AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆನ್ನುಮೂಳೆ ಮತ್ತು ಮಾನ-ಮರ್ಯಾದೆ ಇರೋದಿಕ್ಕೆ ಜನ ನಮ್ಮನ್ನು ಆರಿಸಿದ್ದಾರೆ: ಜಿ ಪರಮೇಶ್ವರ್

ಬೆನ್ನುಮೂಳೆ ಮತ್ತು ಮಾನ-ಮರ್ಯಾದೆ ಇರೋದಿಕ್ಕೆ ಜನ ನಮ್ಮನ್ನು ಆರಿಸಿದ್ದಾರೆ: ಜಿ ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: May 08, 2024 | 7:07 PM

Share

ಮುಖ್ಯಮಂತ್ರಿ ಎಸ್ಐಟಿ ಅಧಿಕಾರಿಗಳನ್ನು ಕರೆಸಿ ಪ್ರಜ್ವಲ್ ಪ್ರಕರಣದ ಸ್ಟೇಟಸ್ (status) ಬಗ್ಗೆ ಕೇಳಿದರೆ ಅದು ಸರ್ಕಾರದ ಹಸ್ತಕ್ಷೇಪ ಅನಿಸಿಕೊಳ್ಳಲ್ಲ, ರಾಜ್ಯದ ಮುಖ್ಯಮಂತ್ರಿಗೆ ಮಾಹಿತಿ ಇರಬೇಕಾಗುತ್ತದೆ ಇಲ್ಲದ್ದಿದ್ದರೆ ಮಾಧ್ಯಮಗಳು ಕೇಳುವ ಪ್ರಶ್ನೆಗಳಿಗೆ ಹೇಗೆ ಉತ್ತರ ಕೊಡಲಾದೀತು ಎಂದರು.

ಬೆಂಗಳೂರು: ರಾಜ್ಯದ ಗೃಹ ಸಚಿವ ಜಿ ಪರಮೇಶ್ವರ್  (G Parameshwara) ಯಾವುದೇ ವಿಷಯದ ಬಗ್ಗೆ ಮಾತಾಡಿದರೂ ಪ್ರಬುದ್ಧತೆಯಿಂದ ವಿವೇಚನೆಯೊಂದಿಗೆ ಮಾತಾಡುತ್ತಾರೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ (Prajwal Revanna sex tapes) ಮತ್ತು ಎಸ್ಐಟಿ ತನಿಖೆ ಬಗ್ಗೆ ಇಂದು ನಗರದಲ್ಲಿ ಮಾತಾಡಿದ ಅವರು ಮುಖ್ಯಮಂತ್ರಿ ಎಸ್ಐಟಿ ಅಧಿಕಾರಿಗಳನ್ನು ಕರೆಸಿ ಪ್ರಜ್ವಲ್ ಪ್ರಕರಣದ ಸ್ಟೇಟಸ್ (status) ಬಗ್ಗೆ ಕೇಳಿದರೆ ಅದು ಸರ್ಕಾರದ ಹಸ್ತಕ್ಷೇಪ ಅನಿಸಿಕೊಳ್ಳಲ್ಲ, ರಾಜ್ಯದ ಮುಖ್ಯಮಂತ್ರಿಗೆ ಮಾಹಿತಿ ಇರಬೇಕಾಗುತ್ತದೆ ಇಲ್ಲದ್ದಿದ್ದರೆ ಮಾಧ್ಯಮಗಳು ಕೇಳುವ ಪ್ರಶ್ನೆಗಳಿಗೆ ಹೇಗೆ ಉತ್ತರ ಕೊಡಲಾದೀತು ಎಂದರು. ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಪ್ಪಿತಸ್ಥ ಅಂತ ಗೊತ್ತಾದರೆ ಅವರಿಗೂ ನೋಟೀಸ್ ನೀಡುವ ಬಗ್ಗೆ ಎಸ್ಐಟಿ ಅಧಿಕಾರಿಗಳು ಯೋಚನೆ ಮಾಡುತ್ತಾರೆ ಎಂದು ಪರಮೇಶ್ವರ್ ಹೇಳಿದರು. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಗೃಹ ಸಚಿವರರಿಗೆ ಬೆನ್ನು ಮೂಳೆ ಇದೆಯಾ? ಮುಖ್ಯಮಂತ್ರಿಗೆ ಮಾನ ಮರ್ಯಾದೆ ಇದೆಯಾ? ಅಂತ ಕೇಳಿದ್ದಾರೆ ಅಂದಿದ್ದ್ದಕ್ಕೆ ಪರಮೇಶ್ವರ್, ಮುಖ್ಯಮಂತ್ರಿಯಾಗುವ ಆಸೆ ಇಟ್ಟುಕೊಂಡಿದ್ದ ಅವರು ಹತಾಷರಾಗಿದ್ದಾರೆ, ನಮಗೆ ಬೆನ್ನು ಮೂಳೆ ಮತ್ತು ಮಾನ ಮರ್ಯಾದೆ ಇದೆ ಅಂತಲೇ ಜನ 136 ಸೀಟು ನೀಡಿ ಆರಿಸಿದ್ದಾರೆ, ಇಲ್ಲದಿದ್ದಿದ್ದರೆ ಜನರು ಅವರನ್ನು ಆರಿಸುತ್ತಿದ್ದರು ಎಂದು ಮಾರ್ಮಿಕವಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ಪ್ರಕರಣ ಹಿನ್ನೆಲೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಭವಿಷ್ಯ ಆ ಪಕ್ಷಗಳ ನಾಯಕರಿಗೆ ಬಿಟ್ಟ ವಿಚಾರ: ಜಿ ಪರಮೇಶ್ವರ್