ಪುಟಿನ್ ಮಾಡುತ್ತಿರುವುದು ಸರಿಯಲ್ಲವೆನ್ನುವ ಬೇರೆ ದೇಶಗಳ ಯೋಧರು ಉಕ್ರೇನ್ ಪರ ಹೋರಾಡಲು ಬರುತ್ತಿದ್ದಾರೆ!

ಪುಟಿನ್ ಮಾಡುತ್ತಿರುವುದು ಸರಿಯಲ್ಲವೆನ್ನುವ ಬೇರೆ ದೇಶಗಳ ಯೋಧರು ಉಕ್ರೇನ್ ಪರ ಹೋರಾಡಲು ಬರುತ್ತಿದ್ದಾರೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 09, 2022 | 9:36 PM

ಕೆಲವರು ತಮ್ಮ ಸ್ವಂತ ಇಚ್ಛೆಯಿಂದ ಬಂದರೆ ಉಳಿದವರನ್ನು ಆಯಾ ದೇಶಗಳ ಸರ್ಕಾರ ಕಳಿಸಿದೆ. ಇಲ್ಲಿ ಕಾಣುತ್ತಿರುವ ಯೋಧರ ಬಳಿ ಅತ್ಯಾಧುನಿಕ ಯುದ್ಧ ಸಾಮಗ್ರಿ ಇರುವಂತಿದೆ. ಅವುಗಳನ್ನು ಹೇಗೆ ಉಪಯೋಗಿಸಬೇಕು ಅಂತ ಅವರು ತಿಳಿಸಿಕೊಡುತ್ತಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ನಡುವೆ ಕಳೆದೆರಡು ವಾರಗಳಿಂದ ಜಾರಿಯಲ್ಲಿರುವ ಯುದ್ಧದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗುತ್ತಿದೆ. ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ (Volodymyr Zelensky) ತನ್ನೆದಿರು ಮಂಡಿಯೂರಿದರೆ ಯುದ್ಧ ನಿಲ್ಲಿಸುವುದಾಗಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಹೇಳುತ್ತಾರೆ. ಅದು ಸಾಧ್ಯವಿಲ್ಲ, ಕೊನೆಯುಸಿರಿನವರೆಗೆ ಹೋರಾಡುತ್ತೇನೆ, ಸೋಲೊಪ್ಪಿಕೊಳ್ಳಲಾರೆ ಎಂದು ಜೆಲೆನ್ಸ್ಕಿ ಹೇಳುತ್ತಾರೆ. ಮಂಗಳವಾರ ಬೆಳಗ್ಗೆ ಯುನೈಟೆಡ್ ಕಿಂಗ್ ಡಮ್ (United Kingdom) ಸಂಸತ್ತನ್ನು ಉದ್ದೇಶಿಸಿ ವರ್ಚ್ಯಯಲ್ ಆಗಿ ಮಾತಾಡಿದ ಜೆಲೆನ್ಸ್ಕಿ ಅವರು ಶಸ್ತ್ರ ಚೆಲ್ಲುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು. ಅವರ ಧೈರ್ಯ ಮತ್ತು ದಿಟ್ಟತನವನ್ನು ಬ್ರಿಟಿಷ್ ಸಂಸದರು ಕೊಂಡಾಡಿದರು. ಬೇರೆ ರಾಷ್ಟ್ರಗಳು ಈಗ ಉಕ್ರೇನ್ ನೆರವಿಗೆ ಧಾವಿಸುತ್ತಿವೆ. ಅದರ ಪುರಾವೆ ಈ ವಿಡಿಯೋನಲ್ಲಿ ಸಿಗುತ್ತದೆ.

ಉಕ್ರೇನ್ ಪರ ರಷ್ಯಾ ವಿರುದ್ಧ ಹೋರಾಟ ಮಾಡಲು ಅಣಿಯಾಗುತ್ತಿರುವ ಈ ಯೋಧರು ಬೇರೆ ದೇಶಗಳಿಂದ ಬಂದಿದ್ದಾರೆ. ಕೆಲವರು ತಮ್ಮ ಸ್ವಂತ ಇಚ್ಛೆಯಿಂದ ಬಂದರೆ ಉಳಿದವರನ್ನು ಆಯಾ ದೇಶಗಳ ಸರ್ಕಾರ ಕಳಿಸಿದೆ. ಇಲ್ಲಿ ಕಾಣುತ್ತಿರುವ ಯೋಧರ ಬಳಿ ಅತ್ಯಾಧುನಿಕ ಯುದ್ಧ ಸಾಮಗ್ರಿ ಇರುವಂತಿದೆ. ಅವುಗಳನ್ನು ಹೇಗೆ ಉಪಯೋಗಿಸಬೇಕು ಅಂತ ಅವರು ತಿಳಿಸಿಕೊಡುತ್ತಿದ್ದಾರೆ.

ಈ ಗಡ್ಡಧಾರಿ ಯೋಧನಿಗೆ ಮಾಧ್ಯಮದ ಪ್ರತಿನಿಧಿಯೊಬ್ಬರು, ಉಕ್ರೇನ್ ಪರ ಯಾಕೆ ನೀವು ಯುದ್ಧ ಮಾಡಲ ಬಂದಿರೋದು ಅಂತ ಕೇಳಿದಾಗ ಅವರು ಬಹಳ ಶಾಂತರಾಗಿ, ಪ್ರಜಾಪ್ರಭುತ್ವವನ್ನು ಉಳಿಸಲು ಅಂತ ಹೇಳುತ್ತಾರೆ. ಉಕ್ರೇನ್ ಒಂದು ಪ್ರಜಾಪ್ರಭುತ್ವ ದೇಶ; ಬೇರೆ ಯಾವುದೋ ದೇಶದ ಒಬ್ಬ ನಾಯಕ ತನ್ನಿಚ್ಛೆಯಂತೆ ನಡೆಯುವಂತೆಗೆ ಉಕ್ರೇನಿಗೆ ಹೇಳಲಾರ. ಈ ಕಾರಣಕ್ಕಾಗಿ ನಾವು ಉಕ್ರೇನ್ ಪರವಾಗಿ ಯುದ್ಧ ಮಾಡಲು ಬಂದಿದ್ದೇವೆ ಎಂದು ಹೇಳುತ್ತಾರೆ.

ಇದನ್ನೂ ಓದಿ:   ಶ್ರೀವಲ್ಲಿ ಹಾಡಿಗೆ ಜ್ವಾಲಾಗುಟ್ಟ ತಾಯಿಯ ಮಸ್ತ್​ ಸ್ಟೆಪ್​: ವಿಡಿಯೋ ಹಂಚಿಕೊಂಡ ಬ್ಯಾಡ್ಮಿಂಟನ್​ ತಾರೆ