‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’

| Updated By: ಮದನ್​ ಕುಮಾರ್​

Updated on: Jun 27, 2024 | 7:31 PM

ಪರಪ್ಪನ ಅಗ್ರಹಾರ ಜೈಲಿನ ಬಳಿ ಬರುವ ದರ್ಶನ್​ ಅಭಿಮಾನಿಗಳ ಸಂಖ್ಯೆ ಜಾಸ್ತಿ ಆಗಿದೆ. ದರ್ಶನ್​ ಅವರನ್ನು ನೋಡಬೇಕು ಎಂದು ಎಲ್ಲ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾರಿಗೂ ದರ್ಶನ್​ ಭೇಟಿಗೆ ಅವಕಾಶ ಸಿಗುತ್ತಿಲ್ಲ. ಹಾಗಿದ್ದರೂ ಕೂಡ ಅಭಿಮಾನಿಗಳು ಹಠ ಮಾಡುತ್ತಿದ್ದಾರೆ. ಎಲ್ಲರೂ ದರ್ಶನ್​ ಪರವಾಗಿ ಮಾತನಾಡುತ್ತಿದ್ದಾರೆ.

ನಟ ದರ್ಶನ್​ ಅವರಿಗೆ ಇರುವ ಅಭಿಮಾನಿ (Darshan Fans) ಬಳಗ ತುಂಬ ದೊಡ್ಡದು. ಅವರೆಲ್ಲರಿಗೂ ಈಗ ಬೇಸರ ಆಗಿದೆ. ರೇಣುಕಾ ಸ್ವಾಮಿ (Renuka Swamy) ಕೊಲೆ ಆರೋಪದಲ್ಲಿ ದರ್ಶನ್​ ಜೈಲು ಸೇರಿದ ನಂತರ ಅನೇಕ ಅಭಿಮಾನಿಗಳು ಜೈಲಿನ ಬಳಿ ಬರುತ್ತಿದ್ದಾರೆ. ದರ್ಶನ್​ ಅವರನ್ನು ನೋಡಬೇಕು ಎಂಬುದೇ ಎಲ್ಲ ಅಭಿಮಾನಿಗಳ ಬೇಡಿಕೆ. ಈ ಮೊದಲು ದರ್ಶನ್​ ಅವರು ವಿಶೇಷಚೇತನ ಅಭಿಮಾನಿಯ ಮನೆಯವರಿಗೆ ಆಟೋ ರಿಕ್ಷಾ ಕೊಡಿಸಿದ್ದರು. ಆ ಮೂಲಕ ಅವರ ಕುಟುಂಬಕ್ಕೆ ನೆರವಾಗಿದ್ದರು. ದರ್ಶನ್​ (Darshan) ಜೈಲು ಸೇರಿದ ನಂತರ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ ಎಂದು ವಿಶೇಷ ಚೇತನ ಅಭಿಮಾನಿಯ ತಂದೆ ಹೇಳಿದ್ದಾರೆ. ‘ರೇಣುಕಾ ಸ್ವಾಮಿ ಮಾಡಿದ ತಪ್ಪಿಗೆ ದರ್ಶನ್​ ಅವರು ತಕ್ಕ ಶಿಕ್ಷೆ ನೀಡಿದ್ದಾರೆ’ ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ. ಆ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.