Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮಲಲ್ಲಾ ವಿಗ್ರಹ ಕೆತ್ತಲು ಶಿಲೆ ಸಿಕ್ಕ ಮೈಸೂರು ಬಳಿಯ ಜಾಗದಲ್ಲಿ ಶಾಸಕ ಮತ್ತು ಸ್ಥಳೀಯರಿಂದ ಪೂಜೆ

ರಾಮಲಲ್ಲಾ ವಿಗ್ರಹ ಕೆತ್ತಲು ಶಿಲೆ ಸಿಕ್ಕ ಮೈಸೂರು ಬಳಿಯ ಜಾಗದಲ್ಲಿ ಶಾಸಕ ಮತ್ತು ಸ್ಥಳೀಯರಿಂದ ಪೂಜೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 22, 2025 | 1:07 PM

ಅಯೋಧ್ಯೆಯಿಂದ ಮಣ್ಣನ್ನು ತಂದು ಶಿಲೆಸಿಕ್ಕ ಜಾಗದಲ್ಲಿ ಹಾಕಿರುವುದರಿಂದ ಪುಣ್ಯಭೂಮಿಯ ಪಾವಿತ್ರ್ಯತೆ ಮತ್ತಷ್ಟು ಹೆಚ್ಚದೆ. ಇವತ್ತು ನಡೆದ ಪೂಜಾ ಸಂಸ್ಕಾರಗಳಲ್ಲಿ ಹಾರೋಹಳ್ಳಿ ಮತ್ತು ಗುಜ್ಜೇಗೌಡನಪುರ ಗ್ರಾಮಗಳ ನಿವಾಸಿಗಳು ಸಹ ಭಾಗಿಯಾಗಿದ್ದರು. ಕಳೆದ ವರ್ಷವೂ ಇಲ್ಲಿ ಪೂಜೆಯನ್ನು ನೆರವೇರಿಸಲಾಗಿತ್ತು. ಇದೇ ಜಾಗದಲ್ಲಿ ಒಂದು ಭವ್ಯವಾದ ರಾಮಮಂದಿರ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಮೈಸೂರು: ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯಾಗಿ ಒಂದು ವರ್ಷ ಕಳೆದಿದೆ. ಅಲ್ಲಿ ನಿರ್ಮಾಣಗೊಂಡಿರುವ ಮಂದಿರದಲ್ಲಿ ರಾಮಲಲ್ಲಾನ ವಿಗ್ರಹ ಪ್ರತಿಷ್ಠಾಪನೆ ಕುರಿತು ಹೇಳುವುದಾದರೆ ಕನ್ನಡಿಗರು ಮತ್ತು ಕರ್ನಾಟಕದ ಕೊಡುಗೆ ದೊಡ್ಡದು. ಬಾಲರಾಮ ಮೂರ್ತಿ ನಿರ್ಮಿಸಲು ಇದೇ ಜಮೀನಲ್ಲಿ ಶಿಲೆ ಸಿಕ್ಕಿದ್ದು ವಿಗ್ರಹವನ್ನು ಕೆತ್ತಿದ್ದು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್. ಶಿಲೆ ದೊರೆತ ಭೂಮಿಯನ್ನು ಪವಿತ್ರ ಭೂಮಿ ಎಂದೇ ಕರೆಯಲಾಗುತ್ತದೆ. ಮೈಸೂರು ತಾಲ್ಲೂಕಿನ ಹಾರೋಹಳ್ಳಿಯಲ್ಲಿರುವ ಜಮೀನು ರಾಮ್​ದಾಸ್ ಅನ್ನುವವರಿಗೆ ಸೇರಿದ್ದು. ರಾಮಮಂದಿರ ನಿರ್ಮಾಣಗೊಂಡು ಒಂದು ವರ್ಷ ಸಂದಿರುವ ಹಿನ್ನೆಲೆಯಲ್ಲಿ ಇವತ್ತು ಚಾಮುಂಡೇಶ್ವರಿ ಶಾಸಕ ಜಿಟಿ ದೇವೇಗೌಡ ನೇತೃತ್ವದಲ್ಲಿ ಪವಿತ್ರ ಭೂಮಿಯಲ್ಲಿ ಪೂಜೆ ನೆರವೇರಿಸಲಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ: ಬೆಂಗಳೂರಿನಿಂದ ಘಂಟೆ, ಪೂಜಾ ಸಾಮಾಗ್ರಿ ರವಾನೆ