ಅಧಿವೇಶನ ವೇಳೆ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..ಮೈ ಜುಮ್ಮೆನಿಸುವ ವಿಡಿಯೋ

| Updated By: ರಮೇಶ್ ಬಿ. ಜವಳಗೇರಾ

Updated on: Mar 12, 2025 | 8:37 PM

ಸದ್ಯ ವಿಧಾನಸಭೆಯಲ್ಲಿ 2025ನೇ ಸಾಲಿನ ಕರ್ನಾಟಕ ಬಜೆಟ್​​ ಅಧಿವೇಶನ ನಡೆಯುತ್ತಿದ್ದು, ಸದನದೊಳಗೆ ಆಡಳಿತರೂಢ ಕಾಂಗ್ರೆಸ್​ ಹಾಗೂ ವಿಪಕ್ಷಗಳಾದ ಬಿಜೆಪಿ, ಜೆಡಿಎಸ್​ ನಡುವೆ ಆರೋಪ ಪ್ರತ್ಯಾರೋಪಗಳು ಜೋರಾಗಿ ನಡೆಯುತ್ತಿವೆ. ಇದರ ಮಧ್ಯ ವಿಧಾನಸೌಧಕ್ಕೆ ನಲ್ಲಿ ನಾಗರಹಾವು ಬಂದಿದೆ. ಶಾಸಕರ ಭವನದಿಂದ ವಿಧಾನಸೌಧ ಪ್ರವೇಶಿಸುವ ಮಾರ್ಗದಲ್ಲಿ ಹಾವು ಪತ್ತೆಯಾಗಿದೆ.

ಬೆಂಗಳೂರು, (ಮಾರ್ಚ್​ 12): ಕಳೆದ ವಾರ ವಿಧಾನಸೌಧದ ಖಜಾನೆ ಇಲಾಖೆ ಕಚೇರಿಯೊಳಗೆ ಹಾವು ನುಗ್ಗಿತ್ತು. ಇದರ ಬೆನ್ನಲ್ಲೇ ಇದೀಗ ವಿಧಾನಸೌಧದಲ್ಲಿ ಮತ್ತೊಂದು ಹಾವು ಪತ್ತೆಯಾಗಿದೆ. 2025ನೇ ಸಾಲಿನ ಕರ್ನಾಟಕ ಬಜೆಟ್​​ ಅಧಿವೇಶನ ನಡೆಯುತ್ತಿರುವ ಮಧ್ಯ ವಿಧಾನಸೌಧದಕ್ಕೆ ನಾಗರಹಾವು ಬಂದಿದೆ. ಶಾಸಕರ ಭವನದಿಂದ ವಿಧಾನಸೌಧ ಪ್ರವೇಶಿಸುವ ಮಾರ್ಗದಲ್ಲಿ ಕೆ.ಸಿ.ರೆಡ್ಡಿ ಪ್ರತಿಮೆ ಬಳಿ 5 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷವಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಉರಗತಜ್ಞರು ಒಂದೂವರೆ ಗಂಟೆ ಕಾಲ ಹುಡುಕಾಟ ನಡೆಸಿ ನಾಗರಹಾವನ್ನು ಹಿಡಿದುಕೊಂಡು ಹೋಗಿದ್ದಾರೆ.