ಹಾಸನ-ಸೊಲ್ಲಾಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಾಣಿಸಿಕೊಂಡ ಹೊಗೆ: ಇಳಿದು ಓಡಿಹೋದ ಜನ
ಹಾಸನ-ಸೊಲ್ಲಾಪುರ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 11312) ಮರತೂರು ರೈಲು ನಿಲ್ದಾಣದ ಬಳಿ ತಾಂತ್ರಿಕ ದೋಷದಿಂದಾಗಿ ಹೊಗೆ ಕಾಣಿಸಿಕೊಂಡಿದೆ. ಬ್ರೇಕ್ ಬೈಂಡಿಂಗ್ ಸಮಸ್ಯೆಯಿಂದಾಗಿ ಹೊಗೆ ಕಾಣಿಸಿಕೊಂಡಿದ್ದು, ರೈಲ್ವೆ ಸಿಬ್ಬಂದಿ ತಕ್ಷಣ ರೈಲನ್ನು ನಿಲ್ಲಿಸಿ ಸಮಸ್ಯೆಯನ್ನು ಸರಿಪಡಿಸಿದರು. ಘಟನೆಯಿಂದ ಕೆಲ ಕಾಲ ಪ್ರಯಾಣಿಕರಲ್ಲಿ ಆತಂಕ ಉಂಟಾಗಿತ್ತು.
ಕಲಬುರಗಿ, ಜುಲೈ 21: ಹಾಸನ ಟು ಸೊಲ್ಲಾಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ (Hassan-Solapur Express train) ಏಕಾಏಕಿ ಹೊಗೆ ಕಾಣಿಸಿಕೊಂಡಿರುವಂತಹ ಘಟನೆ ಜಿಲ್ಲೆಯ ಶಹಾಬಾದ್ ತಾಲೂಕಿನ ಮರತೂರ ನಿಲ್ದಾಣ ಬಳಿ ನಡೆದಿದೆ. ತಾಂತ್ರಿಕ ದೋಷದಿಂದ ರೈಲಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ತಕ್ಷಣ ಸಿಗ್ನಲ್ ತೋರಿಸಿ ಸಿಬ್ಬಂದಿ ರೈಲು ನಿಲ್ಲಿಸಿದ್ದಾರೆ. ಬ್ರೇಕ್ ಬೈಂಡಿಂಗ್ ದೋಷ ಸರಿಪಡಿಸಿದ ಬಳಿಕ ರೈಲು ತೆರಳಿದೆ. ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.