ಸೋಮವಾರಪೇಟೆ; ದಯಾ ಮರಣ ಕೋರಿ ಪ್ರವಾಹ ಸಂತ್ರಸ್ತೆಯಿಂದ ರಾಷ್ಟ್ರಪತಿಗೆ ಪತ್ರ

ಸೋಮವಾರಪೇಟೆ; ದಯಾ ಮರಣ ಕೋರಿ ಪ್ರವಾಹ ಸಂತ್ರಸ್ತೆಯಿಂದ ರಾಷ್ಟ್ರಪತಿಗೆ ಪತ್ರ

Ganapathi Sharma
|

Updated on: Jun 26, 2023 | 10:54 PM

ಪ್ರವಾಹ ಸಂತ್ರಸ್ತೆ, ಸೋಮವಾರಪೇಟೆ ತಾಲ್ಲೂಕಿನ ನೆಲಿಹುದಿಕೇರಿ ಗ್ರಾಮದ ಶಾಂತ (66) ಎಂಬವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದಯಾ ಮರಣ ಕೋರಿ ಪತ್ರ ಬರೆದಿದ್ದಾರೆ.

ಮಡಿಕೇರಿ: ಪ್ರವಾಹ ಸಂತ್ರಸ್ತೆ, ಸೋಮವಾರಪೇಟೆ ತಾಲ್ಲೂಕಿನ ನೆಲಿಹುದಿಕೇರಿ ಗ್ರಾಮದ ಶಾಂತ (66) ಎಂಬವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದಯಾ ಮರಣ ಕೋರಿ ಪತ್ರ ಬರೆದಿದ್ದಾರೆ. 2019ರ ಪ್ರವಾಹದಲ್ಲಿ ಮನೆ ಕಳೆದುಕೊಂಡಿರುವ ಶಾಂತ ಅವರಿಗೆ ನಾಲ್ಕು ವರ್ಷವಾದರೂ ಸರ್ಕಾರ ವ್ಯವಸ್ಥೆ ಮಾಡಿಲ್ಲ. ಸದ್ಯ ಅವರು, ಮನೆಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಬಾಡಿಗೆಗೆ ಮನೆಗೆ ಹಣ‌ನೀಡಲು ಪರದಾಟ ಅನುಭವಿಸುತ್ತಿದ್ದು, ಒಂದೋ ಮನೆ ಒದಗಿಸಿಕೊಡಿ. ಇಲ್ಲವೇ ದಯಾಮರಣ‌ ಕೊಡಿ ಎಂದು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಬಂದು ಮನೆ ನೀಡುವುದಾಗಿ ಭರವಸೆ ನೀಡಿದ್ದರು. ಅದಾಗಿ ವರ್ಷಗಳು ಕಳೆದರೂ ಏನೂ ಪ್ರಯೋಜನವಾಗಿಲ್ಲ ಎಂದು ಶಾಂತ ಅವರು ಅಳಲುತೋಡಿಕೊಂಡಿದ್ದಾರೆ.

2019ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ್ದ ಪ್ರವಾಹ, ಭೂಕುಸಿತದಲ್ಲಿ ಅನೇಕ ಮಂದಿ ಸಂತ್ರಸ್ತರಾಗಿದ್ದರು. ಹತ್ತಾರು ಮನೆಗಳು ಭೂಕುಸಿತದಿಂದ ನಾಶವಾಗಿದ್ದವು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ