ತ್ಯಾಗದ ಮನೋಭಾವ ಸಮಾಜದಲ್ಲಿ ಕಡಿಮೆಯಾಗಿದೆ, ಕೇವಲ ಕಾಂಗ್ರೆಸ್ಸಿಗರಲ್ಲಿ ಮಾತ್ರ ಅಲ್ಲ: ಪರಮೇಶ್ವರ್
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಬಗ್ಗೆ ಮಾತಾಡಿದ ಪರಮೇಶ್ವರ್, ಅವುಗಳ ವಂಚನೆಯಿಂದ ಜನಸಾಮಾನ್ಯರು ತೊಂದರೆಗೀಡಾಗುತ್ತಿದ್ದಾರೆ ಮತ್ತು ಪ್ರಾಣಗಳನ್ನೂ ಕಳೆದುಕೊಳ್ಳುತ್ತಿದ್ದಾರೆ, ಅರ್ಥಿಕ ಇಲಾಖೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಾಗಲೇ ಸಮಸ್ಯೆಗಳು ಆರಂಭವಾಗುತ್ತವೆ, ಹಲವಾರು ಹಣಕಾಸು ಸಂಸ್ಥೆಗಳು ಲೈಸೆನ್ಸ್ ಸಹ ಹೊಂದಿರುವುದಿಲ್ಲ, ಅವುಗಳನ್ನು ನಿಯಂತ್ರಿಸುವ ಕೆಲಸ ಸರ್ಕಾರ ಮಾಡಲಿದೆ ಎಂದರು.
ತುಮಕೂರು: ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ ರಾಜಕೀಯಕ್ಕೆ ಸಂಬಂಧಿಸಿದ ಹೇಳಿಕೆಗಳನ್ನು ನೀಡಲು ನಿರಾಕರಿಸಿದರು. ಆದರೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತ್ಯಾಗ ಮನೋಭಾವನೆ ಕುರಿತು ನೀಡಿದ ಹೇಳಿಕೆಗೆ ವ್ಯಾಖ್ಯಾನ ನೀಡಿದರು. ಅವರು ಹೇಳಿದ್ದು ನನಗೂ ಅರ್ಥವಾಗಿಲ್ಲ ಎಂದು ಮಾತು ಶುರುಮಾಡುವ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ಸಿಗರಲ್ಲಿದ್ದ ತ್ಯಾಗದ ಮನೋಭಾವನೆ ಬಗ್ಗೆ ಖರ್ಗೆ ಅವರು ಮಾತಾಡಿರಬಹುದು, ಮೋತಿಲಾಲ್ ನೆಹರೂರವರು ತಮ್ಮ ಇಡೀ ಆಸ್ತಿಯನ್ನು ದಾನ ಮಾಡಿದ್ದರು, ಈಗಿನ ಸಮಾಜದಲ್ಲಿ ತ್ಯಾಗದ ಮನೋಭಾವನೆ ಕಮ್ಮಿಯಾಗಿದೆ, ಕೇವಲ ಕಾಂಗ್ರೆಸ್ಸಿಗರನ್ನು ದೂರುವುದು ಸರಿಯಲ್ಲ ಎಂದು ಪರಮೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನನಗೆ ಇಂಥ ಸ್ಥಿತಿ ಎದುರಾದಾಗ ಸಚಿವ ಸ್ಥಾನ ಬಿಟ್ಟು ಪಕ್ಷದ ಅಧ್ಯಕ್ಷಗಿರಿ ಆಯ್ದುಕೊಂಡಿದ್ದೆ: ಜಿ ಪರಮೇಶ್ವರ್
Latest Videos