ಎಸ್ಐಟಿ ದಕ್ಷತೆಯಿಂದ ಕೆಲಸ ಮಾಡುತ್ತಿದೆ, ಟೀಕೆ-ಟಿಪ್ಪಣಿ ಮಾಡೋರಿಗೆಲ್ಲ ಉತ್ತರ ಕೊಡಲಾಗಲ್ಲ: ಪರಮೇಶ್ವರ್, ಗೃಹ ಸಚಿವ
ಬೇರೆ ಸಂತ್ರಸ್ತೆಯರು ಯಾರಾದರು ದೂರು ನೀಡಿದ್ದಾರಾ? ಅಂತ ಕೇಳಿದ್ದಕ್ಕೆ ಗೃಹ ಸಚಿವ, ಅದು ಎಸ್ಐಟಿ ಅಧಿಕಾರಿಗಳಿಗೆ ಗೊತ್ತಿರಬಹುದಾದ ವಿಚಾರ ಮತ್ತು ಯಾರಾದರೂ ಸಂತ್ರಸ್ತೆಯರನ್ನು ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನಿಸಿದರೆ ಅದನ್ನು ಸಹ ತನಿಖಾಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣ (Prajwal Revanna) ಮತ್ತು ಎಸ್ಐಟಿ ತನಿಖೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಕೋಪ ವ್ಯಕ್ತಪಡಿಸಿದರು. ವಿರೋಧ ಪಕ್ಷಗಳ ನಾಯಕರು ಅದರಲ್ಲೂ ನಿರ್ದಿಷ್ಟವಾಗಿ ಹೆಚ್ ಡಿ ಕುಮಾರಸ್ವಾಮಿಯರು (HD Kumaraswamy) ಎತ್ತುವ ಪ್ರಶ್ನೆಗಳಿಗೆ ಪ್ರತಿದಿನ ಉತ್ತರ ಕೊಡುತ್ತಾ ಕೂರಲಾಗಲ್ಲ, ಸರ್ಕಾರ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಮತ್ತು ಎಸ್ಐಟಿ ತನ್ನ ಕೆಲಸವನ್ನು ದಕ್ಷತೆಯಿಂದ ಮಾಡುತ್ತಿದೆ ಎಂದು ಪರಮೇಶ್ವರ್ ಹೇಳಿದರು. ವಕೀಲ ದೇವರಾಜೇಗೌಡ ಸಹ ಎಸ್ಐಟಿ ತನಿಖೆಯ ಬಗ್ಗೆ ಅಪಸ್ವರ ಎತ್ತಿದ್ದಾರೆ ಮತ್ತು ಅದರ ವಿರುದ್ಧ ದೂರು ಸಲ್ಲಿಸುವ ಯೋಚನೆ ಮಾಡಿದ್ದಾರೆ ಅಂತ ಹೇಳಿದ್ದಕ್ಕೆ ಅವರು, ಅವರು ದೂರು ಸಲ್ಲಿಸಲು ಮುಕ್ತರು, ಯಾರಿಗೆ ಬೇಕಾದರೂ ಸಲ್ಲಿಸಲಿ ಎಂದರು. ಬೇರೆ ಸಂತ್ರಸ್ತೆಯರು ಯಾರಾದರು ದೂರು ನೀಡಿದ್ದಾರಾ? ಅಂತ ಕೇಳಿದ್ದಕ್ಕೆ ಗೃಹ ಸಚಿವ, ಅದು ಎಸ್ಐಟಿ ಅಧಿಕಾರಿಗಳಿಗೆ ಗೊತ್ತಿರಬಹುದಾದ ವಿಚಾರ ಮತ್ತು ಯಾರಾದರೂ ಸಂತ್ರಸ್ತೆಯರನ್ನು ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನಿಸಿದರೆ ಅದನ್ನು ಸಹ ತನಿಖಾಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆನ್ನುಮೂಳೆ ಮತ್ತು ಮಾನ-ಮರ್ಯಾದೆ ಇರೋದಿಕ್ಕೆ ಜನ ನಮ್ಮನ್ನು ಆರಿಸಿದ್ದಾರೆ: ಜಿ ಪರಮೇಶ್ವರ್