Somnath Temple: ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಗುಜರಾತಿನ ಸೋಮನಾಥಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ ನಡೆಯಲಿರುವ ಶೌರ್ಯ ಪರ್ವ ಯಾತ್ರೆಗೂ ಮುನ್ನ ಸೋಮನಾಥ ದೇವಾಲಯಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಗುಜರಾತ್‌ನ ಸೋಮನಾಥ ದೇವಾಲಯದಲ್ಲಿ 1000 ವರ್ಷಗಳ ನಂಬಿಕೆಯನ್ನು ಮತ್ತು ಭಾರತದ ಇತಿಹಾಸವನ್ನು ಪವಿತ್ರ ದೇವಾಲಯದಲ್ಲಿ ಆಚರಿಸಲಾಗುತ್ತಿದೆ. ನಾಳೆ (ಭಾನುವಾರ) ಸೋಮನಾಥ ಸ್ವಾಭಿಮಾನ ಯಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಸೋಮನಾಥಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದಾರೆ.
ಸೋಮನಾಥ, ಜನವರಿ 10: ಸೋಮನಾಥ ಸ್ವಾಭಿಮಾನ ಪರ್ವದಲ್ಲಿ (Somnath Swabhiman Parv) ಭಾಗವಹಿಸಲು ಗುಜರಾತಿನ ಸೋಮನಾಥಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ರಾತ್ರಿ ನಡೆಯಲಿರುವ ಶೌರ್ಯ ಪರ್ವ ಯಾತ್ರೆಗೂ ಮುನ್ನ ಸೋಮನಾಥ ದೇವಾಲಯಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಗುಜರಾತ್‌ನ ಸೋಮನಾಥ ದೇವಾಲಯದಲ್ಲಿ 1000 ವರ್ಷಗಳ ನಂಬಿಕೆಯನ್ನು ಮತ್ತು ಭಾರತದ ಇತಿಹಾಸವನ್ನು ಪವಿತ್ರ ದೇವಾಲಯದಲ್ಲಿ ಆಚರಿಸಲಾಗುತ್ತಿದೆ. ನಾಳೆ (ಭಾನುವಾರ) ಸೋಮನಾಥ ಸ್ವಾಭಿಮಾನ ಯಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಸೋಮನಾಥಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದಾರೆ.
ನಮ್ಮ ನಾಗರಿಕತೆಯ ಧೈರ್ಯದ ಹೆಮ್ಮೆಯ ಸಂಕೇತವಾದ ಸೋಮನಾಥಕ್ಕೆ ಆಗಮಿಸಿರುವುದಕ್ಕೆ ಧನ್ಯನೆನಿಸುತ್ತಿದೆ. “1026ರಲ್ಲಿ ಸೋಮನಾಥ ದೇವಾಲಯದ ಮೇಲೆ ನಡೆದ ಮೊದಲ ದಾಳಿಯ ಸಾವಿರ ವರ್ಷಗಳನ್ನು ಆಚರಿಸಲು ಇಡೀ ರಾಷ್ಟ್ರವು ಒಟ್ಟಾಗಿ ಸೇರಿದ #SomnathSwabhimanParv (ಸೋಮನಾಥ ಸ್ವಾಭಿಮಾನ ಪರ್ವ) ಆಚರಿಸುತ್ತಿದೆ. ಇಲ್ಲಿನ ಜನರಿಗೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ಕೃತಜ್ಞತೆಗಳು” ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ