ಸೌಜನ್ಯ ಪ್ರಕರಣ: ಅದೊಂದು ರಿಪೋರ್ಟ್ ನಲ್ಲಿದೆ ಸೌಜನ್ಯ ಸಾವಿನ ರಹಸ್ಯ! ಡಿಎನ್‌ಎ ವರದಿ ಮೂಲಕ ಗುಟ್ಟು ಬೇಧಿಸಲು ಎಸ್​ಐಟಿ ಸಿದ್ಧ

Edited By:

Updated on: Nov 04, 2026 | 9:55 AM

ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಯಲ್ಲಿ, 14 ವರ್ಷಗಳ ಹಿಂದೆ ಸಂಗ್ರಹಿಸಿದ ವೆಜಿನಲ್ ಸ್ವಾಬ್ ವರದಿಗಾಗಿ ವಿಶೇಷ ತನಿಖಾ ದಳ (SIT) ಕಾಯುತ್ತಿದೆ. ಮರುಪರೀಕ್ಷೆಗಾಗಿ ಕಳುಹಿಸಲಾಗಿರುವ ಈ ವರದಿಯಲ್ಲಿ ಆರೋಪಿಗಳ ಡಿಎನ್‌ಎ ಪತ್ತೆಯಾಗುವ ಸಾಧ್ಯತೆಯಿದ್ದು, ಪ್ರಕರಣದ ನಿಖರ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದು ಸೌಜನ್ಯ ಸಾವಿನ ರಹಸ್ಯವನ್ನು ಭೇದಿಸುವ ಭರವಸೆ ಮೂಡಿಸಿದೆ.

ಮಂಗಳೂರು, ನವೆಂಬರ್ 4: ಸೌಜನ್ಯ ಕೊಲೆ ಪ್ರಕರಣದ ಮರುತನಿಖೆ ಪ್ರಸ್ತುತ ನಡೆಯುತ್ತಿದ್ದು, ಪ್ರಕರಣದ ಸಂಪೂರ್ಣ ವಿವರಗಳನ್ನು ವಿಶೇಷ ತನಿಖಾ ದಳ (SIT) ಕಲೆಹಾಕುತ್ತಿದೆ. ಸೌಜನ್ಯ ಸಾವಿನ ರಹಸ್ಯವು ಮಹತ್ವದ ವರದಿಯೊಂದರಲ್ಲಿ ಅಡಗಿದೆ ಎಂದು ತನಿಖಾ ತಂಡ ಭಾವಿಸಿದ್ದು, 14 ವರ್ಷಗಳ ಹಿಂದೆ ಸಂಗ್ರಹಿಸಲಾದ ವೆಜಿನಲ್ ಸ್ವಾಬ್ ವರದಿಗಾಗಿ ಕಾಯುತ್ತಿದೆ. 2012ರ ಅಕ್ಟೋಬರ್ 10ರಂದು ಖಾಕಿ ಪಡೆ ಈ ಸ್ವಾಬ್ ಮಾದರಿಯನ್ನು ಸಂಗ್ರಹಿಸಿತ್ತು. ಬೆಳ್ತಂಗಡಿ ಠಾಣೆ ಪೊಲೀಸರು ಅಕ್ಟೋಬರ್ 20ರಂದು ಇದನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಆಗ ಫಂಗಸ್ ಬಂದಿದೆ ಎಂಬ ವರದಿ ಬಂದಿತ್ತು. ಆದರೆ, ಈಗ ಅದೇ ಸ್ವಾಬ್ ಮಾದರಿಯನ್ನು ಮರುಪರೀಕ್ಷೆಗಾಗಿ ರವಾನಿಸಲಾಗಿದೆ. ಈ ಮರುಪರೀಕ್ಷೆಯನ್ನು ಫಂಗಸ್ ಬಂದಿದ್ದರೂ ಡಿಎನ್‌ಎ ಪರೀಕ್ಷೆ ಮಾಡಿ ಪತ್ತೆಹಚ್ಚುವ ಸಾಮರ್ಥ್ಯ ಹೊಂದಿರುವ ಹೈದರಾಬಾದ್​​ನ ಅತ್ಯಾಧುನಿಕ ಪ್ರಯೋಗಾಲಯದಲ್ಲಿ ನಡೆಸಲಾಗುತ್ತಿದೆ.

ಕಳೆದ ಏಳೆಂಟು ದಿನಗಳ ಹಿಂದೆಯೇ ತನಿಖಾ ತಂಡ ಈ ಮಾದರಿಯನ್ನು ಮರುಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದೆ. ವರದಿ ಬಂದಲ್ಲಿ, ಅದರಲ್ಲಿ ಆರೋಪಿಗಳ ಡಿಎನ್‌ಎ ಪತ್ತೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಡಿಎನ್‌ಎಯನ್ನು ಈಗಿನ ಆರೋಪಿಗಳಿಗೆ ಹೊಂದಿಸಿ ತನಿಖೆಯನ್ನು ಮುಂದುವರಿಸಲಿದೆ. ಮರುತನಿಖೆಯ ಸಂದರ್ಭದಲ್ಲಿ ಹಲವು ಹೊಸ ಮಾಹಿತಿಗಳು ಹೊರಬೀಳುತ್ತಿದ್ದು, ಈ ವರದಿಯಿಂದ ಸೌಜನ್ಯ ಸಾವಿನ ರಹಸ್ಯ ಬಯಲಾಗುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 04, 2026 09:45 AM
Loading...
Unable to load recommendations.
Follow Us
ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More