ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 180 ರ ಪೈಕಿ 165 ಭರವಸೆಗಳನ್ನು ಸಿದ್ದರಾಮಯ್ಯ ಜಾರಿಗೊಳಿಸಿದರು: ಶಿವಕುಮಾರ

ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 180 ರ ಪೈಕಿ 165 ಭರವಸೆಗಳನ್ನು ಸಿದ್ದರಾಮಯ್ಯ ಜಾರಿಗೊಳಿಸಿದರು: ಶಿವಕುಮಾರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 04, 2022 | 7:02 PM

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 180 ಆಶ್ವಾಸನೆಗಳ ಪೈಕಿ 165 ಅನ್ನು ಈಡೇರಿಸಿದರು ಎಂದರು. ನಂತರ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಪಠ್ಯ ಪುಸ್ತಕಗಳ ಪರಿಷ್ಕರಣೆ ಮಾಡುವ ನೆಪದಲ್ಲಿ ಅವರು ನಮ್ಮ ನಾಡಿನ ಮಹಾನುಭಾವರನ್ನು ಅವಮಾನಿಸುತ್ತಿದ್ದಾರೆ ಎಂದರು.

Chitradurga: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ನಡುವೆ ಸಮನ್ವಯತೆ (coordination) ಕಾಣಿಸತೊಡಗಿದೆ ಮಾರಾಯ್ರೇ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಆಯೋಜಿಸಲಾಗಿದ್ದ ಕುಂಬಾರರ ಸಮಾವೇಶದಲ್ಲಿ ಅವರು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುವ ಜೊತೆಗೆ ಸಿದ್ದರಾಮಯ್ಯನವರ ಆಡಳಿತವನ್ನು ಕೊಂಡಾಡಿದರು. ಹೊಸದುರ್ಗ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿದಂತಿದೆ. ಯಾಕೆಂದರೆ, ವೇದಿಕೆಯ ಮೇಲಿದ್ದ ಗೋವಿಂದಪ್ಪ ಅನ್ನುವವರನ್ನು ಶಿವಕುಮಾರ ‘ಭಾವಿ ಶಾಸಕರೇ’ ಅಂತ ಸಂಬೋಧಿಸುತ್ತಾರೆ!

ಕುಂಬಾರ ಸಮಾಜದ ಶ್ರೀಗಳು ಇಟ್ಟ ಬೇಡಿಕೆಗಳನ್ನು ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಒದಗಿಸಿದ್ದೇವೆ ಎಂದು ಸಭೆಯನ್ನುದ್ದೇಶಿಸಿ ಮಾತಾಡುವಾಗ ಹೇಳಿದ ಶಿವಕುಮಾರ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 180 ಆಶ್ವಾಸನೆಗಳ ಪೈಕಿ 165 ಅನ್ನು ಈಡೇರಿಸಿದರು ಎಂದರು. ನಂತರ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಪಠ್ಯ ಪುಸ್ತಕಗಳ ಪರಿಷ್ಕರಣೆ ಮಾಡುವ ನೆಪದಲ್ಲಿ ಅವರು ನಮ್ಮ ನಾಡಿನ ಮಹಾನುಭಾವರನ್ನು ಅವಮಾನಿಸುತ್ತಿದ್ದಾರೆ. ಪ್ರತಿದಿನ ಅದೇ ಸುದ್ದಿ ಅದೇ ಗಲಾಟೆ. ಬಸವಣ್ಣ, ಟಿಪ್ಪು ಸುಲ್ತಾನ, ಕುವೆಂಪು, ನಾರಾಯಣ ಗುರು, ಭಗತ್ ಸಿಂಗ್ ಮೊದಲಾದವರನ್ನು ಅವರು ಅವಹೇಳನ ಮಾಡಿದ್ದಾರೆ ಎಂದು ಶಿವಕುಮಾರ ಹೇಳಿದರು.

ನಮಗೆ ಬಸವಣ್ಣನ ಕರ್ನಾಟಕ, ಕುವೆಂಪು ಮತ್ತು ಶಿಶುನಾಳರ ಕಲ್ಪನೆಯ ಕರ್ನಾಟಕ ಬೇಕಾಗಿದೆ. ನಮ್ಮ ಧರ್ಮಗಳು ಬೇರೆ ಬೇರೆಯಾದರೂ ತತ್ವಗಳು ಒಂದೇ, ನಾಮ ನೂರಾದರೂ ದೈವ ಒಂದೇ. 50-60 ವರ್ಷಗಳಿಂದ ನಾವು ಕಟ್ಟಿಕೊಂಡು ಬಂದ ಕರ್ನಾಟಕವನ್ನು ಇವರು (ಬಿಜೆಪಿ) ಹಾಳುಮಾಡುತ್ತಿದ್ದಾರೆ ಎಂದು ಶಿವಕುಮಾರ ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.