SM Krishna No More: ತಾತನಿಗೆ ಅಂತಿಮ ವಿದಾಯ ಹೇಳುವಾಗ ಭಾವುಕನಾದ ಕೃಷ್ಣ ಅವರ ಎರಡನೇ ಮೊಮ್ಮಗ

SM Krishna No More: ತಾತನಿಗೆ ಅಂತಿಮ ವಿದಾಯ ಹೇಳುವಾಗ ಭಾವುಕನಾದ ಕೃಷ್ಣ ಅವರ ಎರಡನೇ ಮೊಮ್ಮಗ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 11, 2024 | 7:00 PM

ಈಗಾಗಲೇ ವರದಿಯಾಗಿರುವಂತೆ ಒಕ್ಕಲಿಗ ಸಂಪ್ರದಾಯದ ಹಾಗೆ ನಡೆದ ಅಂತ್ಯಕ್ರಿಯೆಯಲ್ಲಿ 1,000 ಕೇಜಿ ಗಂಧದ ಕಟ್ಟಿಗೆ, ಸುಮಾರು 50 ಕೆಜಿ ತುಪ್ಪ ಬಳಸಲಾಗಿದೆ. ಕೃಷ್ಣ ಅವರ ಹಿರಿಯ ಮೊಮ್ಮಗ ಮತ್ತು ಡಿಕೆ ಶಿವಕುಮಾರ್ ಅವರ ಅಳಿಯ ಅಮರ್ತ್ಯ ಹೆಗಡೆ ತಾತನ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ತಮ್ಮ ರಾಜಕೀಯ ಗುರುವಿನ ಎಲ್ಲ ವಿಧಿವಿಧಾನಗಳನ್ನು ಶಿವಕುಮಾರ್ ಅಚ್ಚುಕಟ್ಟಾಗಿ ನಿರ್ವಹಿಸಿದರು.

ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಎಸ್ ಎಂ ಕೃಷ್ಣ ಅವರ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೊದಲು ಒಕ್ಕಲಿಗ ಸಂಪ್ರದಾಯದ ಹಾಗೆ ಎಲ್ಲ ರೀತಿ ರಿವಾಜುಗಳನ್ನು ಪೂರ್ತಿಗೊಳಿಸಲಾಯಿತು. ಕೃಷ್ಣ ಅವರ ಎರಡನೇ ಮೊಮ್ಮಗ ತನ್ನ ತಾತನಿಗೆ ಕೊನೆಯದಾಗಿ ನಮಸ್ಕರಿಸುವಾಗ ಭಾವುಕರಾದರು. ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಪೊಲೀಸರು ಮೂರುಸುತ್ತು ಕುಶಾಲುತೋಪು ಸಿಡಿಸಿ ಸರ್ಕಾರೀ ಗೌರವ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವಾರು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: SM Krishna No More: ಅಗಲಿದ ನಾಯಕನ ಪತ್ನಿ ಪ್ರೇಮ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ