ಎಸ್ಎಂ ಕೃಷ್ಣ ಹುಟ್ಟಿ ಬೆಳೆದ, ನೂರಾರು ವರ್ಷಗಳ ಹಳೆಯ ಸೋಮನಹಳ್ಳಿ ಮನೆ ಹೇಗಿದೆ ನೋಡಿ

| Updated By: Ganapathi Sharma

Updated on: Dec 10, 2024 | 8:55 AM

ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ನಿಧನರಾಗಿದ್ದು, ಅವರು ಬೆಂಗಳೂರಿನ ಸದಾಶಿವ ನಗರದಲ್ಲಿ ವಾಸವಾಗಿದ್ದರು. ಆದರೆ, ಅವರ ಹುಟ್ಟೂರು ಮಂಡ್ಯದ ಸೋಮನಹಳ್ಳಿ. ಅಲ್ಲಿ ಅವರು ಹುಟ್ಟಿ ಬೆಳೆದಿದ್ದ ನೂರಾರು ವರ್ಷಗಳ ಹಿಂದಿನ ಹಳೆಯ ಮನೆ ಹೇಗಿದೆ ಎಂಬ ವಿಡಿಯೋ ಇಲ್ಲಿದೆ.

ಮಂಡ್ಯ, ಡಿಸೆಂಬರ್ 10: ವಿದೇಶಾಂಗ ಇಲಾಖೆ ಮಾಜಿ ಸಚಿವ, ಮಾಜಿ ಸಿಎಂ ಎಸ್​ಎಂ ಕೃಷ್ಣ ಮಂಗಳವಾರ ನಸುಕಿನಲ್ಲಿ ವಿಧಿವಶರಾಗಿದ್ದಾರೆ. ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಏತನ್ಮಧ್ಯೆ, ಕೃಷ್ಣ ಅವರು ಹುಟ್ಟಿ ಬೆಳೆದಿದ್ದ ಮಂಡ್ಯ ಜಿಲ್ಲೆಯ ಸೋಮನಹಳ್ಳಿ ಗ್ರಾಮದಲ್ಲಿರುವ ನೂರಾರು ವರ್ಷಗಳ ಹಳೆ ನಿವಾಸ ಈಗ ಗಮನ ಸೆಳೆದಿದೆ.

ಸೋಮನಹಳ್ಳಿಯಲ್ಲಿರುವ ಹಳೆಯ ನಿವಾಸದಲ್ಲಿ ಈಗ ಅವರ ಕುಟುಂಬಸ್ಥರು ವಾಸ ಮಾಡುತ್ತಿದ್ದಾರೆ. ನೂರಾರು ವರ್ಷಗಳ ಹಳೆಯದಾದ ಮನೆಯನ್ನು ಇತ್ತೀಚೆಗೆ ರಿನೊವೇಷನ್ ಮಾಡಲಾಗಿದ್ದು, ಗಟ್ಟಿಮುಟ್ಟಾಗಿದೆ. ಇತ್ತೀಚಿನ ವರೆಗೂ ಮಂಡ್ಯಕ್ಕೆ ತೆರಳಿದಾಗ ಎಸ್​​ಎಂ ಕೃಷ್ಣ ತಾವು ಹುಟ್ಟಿ ಬೆಳೆದ ಮನೆಗೆ ಭೇಟಿ ನೀಡಿ ಅಲ್ಲಿಯೇ ತಂಗುತ್ತಿದ್ದರಂತೆ. ಆ ಮನೆಯ ಬಗ್ಗೆ ‘ಟಿವಿ9’ ಪ್ರತಿನಿಧಿ ಪ್ರಶಾಂತ್ ನೀಡಿರುವ ವಿಡಿಯೋ ಸಹಿತ ವರದಿ ಇಲ್ಲಿದೆ.

ಇದನ್ನೂ ಓದಿ: ಎಸ್​ಎಂ ಕೃಷ್ಣ ಸುದೀರ್ಘ ರಾಜಕೀಯ ಜೀವನದ ಹಿನ್ನೋಟ

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ