ನಿಲುವಳಿ ಸೂಚನೆಗಳ ಬಗ್ಗೆ ವಿಧಾನ ಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದಲ್ಲಿ ವಿಸ್ತೃತವಾಗಿ ಮಾತಾಡಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 16, 2022 | 6:58 PM

ಗಲಾಟೆ ಕಮ್ಮಿಯಾದ ಬಳಿಕ ಮಾತಾಡಲಾರಂಭಿಸುವ ಸ್ಪೀಕರ್ ತಮ್ಮ ಬಳಿಯಿದ್ದ ನಿಯಮಾವಳಿಗಳ ಪುಸ್ತಕವನ್ನು ತೋರಿಸಿ ತಾನು ಅದರಂತೆ ನಡೆದುಕೊಂಡಿದ್ದರೆ ಯಾವ ನಿಲುವಳಿ ಸೂಚನೆಯು ಅಡ್ಮಿಟ್ ಅಗಲಿಕ್ಕಿಲ್ಲ ಅಂತ ಹೇಳುತ್ತಾರೆ.

ವಿಧಾನ ಮಂಡಲ ಬುಧವಾರದ ಕಾರ್ಯಕಲಾಪಗಳಲ್ಲಿ ನಿಲುವಳಿ ಸೂಚನೆಗಳನ್ನು ಅಡ್ಮಿಟ್ ಮಾಡುವ ಬಗ್ಗೆ ಉಂಟಾದ ಗೊಂದಲ ಮತ್ತು ಗಲಾಟೆ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರು ಆಡಳಿತ ಮತ್ತು ವಿರೋದ ಪಕ್ಷದ ಸದಸ್ಯರಿಗೆ ಒಂದಷ್ಟು ವಿಷಯಗಳನ್ನು ಸ್ಪಷ್ಟಪಡಿಸಿದರು. ನಿಲುವಳಿ ಸೂಚನೆಗೆ (adjournment motion) ವಿರೋಧ ಪಕ್ಷದ ನಾಯಕರು (Leader of Opposition) ಮತ್ತು ಉಪನಾಯಕರು ಸಹಿ ಹಾಕಿ ಒಂದು ನೋಟೀಸನ್ನ ತಮಗೆ ನೀಡಿದ್ದು, ಸದರಿ ನೋಟೀಸ್ಗೆ ತಾನು ಪ್ರಿಲಿಮಿನರಿ ಸಬ್ ಮಿಷನ್ ಗೆ ಆವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲೇ ಯುಟಿ ಖಾದರ್ ಅವರು ಮಾತಾಡಿದ್ದಾರೆ ಎಂದು ಸ್ಪೀಕರ್ ಹೇಳಿದರು. ಅದರೆ ಅದು ಪ್ರಿಲಿಮಿನರಿ ಸಬ್ ಮಿಷನ್ ವ್ಯಾಪ್ತಿಗೆ ಬರೋದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ ಇದಕ್ಕೆ ಅವಕಾಶ ನೀಡುವ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ. ಸದ್ಯ ವಿಷಯ ಎರಡರ ನಡುವೆ ಇದೆ, ಅವರು ಪ್ರಸ್ತಾಪ ಮಾಡಬೇಕು ಅಂತಿದ್ದಾರೆ ಕಾನೂನು ಸಚಿವರು ನಿಲುವಳಿ ವ್ಯಾಪ್ತಿಗೆ ಬರಲ್ಲ ಅಂತಿದ್ದಾರೆ. ಇದು ನಿಲುವಳಿ ವ್ಯಾಪ್ತಿಗೆ ಬರಲ್ಲ ಅಂತ ಎಲ್ಲರಿಗೂ ಗೊತ್ತಿರುವ ವಿಚಾರವೇ ಅಂತ ಕಾಗೇರಿ ಅವರು ಹೇಳುತ್ತಾರೆ.

ಆಗ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಎದ್ದುನಿಂತು ಏನನ್ನೋ ಹೇಳಲು ಪ್ರಯತ್ನಿಸುತ್ತಾರೆ. ಮಾಧುಸ್ವಾಮಿಯವರು ಅದನ್ನೆಲ್ಲ ಕೇಳೋದಿಕ್ಕೆ ನೀವ್ಯಾರು ಅಂತ ದಬಾಯಿಸುತ್ತ್ತಾರೆ. ಒಂದೆರಡು ನಿಮಿಷಗಳ ಕಾಲ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗುತ್ತದೆ. ಸಚಿವರು ಇದಕ್ಕೆಲ್ಲ ಅವಕಾಶ ನೀಡಬಾರದಿತ್ತು ಮತ್ತು ವಿಷಯಗಳನ್ನು ಸ್ಕ್ರುಟಿನೈಸ್ ಮಾಡಬೇಕು ಅಂತ ಅದಕ್ಕೇ ಹೇಳಿದ್ದು ಎಂದು ಸ್ಪೀಕರ್ ಅವರಿಗೆ ಹೇಳುತ್ತಾರೆ.

ಗಲಾಟೆ ಕಮ್ಮಿಯಾದ ಬಳಿಕ ಮಾತಾಡಲಾರಂಭಿಸುವ ಸ್ಪೀಕರ್ ತಮ್ಮ ಬಳಿಯಿದ್ದ ನಿಯಮಾವಳಿಗಳ ಪುಸ್ತಕವನ್ನು ತೋರಿಸಿ ತಾನು ಅದರಂತೆ ನಡೆದುಕೊಂಡಿದ್ದರೆ ಯಾವ ನಿಲುವಳಿ ಸೂಚನೆಯು ಅಡ್ಮಿಟ್ ಅಗಲಿಕ್ಕಿಲ್ಲ ಅಂತ ಹೇಳುತ್ತಾರೆ. ಹೆಚ್ ಡಿ ಕುಮಾರಸ್ವಾಮಿ ಅವರು ನೀಡಿದ ಸೂಚನೆ ನಿಲುವಳಿಗೆ ಬರಲ್ಲ. ಆದರೂ ಅದನ್ನು 69ಕ್ಕೆ ಕನ್ವರ್ಟ್ ಮಾಡಿಕೊಡಲಾಯಿತು ಎಂದು ಕಾಗೇರಿ ಹೇಳುತ್ತಾರೆ.

ಲಾಗಾಯ್ತಿನಿಂದಲೂ ಪ್ರತಿಪಕ್ಷಗಳು ನಿಲುವಳಿ ಸೂಚನೆಗಳನ್ನು ಕೊಡುವುದು ರೂಢಿಯಲ್ಲಿದೆ. ಅದನ್ನು ಪ್ರಿಲಿಮಿನರಿ ಸಬ್ ಮಿಷನ್ ಗೆ ನೀಡುವುದು ಇಲ್ಲವೇ ತಿರಸ್ಕರಿಸುವುದು ಸ್ಪೀಕರ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ. ನಾನು ನಿಯಮಗಳ ಪ್ರಕಾರ ಹೋದರೆ, ಸದಸ್ಯರಿಗೆ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಅವಕಾಶ ಸಿಗದಂತಾಗುತ್ತದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಇದನ್ನೂ ಓದಿ: ಕಂಪ್ಲಿ ಸಕ್ಕರೆ ಕಾರ್ಖಾನೆ ಬಗ್ಗೆ ಶಾಸಕ ಗಣೇಶ್ ಪುನಃ ಪ್ರಸ್ತಾಪಿಸಿದಾಗ ಸಚಿವ ಮಾಧುಸ್ವಾಮಿ ವಸ್ತುಸ್ಥಿತಿಯನ್ನು ಸದನಕ್ಕೆ ವಿವರಿಸಿದರು

Published on: Mar 16, 2022 06:57 PM