Temple Tour: ಮಹಾತಪಸ್ವಿ ಮಾರ್ಕಂಡೇಯ ಶಿವನಲ್ಲಿ ಐಕ್ಯವಾದ ಸಂಗಮ ಕ್ಷೇತ್ರವಿದು; ಒಮ್ಮೆ ಭೇಟಿ ಕೊಡಿ

| Updated By: preethi shettigar

Updated on: Oct 22, 2021 | 8:00 AM

ಮೃಕಂಡು- ಮನಸ್ಪತಿ ದಂಪತಿಯ ಅಲ್ಪಾಯುಷಿ ಪುತ್ರನಾದ ಮಾರ್ಕಂಡೇಯ ಶಿವನನ್ನು ಕುರಿತು ತಪಸ್ಸು ಮಾಡಿದ ಕ್ಷೇತ್ರವಾಗಿ ಈ ಪೌರಾಣಿಕ ಪರಂಧಾಮ ಗುರುತಿಸಿಕೊಂಡಿದೆ.

ನಮ್ಮ ನೆಲದಲ್ಲಿನ ಕೆಲವು ದೇಗುಲಗಳು ಪೌರಾಣಿಕ ಹಿನ್ನೆಲೆಯನ್ನ ಒಳಗೊಂಡಿರುತ್ತವೆ. ಆ ಪೌರಾಣಿಕ ಹಿನ್ನೆಲೆಯನ್ನ ಕೇಳಿದಾಗ ಒಂದು ಕ್ಷಣಕ್ಕಾದರೂ ಭಕ್ತರು ಅಚ್ಚರಿಗೊಳ್ಳದೆ ಇರುವುದಿಲ್ಲ. ಅಂತಾ ಒಂದು ಕ್ಷೇತ್ರವೇ ಖಾಂಡ್ಯ ಮಾರ್ಕಂಡೇಶ್ವರ ದೇವಾಲಯ. ಸಾವಿರ ವರ್ಷಕ್ಕೂ ಅಧಿಕ ಇತಿಹಾಸ ಹೊಂದಿರುವ ಮಾರ್ಕಂಡೇಶ್ವರ ದೇವಾಲಯವನ್ನ ಆಗಸ್ತ್ಯ ಋಷಿಗಳು ನಿರ್ಮಾಣ ಮಾಡಿರುವ ಬಗ್ಗೆ ಪುರಾಣದಲ್ಲಿ ಉಲ್ಲೇಖ ಇದೆ. ಮೃಕಂಡು- ಮನಸ್ಪತಿ ದಂಪತಿಯ ಅಲ್ಪಾಯುಷಿ ಪುತ್ರನಾದ ಮಾರ್ಕಂಡೇಯ ಶಿವನನ್ನು ಕುರಿತು ತಪಸ್ಸು ಮಾಡಿದ ಕ್ಷೇತ್ರವಾಗಿ ಈ ಪೌರಾಣಿಕ ಪರಂಧಾಮ ಗುರುತಿಸಿಕೊಂಡಿದೆ. ಶಿವನಲ್ಲಿ ಮಾರ್ಕಂಡೇಯ ಐಕ್ಯವಾದಂತಾ ಸಂಗಮ ಕ್ಷೇತ್ರವಾಗಿಯೂ ಈ ಕ್ಷೇತ್ರ ಗುರುತಿಸಿಕೊಂಡಿದೆ.