ಸಿದ್ದರಾಮಯ್ಯ ಹುಟ್ಟುಹಬ್ಬ ಪಕ್ಷದ ಕಾರ್ಯಕ್ರಮವಾಗಿದೆ, ಪಕ್ಷದ ವೇದಿಕೆಯಲ್ಲಿ ಅದನ್ನು ಆಚರಿಸಲಾಗುವುದು: ಡಿಕೆ ಶಿವಕುಮಾರ

ಸಿದ್ದರಾಮಯ್ಯ ಹುಟ್ಟುಹಬ್ಬ ಪಕ್ಷದ ಕಾರ್ಯಕ್ರಮವಾಗಿದೆ, ಪಕ್ಷದ ವೇದಿಕೆಯಲ್ಲಿ ಅದನ್ನು ಆಚರಿಸಲಾಗುವುದು: ಡಿಕೆ ಶಿವಕುಮಾರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 07, 2022 | 5:23 PM

ಸದರಿ ಕಾರ್ಯ್ರಮಕ್ಕೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ಕೂಡ ಆಗಮಿಸಲಿದ್ದಾರೆ ಎಂದು ಶಿವಕುಮಾರ ಹೇಳಿದರು. ಕೆಪಿಸಿಸಿಯ ಪ್ರಮುಖ ನಾಯಕರೆಲ್ಲ ಸೇರಿ ಸಿದ್ದರಾಮಯ್ಯನವರ ಹುಟ್ಟುಹಬ್ಬವನ್ನು ದಾವಣಗೆರೆಯಲ್ಲಿ ಆಚರಿಸಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.

ಬೆಂಗಳೂರು: ಸಿದ್ದರಾಮಯ್ಯನವರ (Siddaramaiah) 75ನೇ ಹುಟ್ಟುಹಬ್ಬವನ್ನು ಉತ್ಸವದ ಹಾಗೆ ಆಚರಿಸುವ ಬಗ್ಗೆ ಸಣ್ಣದಾಗಿ ಆಕ್ಷೇಪಣೆ ವ್ಯಕ್ತಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು, ಗುರುವಾರ ಬೆಂಗಳೂರಲ್ಲಿ ವರಸೆ ಬದಲಾಯಿಸಿ ಮಾತಾಡಿದರು. ಸಿದ್ದರಾಮಯ್ಯ ಪಕ್ಷದ ನಾಯಕರಾಗಿರುವುದರಿಂದ ಅವರ ಹುಟ್ಟುಹಬ್ಬ ಪಕ್ಷದ ಕಾರ್ಯಕ್ರಮವಾಗಲಿದೆ. ಸದರಿ ಕಾರ್ಯ್ರಮಕ್ಕೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು (Rahul Gandhi) ಕೂಡ ಆಗಮಿಸಲಿದ್ದಾರೆ ಎಂದು ಶಿವಕುಮಾರ ಹೇಳಿದರು. ಕೆಪಿಸಿಸಿಯ ಪ್ರಮುಖ ನಾಯಕರೆಲ್ಲ ಸೇರಿ ಸಿದ್ದರಾಮಯ್ಯನವರ ಹುಟ್ಟುಹಬ್ಬವನ್ನು ದಾವಣಗೆರೆಯಲ್ಲಿ ಆಚರಿಸಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ:    Eknath Shinde: ಪ್ರಜ್ಞೆ ತಪ್ಪಿದ ಮಹಿಳಾ ಕಾನ್​ಸ್ಟೆಬಲ್​ಗೆ ಸಹಾಯ ಮಾಡಿದ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ; ವಿಡಿಯೋ ವೈರಲ್