12 ಅಡಿ ಉದ್ದದ ಕಾಳಿಂಗ ಸರ್ಪ ಹಿಡಿದ ಆರು ವರ್ಷದ ಬಾಲಕ: ಅಬ್ಬಾ ಎಷ್ಟು ಧೈರ್ಯ ಈ ಪೋರನಿಗೆ
12 ಅಡಿ ಉದ್ದದ ಕಾಳಿಂಗ ಸರ್ಪವನ್ನೇ ಹಿಡಿಯುವ ಮೂಲಕ ಎಲ್ಲರ ಹುಬ್ಬೆರಿಸುವಂತೆ ಮಾಡಿದ್ದಾನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಜಡ್ಡಿಗದ್ದೆ ಗ್ರಾಮದ ಬಳಿ ಈ ಅಪರೂಪ ಘಟನೆ ಕಂಡುಬಂದಿದೆ.
ಕಾರವಾರ: ಹಾವು ಎಂದರೆ ಸಾಕು ಕೆಲವರು ಮಾರು ದೂರ ಓಡಿಹೋಗುತ್ತಾರೆ. ಎಲ್ಲಾದರೂ ಹಾವು ಕಂಡರೇ ಸಾಕು, ಎಷ್ಟೇ ಧೈರ್ಯವಂತರಾದರೂ ಒಂದು ಕ್ಷಣ ಗಾಬರಿಗೊಳ್ಳುವುದು ಸತ್ಯ! ಅಂತದರಲ್ಲಿ ಇಲ್ಲೊಬ್ಬ ಆರು ವರ್ಷದ ಬಾಲಕ ಹಾವಲ್ಲ ಬದಲಿಗೆ 12 ಅಡಿ ಉದ್ದದ ಕಾಳಿಂಗ ಸರ್ಪ (king cobra) ವನ್ನೇ ಹಿಡಿಯುವ ಮೂಲಕ ಎಲ್ಲರ ಹುಬ್ಬೆರಿಸುವಂತೆ ಮಾಡಿದ್ದಾನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಜಡ್ಡಿಗದ್ದೆ ಗ್ರಾಮದ ಬಳಿ ಈ ಅಪರೂಪ ಘಟನೆ ಕಂಡುಬಂದಿದೆ. ವಿರಾಜ್ ಹುಲೇಕಲ್ (6) ಬಾಲಕನಿಂದ ಕಾಳಿಂಗ ಸರ್ಪದ ರಕ್ಷಣೆ ಮಾಡಲಾಗಿದೆ.
ಉರಗ ತಜ್ಞ ಪ್ರಶಾಂತ್ ಹುಲೇಕಲ್ ಅವರ ಪುತ್ರ ವಿರಾಜ್ ಹುಲೇಕಲ್. ಜಡ್ಡಿಗದ್ದೆ ಗ್ರಾಮದಲ್ಲಿ ಶ್ರೀನಿವಾಸ ಎಂಬುವವರ ಮನೆ ಹತ್ತಿರ ಬಂದಿದ್ದ ಕಾಳಿಂಗ ಸರ್ಪವನ್ನು ಯಾವುದೇ ಆತಂಕವಿಲ್ಲದೆ ಲೀಲಾಜಾಲವಾಗಿ ವಿರಾಜ್ ಹಿಡಿದಿದ್ದಾನೆ. ಬಳಿಕ ಕಾಳಿಂಗ ಸರ್ಪವನ್ನು ಅರಣ್ಯಕ್ಕೆ ಬಿಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos