‘ಪವಿತ್ರಾ ಗೌಡ ಖಾತೆಗೆ ಸೌಂದರ್ಯಾ ಜಗದೀಶ್ ಹಣ ಹಾಕಿದ್ದು ನಿಜ’: ಸುರೇಶ್
ದರ್ಶನ್ ಗೆಳತಿ ಪವಿತ್ರಾ ಗೌಡ ಅವರಿಗೆ ನಿರ್ಮಾಪಕ ಸೌಂದರ್ಯಾ ಜಗದೀಶ್ 2 ಕೋಟಿ ರೂಪಾಯಿ ಹಣ ನೀಡಿದ್ದರು. ಈ ಬಗ್ಗೆ ಜಗದೀಶ್ ಅವರ ಬಿಸ್ನೆಸ್ ಪಾರ್ಟ್ನರ್ ಸುರೇಶ್ ಅವರು ಮಾತನಾಡಿದ್ದಾರೆ. ‘ಅದು ಜಗದೀಶ್ ಅವರ ಸ್ವಂತ ಹಣ. ಅವರ ಖಾತೆಯಿಂದಲೇ ಹೋಗಿದೆ. ಬ್ಯಾಲೆನ್ಸ್ ಶೀಟ್ ಇದೆ. ಅವರೇ ಸಹಿ ಹಾಕಿದ್ದಾರೆ’ ಎಂದು ಸುರೇಶ್ ಹೇಳಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡು ನಿಧನರಾಗುವುದಕ್ಕೂ ಮುನ್ನ ನಿರ್ಮಾಪಕ ಸೌಂದರ್ಯಾ ಜಗದೀಶ್ ಅವರು ನಟಿ ಪವಿತ್ರಾ ಗೌಡಗೆ 2 ಕೋಟಿ ರೂಪಾಯಿ ನೀಡಿದ್ದರು ಎಂಬ ವಿಚಾರ ನಂತರ ಬೆಳಕಿಗೆ ಬಂತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಜಗದೀಶ್ ಅವರ ಬಿಸ್ನೆಸ್ ಪಾರ್ಟ್ನರ್ ಆದ ಸುರೇಶ್ ಅವರು ಸ್ಪಷ್ಟನೆ ನೀಡಿದ್ದಾರೆ. ‘ಪವಿತ್ರಾ ಗೌಡ ಸೇರಿದಂತೆ 37 ಜನರಿಂದ ಜಗದೀಶ್ಗೆ ಹಣ ಬರಬೇಕಿತ್ತು. ಅದರಲ್ಲಿ ಪವಿತ್ರಾ ಗೌಡ ಹೆಸರು ಹೈಲೈಟ್ ಆಗಿದೆ ಅಷ್ಟೇ’ ಎಂದಿದ್ದಾರೆ ಸುರೇಶ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.