ಪತ್ನಿಯನ್ನು ತವರಿಗೆ ಕರೆತಂದಿದ್ದಕ್ಕೆ ಅತ್ತೆಯನ್ನೇ ಹತ್ಯೆಗೈದ: ಅಳಿಯನ ಕ್ರೌರ್ಯ ಸಿಸಿ ಟಿವಿಯಲ್ಲಿ ಸೆರೆ

Edited By:

Updated on: Sep 12, 2025 | 4:55 PM

ಮಗಳ ಜೀವ ಉಳಿಸಲು ಹೋಗಿ ಅಳಿಯನಿಂದ ಅತ್ತೆ ಹತ್ಯೆಯಾದ ಘಟನೆ ಹಾಸನ (Hassan) ಜಿಲ್ಲೆಯ ಅರಕಲಗೂಡಿನ (Arakalgud) ರಾಮನಾಥಪುರದಲ್ಲಿ ನಡೆದಿದೆ. ಹತ್ಯೆಯಾದ ಮಹಿಳೆಯನ್ನು ಫೈರೋಜಾಅಹದ್ (55) ಎಂದು ಗುರುತಿಸಲಾಗಿದೆ. ರಸೂಲ್ ಕೊಲೆಗೈದ ಆರೋಪಿ. ಈತ ಪತ್ನಿಗೆ ನೀಡುತ್ತಿದ್ದ ಕಿರಿಕುಳದಿಂದ ಬೇಸತ್ತ ಅತ್ತೆ, ತನ್ನ ಮಗಳನ್ನು ತವರು ಮನೆಗೆ ಕರೆದುಕೊಂಡು ಬರುತ್ತಿದ್ದರು. ಇದರಿಂದ ಕೋಪಗೊಂಡ ಅಳಿಯ ರಸೂಲ್, ಹಿಂಬಾಲಿಸಿಕೊಂಡು ಬಂದು ಪತ್ನಿಯನ್ನು ಕೊಲ್ಲಲು ಯತ್ನಿಸಿದ್ದಾನೆ. ಈ ವೇಳೆ ಮಗಳ ರಕ್ಷಣೆಗೆ ಅಡ್ಡ ಬಂದ ಅತ್ತೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.

ಹಾಸನ, (ಸೆಪ್ಟೆಂಬರ್ 12): ಮಗಳ ಜೀವ ಉಳಿಸಲು ಹೋಗಿ ಅಳಿಯನಿಂದ ಅತ್ತೆ ಹತ್ಯೆಯಾದ ಘಟನೆ ಹಾಸನ (Hassan) ಜಿಲ್ಲೆಯ ಅರಕಲಗೂಡಿನ (Arakalgud) ರಾಮನಾಥಪುರದಲ್ಲಿ ನಡೆದಿದೆ. ಹತ್ಯೆಯಾದ ಮಹಿಳೆಯನ್ನು ಫೈರೋಜಾಅಹದ್ (55) ಎಂದು ಗುರುತಿಸಲಾಗಿದೆ. ರಸೂಲ್ ಕೊಲೆಗೈದ ಆರೋಪಿ. ಈತ ಪತ್ನಿಗೆ ನೀಡುತ್ತಿದ್ದ ಕಿರಿಕುಳದಿಂದ ಬೇಸತ್ತ ಅತ್ತೆ, ತನ್ನ ಮಗಳನ್ನು ತವರು ಮನೆಗೆ ಕರೆದುಕೊಂಡು ಬರುತ್ತಿದ್ದರು. ಇದರಿಂದ ಕೋಪಗೊಂಡ ಅಳಿಯ ರಸೂಲ್, ಹಿಂಬಾಲಿಸಿಕೊಂಡು ಬಂದು ಪತ್ನಿಯನ್ನು ಕೊಲ್ಲಲು ಯತ್ನಿಸಿದ್ದಾನೆ. ಈ ವೇಳೆ ಮಗಳ ರಕ್ಷಣೆಗೆ ಅಡ್ಡ ಬಂದ ಅತ್ತೆಯನ್ನು
ಚಾಕುವಿನಿಂದ ಇರಿದು ಕೊಂದಿದ್ದಾನೆ.

ಚೀರಾಡಿ ಕೂಗಾಡಿದ್ರೂ ಕರುಣೆ ತೋರದ ರಸೂಲ್, ಮಗಳ ರಕ್ಷಣೆಗೆ ಬಂದ ತಾಯಿಯ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಅತ್ತೆ ಕೆಳಗೆ ಕುಸಿದು ಬಿದ್ದರೂ ಬಿಡದ ಬಿಡದ ರಸೂಲ್, ಕಾಲಿನಿಂದ‌ ಒದ್ದು ತಲೆಯನ್ನ ರಸ್ತೆಗೆ ಜಜ್ಜಿ ರಾಕ್ಷಸೀ ಕ್ರೌರ್ಯ ಮೆರೆದಿದ್ದಾನೆ. ಅಳಿಯನ ರಾಕ್ಷಸಿ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Loading...
Unable to load recommendations.
Follow Us