ಬಿಗ್ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
Bigg Boss Kannada Season 11: ಬಿಗ್ಬಾಸ್ ಕನ್ನಡ ಸೀಸನ್ 11ರ ಫಿನಾಲೆ ವಾರ ನಡೆಯುತ್ತಿದೆ. ಈ ವಾರ ಬಿಗ್ಬಾಸ್ ಮನೆಗೆ ಒಬ್ಬರ ಹಿಂದೊಬ್ಬರು ಅತಿಥಿಗಳು ಬರುತ್ತಲೇ ಇದ್ದಾರೆ. ಇದೀಗ ಡಿವೋರ್ಸ್ ವಕೀಲೆಯೊಬ್ಬರು ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಈ ಡಿವೋರ್ಸ್ ವಕೀಲೆ ವ್ಯಕ್ತಿಗಳ ಬೇರ್ಪಡಿಸುವ ವಕೀಲೆ ಅಲ್ಲ ಬದಲಿಗೆ ಜನರನ್ನು ಸೇರಿಸುವ ವಕೀಲೆ.
ಬಿಗ್ಬಾಸ್ ಕನ್ನಡ ಸೀಸನ್ 11ರ ಫಿನಾಲೆ ವಾರ ನಡೆಯುತ್ತಿದೆ. ಕಡೆಯ ವಾರ ಹೆಚ್ಚಿನ ಗಲಾಟೆ, ಟಾಸ್ಕ್ಗಳ ಜಂಜಾಟ ಇಲ್ಲ. ಬದಲಿಗೆ ಒಬ್ಬರ ಹಿಂದೊಬ್ಬರು ಅತಿಥಿಗಳು ಮನೆಗೆ ಬರುತ್ತಲೇ ಇದ್ದಾರೆ. ಮನೆಯ ಸದಸ್ಯರು ಸಹ ಬಂದ ಅತಿಥಿಗಳೊಟ್ಟಿಗೆ ಹರಟೆ ಹೊಡೆಯುತ್ತಾ ತಮಾಷೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಬಿಗ್ಬಾಸ್ನ ಇಷ್ಟು ದಿನದ ಪಯಣದಲ್ಲಿ ಸ್ಪರ್ಧಿಗಳು ಒಬ್ಬರ ಬಗ್ಗೆ ಇನ್ನೊಬ್ಬರು ದ್ವೇಷ, ಸಿಟ್ಟುಗಳನ್ನು ಬೆಳೆಸಿಕೊಂಡಿದ್ದಾರೆ. ಇದೀಗ ಬಿಗ್ಬಾಸ್ ಮನೆಗೆ ಡೈವರ್ಸ್ ಲಾಯರ್ ಒಬ್ಬರ ಆಗಮನ ಆಗಿದೆ. ಆದರೆ ಇವರು ವ್ಯಕ್ತಿಗಳನ್ನು ಬೇರ್ಪಡಿಸುವ ವಕೀಲರಲ್ಲ ಬದಲಿಗೆ ಮನಸ್ಸುಗಳನ್ನು ಜೋಡಿಸುವ ವಕೀಲರು. ಸಿಟ್ಟು ಮಾಡಿಕೊಂಡು ಜಗಳ ಆಡಿದ್ದ ರಜತ್-ಮಂಜು, ತ್ರಿವಿಕ್ರಮ್-ಮೋಕ್ಷಿತಾ ನಡುವೆ ಸಂಧಾನ ಮಾಡಿದ್ದಾರೆ. ಈ ಸಂಧಾನ ಕಾರ್ಯ ಯಶಸ್ವಿ ಆಯಿತೆ?
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos