಸ್ ಹಂತ ತಲುಪಿದ ಸಿಎಂ ಕುರ್ಚಿ ಕದನ: ಪದತ್ಯಾಗನಾ? ಪಟ್ಟಾಭಿಷೇಕನಾ?

Updated on: Nov 28, 2025 | 4:26 PM

ಕರ್ನಾಟಕ ಕಾಂಗ್ರೆಸ್​ನಲ್ಲಿ ಕುರ್ಚಿ ಗುದ್ದಾಟ ದಿನಕ್ಕೊಂದು ತಿರುವು, ಕ್ಷಣಕ್ಕೊಂದು ದಿಕ್ಕು ಬದಲಿಸ್ತಿದೆ. ಕುರ್ಚಿ ಗುದ್ದಾಟ ತಾರಕಕ್ಕೇರ್ತಿದ್ದು, ಸಿಎಂ ಮತ್ತು ಡಿಸಿಎಂ ಬಣಗಳ ತಂತ್ರ ಪ್ರತಿತಂತ್ರ ಜೋರಾಗಿದೆ. ಹೀಗಾಗಿ ಕೈ ಪಾಳೆಯದಲ್ಲಿ ಉಂಟಾಗಿರುವ ನಾಯಕತ್ವ ಬದಲಾವಣೆ ಗುದ್ದಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ತಿಂಗಳಾಂತ್ಯಕ್ಕೆ ಅಥವಾ ಡಿಸಿಎಂಬರ್ ಮೊದಲ ವಾರದೊಳಗೆ ಹೈಕಮಾಂಡ್ ಈ ಬಿಕ್ಕಟ್ಟಿಗೆ ಪರಿಹಾರ ಸೂತ್ರ ರೂಪಿಸುವ ಸಾಧ್ಯತೆಗಳಿವೆ.

ಬೆಂಗಳೂರು, (ನವೆಂಬರ್ 28): ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (DK Shivakumar) ನಡುವಿನ ಅಧಿಕಾರ ಹಂಚಿಕೆ ಗುದ್ದಾಟ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಕರ್ನಾಟಕ ಕಾಂಗ್ರೆಸ್​ನಲ್ಲಿ ಕುರ್ಚಿ ಗುದ್ದಾಟ ದಿನಕ್ಕೊಂದು ತಿರುವು, ಕ್ಷಣಕ್ಕೊಂದು ದಿಕ್ಕು ಬದಲಿಸ್ತಿದೆ. ಕುರ್ಚಿ ಗುದ್ದಾಟ ತಾರಕಕ್ಕೇರ್ತಿದ್ದು, ಸಿಎಂ ಮತ್ತು ಡಿಸಿಎಂ ಬಣಗಳ ತಂತ್ರ ಪ್ರತಿತಂತ್ರ ಜೋರಾಗಿದೆ. ಹೀಗಾಗಿ ಕೈ ಪಾಳೆಯದಲ್ಲಿ ಉಂಟಾಗಿರುವ ನಾಯಕತ್ವ ಬದಲಾವಣೆ ಗುದ್ದಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ತಿಂಗಳಾಂತ್ಯಕ್ಕೆ ಅಥವಾ ಡಿಸಿಎಂಬರ್ ಮೊದಲ ವಾರದೊಳಗೆ ಹೈಕಮಾಂಡ್ ಈ ಬಿಕ್ಕಟ್ಟಿಗೆ ಪರಿಹಾರ ಸೂತ್ರ ರೂಪಿಸುವ ಸಾಧ್ಯತೆಗಳಿವೆ.

ಸೋನಿಯಾ ಗಾಂಧಿ ಇಂದು (ನವೆಂಬರ್ 28) ರಾತ್ರಿ ವಿದೇಶದಿಂದ ಹಿಂದಿರುಗಲಿದ್ದು, ಭಾನುವಾರ ಸಂಜೆ ಕಾಂಗ್ರೆಸ್​ನ ಹಿರಿಯ ನಾಯಕರು ಸಭೆ ಸೇರಲಿದ್ದಾರೆ. ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ರಾಜ್ಯದ ನಾಯಕತ್ವ ಗೊಂದಲದ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು ಈ ಸಭೆ ನಂತರ ಸಿಎಂ ಸಿದ್ದರಾಮ್ಯಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​​​ ಅವರನ್ನ ದೆಹಲಿಗೆ ಕರೆದು ಮಾತುಕತೆ ನಡೆಸುವ ಮೂಲಕ ಕುರ್ಚಿ ಕದನ  ಗೊಂದಲಕ್ಕೆ ತೆರೆ ಎಳೆಯುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಡಿಸೆಂಬರ್ 8ರಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಲಿದೆ. ಹೀಗೆ  ಅದರೊಳಗೆ  ಸಿಎಂ-ಡಿಸಿಎಂ ನಡುವಿನ ಬಿಕ್ಕಟ್ಟುನ್ನು ಹೈಕಮಾಂಡ್ ಪರಿಹರಿಸಬೇಕಿದೆ.  ಹೀಗಾಗಿ ಭಾನುವಾರದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿದ್ದು, ಪದತ್ಯಾಗನಾ? ಪಟ್ಟಾಭಿಷೇಕನಾ? ಎನ್ನುವ ಕುತೂಹಲ ಮೂಡಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 28, 2025 04:16 PM