Temple Tour: ಚಿನ್ನದ ನಾಡನ್ನು ಕಾಯುತ್ತಿದ್ದಾಳೆ ದೇವಿ ಕೋಲಾರಮ್ಮ

| Updated By: preethi shettigar

Updated on: Oct 04, 2021 | 8:13 AM

ರಾಜರುಗಳ ಆಶ್ರಯದಲ್ಲಿ ಜೀರ್ಣೋದ್ಧಾರವಾದ ಸಾಕಷ್ಟು ಮಂದಿರಗಳು ಜನರಲ್ಲಿ ಧನ್ಯತಾ ಭಾವವನ್ನು ಮೂಡಿಸುತ್ತೆ. ಅಂತಾ ಪುಣ್ಯ ಕ್ಷೇತ್ರಗಳಲ್ಲಿ ಒಂದು ಕೋಲಾರದ ಕೋಲಾರಮ್ಮ ದೇವಾಲಯ.

ಮೈಸೂರು ಭಾಗಕ್ಕೆ ಹೇಗೆ ತಾಯಿ ಚಾಮುಂಡಿ ಶ್ರೀರಕ್ಷೆ ಇದೆಯೋ ಅದೆ ರೀತಿ ಕೋಲಾರಕ್ಕೆ ಕಾವಲಾಗಿ ನಿಂತಿದ್ದಾಳೆ ಮಹಾತಾಯಿ ಕೋಲಾರಮ್ಮ. ಗಂಗರು ಮತ್ತು ಚೋಳರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿಗೊಂಡ ಕೋಲಾರಮ್ಮ ದೇವಾಲಯದ ಕಿರು ಪರಿಚಯ ವಿಡಿಯೋದಲ್ಲಿದೆ. ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನಪಡೆದುಕೊಂಡಿರುವ ಸಾಕಷ್ಟು ದೈವ ಮಂದಿರಗಳು, ಪುಣ್ಯಕ್ಷೇತ್ರಗಳು ನಾಡಿನ ನಾನಾ ಭಾಗಗಳಲ್ಲಿವೆ. ರಾಜರುಗಳ ಆಶ್ರಯದಲ್ಲಿ ಜೀರ್ಣೋದ್ಧಾರವಾದ ಸಾಕಷ್ಟು ಮಂದಿರಗಳು ಜನರಲ್ಲಿ ಧನ್ಯತಾ ಭಾವವನ್ನು ಮೂಡಿಸುತ್ತೆ. ಅಂತಾ ಪುಣ್ಯ ಕ್ಷೇತ್ರಗಳಲ್ಲಿ ಒಂದು ಕೋಲಾರದ ಕೋಲಾರಮ್ಮ ದೇವಾಲಯ. ಪ್ರತಿ ವರ್ಷ ಚಾಮುಂಡೇಶ್ವರಿ ತಾಯಿಯ ಜನ್ಮದಿನದಂದೇ ಕೋಲಾರಮ್ಮನಿಗೆ ವಿಶೇಷ ಪೂಜೆ ಮತ್ತು ಜಾತ್ರಾ ಮಹೋತ್ಸವ ನಡೆಯುತ್ತದೆ.