ಯಲ್ಲಾಪುರ ಲಾರಿ ದುರಂತ: ಸವಣೂರಲ್ಲಿ ಅನಿರೀಕ್ಷಿತ ಸೂತಕ, ಒಂದೇ ಸಮನೆ ಗೋಳಾಡುತ್ತಿರುವ ಮೃತರ ಕುಟುಂಬಗಳು

ಯಲ್ಲಾಪುರ ಲಾರಿ ದುರಂತ: ಸವಣೂರಲ್ಲಿ ಅನಿರೀಕ್ಷಿತ ಸೂತಕ, ಒಂದೇ ಸಮನೆ ಗೋಳಾಡುತ್ತಿರುವ ಮೃತರ ಕುಟುಂಬಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 22, 2025 | 4:59 PM

ಸವಣೂರು ಪಟ್ಟಣದಲ್ಲಿ ಇಂದು ಜವರಾಯ ಕೇಕೆ ಹಾಕುತ್ತಿದ್ದಾನೆ. ಸತ್ತವರೆಲ್ಲ ಚಿಕ್ಕವಯಸ್ಸಿನವರೇ. ಅಸ್ಲಂ ಕುಟುಂಬದಂತೆಯೇ ಇತರ 9 ಕುಟುಂಬಗಳು ಶೋಕಸಾಗರದಲ್ಲಿ ಮುಳುಗಿವೆ. ಒಬ್ಬನ ಪತ್ನಿ ಈಗ ಗರ್ಭಿಣಿಯಂತೆ, ಮತ್ತೊಬ್ಬ ತನ್ನ ವೃದ್ಧ ತಂದೆತಾಯಿಗಳನ್ನು ಅಗಲಿದ್ದಾನೆ. ಪ್ರತಿವಾರದಂತೆ ಈ ವಾರವೂ ಕುಮಟಾ ಸಂತೆಗೆ ಲಾರಿಯಲ್ಲಿ ತರಕಾರಿ ತೆಗೆದುಕೊಂಡು ಹೋಗುವಾಗ ದುರಂತ ಸಂಭವಿಸಿದೆ.

ಹಾವೇರಿ: ಇಂದು ಬೆಳಗ್ಗೆ ತರಕಾರಿ ಲಾರಿ ಪಲ್ಟಿಯಾಗಿ 10 ಜನ ಮೃತಪಟ್ಟವರಲ್ಲಿ ಸವಣೂರು ಪಟ್ಟಣದ ಅಸ್ಲಂ ಕೂಡ ಒಬ್ಬರು. ಇದು ಅವರ ಮನೆ ಮತ್ತು ಕುಟುಂಬದ ಸದಸ್ಯರೆಲ್ಲ ರೋದಿಸುತ್ತಿದ್ದಾರೆ. ಅಸ್ಲಂಗೆ ಮದುವೆಯಾಗಿ ಕೇವಲ 4 ತಿಂಗಳು ಮಾತ್ರ ಆಗಿತ್ತು. ಕ್ರೂರ ವಿಧಿ ಅಸ್ಲಂ ಪತ್ನಿಗೆ ಆಗಲೇ ವಿಧವೆ ಪಟ್ಟ ಕಟ್ಟಿಬಿಟ್ಟಿದ್ದಾನೆ. ಅಪಘಾತದಲ್ಲಿ ಮಡಿದವರೆಲ್ಲ ಸವಣೂರಿನ ತರಕಾರಿ ವ್ಯಾಪಾರಸ್ಥರು. ಅಸ್ಲಂ ಪತ್ನಿಗೆ ಅತ್ತು ಕಣ್ಣೀರು ಬತ್ತಿ ಹೋಗಿದೆ. ನಮ್ಮ ವರದಿಗಾರ ಕೇಳುವ ಪ್ರಶ್ನೆಗೆ ಅವರು ಯಾಂತ್ರಿಕವಾಗಿ ಉತ್ತರ ನೀಡುತ್ತಾರೆ. ಅಸ್ಲಂ ತಾಯಿಗೆ ಕಣ್ಣೀರು ಬತ್ತುತ್ತಿಲ್ಲ, ಇಂದು ಬೆಳಗ್ಗೆ 6 ಗಂಟೆಯಿಂದ ಇಡೀ ಕುಟುಂಬ ಶಾಕ್​ನಲ್ಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಯಲ್ಲಾಪುರ: ಗುಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ, 10 ಜನ ಸಾವು