ಸೌಜನ್ಯ ಕೊಲೆ ಪ್ರಕರಣ ಮರುತನಿಖೆ: ಶವ ಪತ್ತೆಯಾದ ಸ್ಥಳದಲ್ಲಿ ಎಸ್‌ಐಟಿ ತಂಡದಿಂದ ಕ್ರೈಂ ಸೀನ್ ಮರುಸೃಷ್ಟಿ
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಿದೆ. ಶವ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ, ಅಪರಾಧ ಸ್ಥಳವನ್ನು ಮರುಸೃಷ್ಟಿಸಲಾಗುತ್ತಿದೆ. ಸಿಬಿಐ ಮಾಡಿದ ಲೋಪಗಳನ್ನು ಪುನರಾವರ್ತಿಸದೆ, ಪ್ರಾಮಾಣಿಕವಾಗಿ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಸಂತ್ರಸ್ತೆಗೆ ನ್ಯಾಯ ಒದಗಿಸಲು ಎಸ್‌ಐಟಿ ನಿರ್ಧರಿಸಿದೆ.
ದಕ್ಷಿಣ ಕನ್ನಡ, ಅಕ್ಟೋಬರ್ 31: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಚುರುಕುಗೊಳಿಸಿದೆ. ಇವತ್ತು ಎಸ್‌ಐಟಿ ತಂಡವು ಸೌಜನ್ಯ ಅವರ ಶವ ಪತ್ತೆಯಾದ ಬೆಳ್ತಂಗಡಿ, ಉಜಿರೆ ಸಮೀಪದ ನೇತ್ರಾವತಿ ನದಿ ದಡದ ಸ್ಥಳಕ್ಕೆ ಭೇಟಿ ನೀಡಿದೆ. ಇಲ್ಲಿ ಅಪರಾಧ ಸ್ಥಳವನ್ನು (ಕ್ರೈಮ್ ಸೀನ್) ಮರುಸೃಷ್ಟಿಸುವ ಮಹತ್ವದ ಕಾರ್ಯಕ್ಕೆ ಎಸ್‌ಐಟಿ ಮುಂದಾಗಿದೆ.
ಈ ಹಿಂದೆ ಸಿಬಿಐ ತನಿಖೆ ನಡೆಸುವಾಗ ಘಟನಾ ಸ್ಥಳಕ್ಕೆ ಭೇಟಿ ನೀಡದೆ ತನಿಖೆಯನ್ನು ಪೂರ್ಣಗೊಳಿಸಿತ್ತು. ಸುಪ್ರೀಂ ಕೋರ್ಟ್ ಕೂಡ ಸಿಬಿಐನ ಈ ಲೋಪದ ಬಗ್ಗೆ ಪ್ರಶ್ನಿಸಿ, ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಸಿಬಿಐ ಮಾಡಿದ ತಪ್ಪನ್ನು ಮರುತನಿಖೆಯಲ್ಲಿ ಪುನರಾವರ್ತಿಸದೆ, ಪ್ರಾಮಾಣಿಕವಾಗಿ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಎಸ್‌ಐಟಿ ನಿರ್ಧರಿಸಿದೆ. ಮೃತದೇಹ ಸಿಕ್ಕ ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಕಲೆಹಾಕುವುದು ಇದರ ಮುಖ್ಯ ಉದ್ದೇಶವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
