ಬಾಗಲಕೋಟೆಯಲ್ಲಿ ಎದೆ ಝಲ್ ಎನಿಸುವ ಟ್ಯ್ರಾಕ್ಟರ್ ರೇಸ್: ವಿಡಿಯೋ ನೋಡಿ
ಆ ಹಳ್ಳಿಯಲ್ಲಿ ಹಳ್ಳಿಯಲ್ಲಿ ಡೆಡ್ಲಿ ಟ್ರ್ಯಾಕ್ಟರ್ ರೇಸ್ ಆಯೋಜಿಸಲಾಗಿತ್ತು. ಈ ರೇಸ್ ನೋಡುವುದಕ್ಕೂ ಗುಂಡಿಗೆ ಗಟ್ಟಿಯಿರಬೇಕು. ರಸ್ತೆ ಬಿಟ್ಟು ಮೇಲಕ್ಕೆ ಹಾರುವ ಗಾಲಿಗಳು, ದೂಳೆಬ್ಬಿಸುವ ಚಕ್ರಗಳು. ಅಬ್ಬಾ ನೋಡುವುದೇ ಒಂದು ರೋಮಾಂಚನಕಾರಿ ದೃಶ್ಯ. ಟ್ರ್ಯಾಕ್ಟರ್ ರೇಸ್ ನಡೆದದ್ದು ಎಲ್ಲಿ? ವಿಡಿಯೋ ನೋಡಿ.
ಬಾಗಲಕೋಟೆ ತಾಲ್ಲೂಕಿನ ಬೆನಕಟ್ಟಿ ಗ್ರಾಮದಲ್ಲಿ ವೇಮನ ಜಯಂತಿ ಪ್ರಯುಕ್ತ ಟ್ರ್ಯಾಕ್ಟರ್ ರೇಸ್ ಸ್ಪರ್ಧೆ ಆಯೋಜಿಸಲಾಗಿತ್ತು. ಎರಡು ಟ್ರ್ಯಾಕ್ಟರ್ಗಳನ್ನು ಹಿಂಬದಿ ಜೋಡಿಸಿ, ಹಗ್ಗಜಗ್ಗಾಟದಂತೆ ಓಡಿಸುವ ಸ್ಪರ್ಧೆ ರಣರೋಚಕವಾಗಿತ್ತು. ಟ್ರ್ಯಾಕ್ಟರ್ನ ಮುಂದಿನ ಗಾಲಿಗಳು ಮೇಲಕ್ಕೆ ಎದ್ದಿದ್ದರೂ ಚಾಲಕರು ಚಲಾಯಿಸುತ್ತಾ ಸಾಹಸ ತೋರಿದರು.
ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಈತರಹದ ರೇಸ್ ಆಯೋಜಿಲಾಗಿದ್ದು, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಂದ ಟ್ರ್ಯಾಕ್ಟರ್ಗಳು ಬಂದಿದ್ವು. ರೇಸ್ಗೆ ಮೊದಲ ನಾಲ್ಕು ಸ್ಥಾನ ಪಡೆದವರಿಗೆ ಬಹುಮಾನ ನೀಡಲಾಯ್ತು. ಈ ರೇಸ್ ನೋಡೋದಕ್ಕೆ ಸಾವಿರಾರು ಜನ ಸೇರಿದ್ದರು. ಟ್ರ್ಯಾಕ್ಟರ್ ರೇಸ್ ಕಂಡು ನೆರದಿದ್ದ ಜನರು ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು. ಜಾತ್ರೆ ಪ್ರಯುಕ್ತ ನಡೆದ ರೇಸ್ ನೋಡುಗರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು.
Latest Videos